ವಾಡಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಲು ಮುಂದಾಗಿರುವ ಸ್ಥಳೀಯ ಬಿಜೆಪಿ ನಾಯಕರುಗಳಿಗೆ ಕೊಂಚೂರು ಶ್ರೀಹನುಮಾನ ದೇವಸ್ಥಾನ ಟ್ರಸ್ಟ್ ವತಿಯಿಂದ ೧.೧೧,೧೧೧ ಲಕ್ಷ ರೂ. ಭಕ್ತಿಯ ದೇಣಿಗೆ ದೊರೆತಿದೆ.
ದೇಶದ ಹಿಂದೂಗಳ ಭಕ್ತೀಯ ಕೇಂದ್ರ ಸ್ಥಾನವಾಗಿರುವ ಅಯೋಧ್ಯೆ ನಗರದಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕನಸು ನನಸಾಗುತ್ತಿದೆ. ಮಂದಿರ ಕಟ್ಟಡ ನಿರ್ಮಿಸಲು ದೇಣಿಗೆ ಸಾಗರ ರೂಪದಲ್ಲಿ ಹರಿದುಬರುತ್ತಿದೆ. ಕೊಂಚೂರು ಶ್ರೀಹನುಮಾನ ದೇವಸ್ಥಾನ ಸಮಿತಿಯ ಪದಾಧಿಕಾರಿಗಳಾದ ವಿಜಯಕುಮಾರ ಕುಲಕರ್ಣಿ, ರಾಜುಗೌಡ ಪಾಟೀಲ, ಚನ್ನಬಸಪ್ಪ ಸುಣಗಾರ, ಭೀಮಯ್ಯ ಒಡೆಯರ, ದೇವಣ್ಣ ಜಕ್ಕಳಿ, ದೇವಣ್ಣ ಪೂಜಾರಿ, ಶ್ರೀಮಂತ ತಳವಾರ, ದೇವಿಂದ್ರ ಗುತ್ತೇದಾರ, ರಾಜಶೇಖರ ಮಠಪತಿ, ಮಹೇಶ ಪೂಜಾರಿ ಅವರು ಲಕ್ಷಾಂತರ ರೂ. ದೇಣಿಗೆ ನೀಡುವ ಮೂಲಕ ರಾಮ ಭಕ್ತಿ ಮೆರೆದಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ವೀರಣ್ಣ ಯಾರಿ ಪ್ರತಿಕ್ರೀಯಿಸಿದ್ದಾರೆ.