ಕಲಬುರಗಿ: ಗಗನಕ್ಕೆ ಏರುತ್ತಿರುವ ತೈಲ ಮತ್ತು ಅಡಿಗೆ ಅನಿಲ ಬೆಲೆಯನ್ನು ಜನ ಸಾಮಾನ್ಯರಿಗೆ ಹೊರೆಯಾಗದಂತೆ ಅತಿ ಕಡಿಮೆ ದರದಲ್ಲಿ ಪೂರೈ ಸಲು ಕ್ರಮ ಕೈಗೊಳ್ಳುವಂತೆ ಜÉೈ ಕನ್ನಡಿಗರ ಸೇನೆ ಆಗ್ರಹಿಸಿದೆ.
ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್‍ನಲ್ಲಿ ತೈಲ ಬೆಲೆ ಮತ್ತು ಅಡಿಗೆ ಅನಿಲ ಗ್ಯಾ ಸ್ ಬೆಲೆಗಳ ನಿಯಂತ್ರಿಸುವ ಕುರಿತು ಪ್ರಸ್ತಾವನೆ ಯಾಗದಿರುವುದನ್ನು ಖಂಡಿಸಿರುವ ಸೇನೆ, ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರು ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಲಿದ್ದಾರೆ.
ರಾಜ್ಯ ಸರ್ಕಾರ ಕೂಡಲೇ ಈ ಬೆಲೆ ಏರಿಕೆಯನ್ನು ತಡೆಯಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳಿಸಿಕೊಡ ಬೇಕು ಎಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿ ಭಟನಾ ಪ್ರದರ್ಶನ ಕೈಗೊಳ್ಳಲಾಯಿತು.
ತೈಲದ ಮೇಳೆ ಹಾಕ ಲಾಗುವು ವಿವಿಧ ಸುಂಕ ಹಾಗೂ ತೆರಿಗೆಗಳನ್ನು ಕೈಬಿಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಅಲ್ಲದೇ ರಾಜ್ಯ ಸರ್ಕಾರವು ಕೂಡ ಇವುಗಳ ಮೇಲಿನ ರಾಜ್ಯ ಸುಂಕವನ್ನು ಸಂಪೂರ್ಣವಾಗಿ ಕೈಬಿಡ ಬೇಕು ಎಂದು ಸೇನೆಯ ಸಂಸ್ಥಾಪಕ ಅಧ್ಯಕ್ಷ ದತ್ತು ಎಚ್. ಭಾಸಗಿ ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸುನೀಲ ಪಾಣೆಗಾಂವ, ಶೇಷಗಿರಿ ಮರತೂರಕರ, ಪ್ರಶಾಂತ ಬಾಪುನಗರ, ಸಂಜುಕುಮಾರ ಮಾಳಗಿ, ಸಾಗರ ಸಿಂಗೆ, ಸುನೀಲ ಪವಾರ, ಅಮರ ಯಾದವ ಇದ್ದರು.