ಶಹಾಬಾದ: ತೊನಸನಹಳ್ಳಿ(ಎಸ್) ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಸುಶ್ಮಾ ಮರಲಿಂಗ ಗಂಗಭೋ, ಉಪಾಧ್ಯಕ್ಷರಾಗಿ ರೇಶ್ಮಾ ಮಲ್ಲಿನಾಥ ಕರಣಿಕ್ ಹಾಗೂ ಹೊನಗುಂಟಾ ಗ್ರಾಪಂ ಅಧ್ಯಕ್ಷರಾಗಿ ಭೀಮಬಾಯಿ ಮಲ್ಲಪ್ಪ ಮತ್ತು ಉಪಾಧ್ಯಕ್ಷರಾಗಿ ತಿಪ್ಪಣ್ಣ ಚಡಬಾ ಅಧಿಕಾರ ಸ್ವೀಕರಿಸಿದರು.
ತೊನಸನಹಳ್ಳಿ(ಎಸ್) ಗ್ರಾಪಂ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು, ಗ್ರಾಮದ ಜನರು ತಮ್ಮ ನಂಬಿಕೆ ಇಟ್ಟು ತಮ್ಮನ್ನು ಆಯ್ಕೆ ಮಾಡಿದ್ದಾರೆ. ಅವರ ಭರವಸೆಯನ್ನು ಈಡೇರಿಸುವ ಕೆಲಸ ತಮ್ಮಿಂದಾಗಬೇಕು. ತಮ್ಮ ಗ್ರಾಮ ಎಂಬ ಅಭಿಮಾನ ತಮ್ಮಲ್ಲಿ ಬಂದಾಗ ಮಾತ್ರ ಗ್ರಾಮ ಅಭಿವೃದ್ಧಿಯಾಗಲು ಸಾಧ್ಯ. ಸರ್ವ ಸದಸ್ಯರು ಸೇರಿಕೊಂಡು ಪಕ್ಷಾತೀತವಾಗಿ ಗ್ರಾಮದ ಅಭಿವೃದ್ಧಿಗೆ ಬೇಕಾದ ಅಗತ್ಯ ಮೂಲಭೂತ ಸೌಲಭ್ಯಗಳ ನೀಲಿ ನಕ್ಷೆ ತಯ್ಯಾರಿಸಿ, ಗ್ರಾಮದ ಅಭಿವೃದ್ಧಿಗಾಗಿ ಪಣ ತೊಡಿ.ಅದಕ್ಕೆ ಬೇಕಾದ ಎಲ್ಲಾ ಸಹಕಾರ ನಾನು ತಮಗೆ ನೀಡುತ್ತೆನೆ ಎಂದು ಹೇಳಿದರು.
ಶಹಾಬಾದ ಬಿಜೆಪಿ ಮಂಡಲ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಕೃಷ್ಣ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಪಿಡಿಓ ರಾಜು ಬಾಳಿ, ನಗರಸಭೆ ಸದಸ್ಯ ನಾಗರಾಜ ಕರಣಿಕ್,ದೊಡ್ಡಪ್ಪ ಹೊಸಮನಿ,ನಿಂಗಣ್ಣ ಹುಳಗೋಳಕರ್, ಚನ್ನಪ್ಪ ಕೋಬಾಳ, ರವಿ ಸಣತಮ,ಬಸವರಾಜ ಗೊಳೇದ್, ಅವಿನಾಶ ಕೊಂಡಯ್ಯ, ಶ್ರೀಕಾಂತ, ವಿಕಾಸ ಕರಣಿಕ್ ಇತರರು ಇದ್ದರು.
ಹೊನಗುಂಟಾ ಗ್ರಾಪಂಯಲ್ಲಿ ಚಿತ್ತಾಪೂರ ಬಿಜೆಪಿ ಮಂಡಲ ಅಧ್ಯಕ್ಷ ನೀಲಕಂಠ ಪಾಟೀಲ, ಪಿಡಿಓ ರಾಜು ಬಾಳಿ, ಮಾರ್ಥಂಡ ಬುರ್ಲಿ,ಜೈಭೀಮ, ಸಿದ್ದು ವಾರಕರ್, ಲಕ್ಷ್ಮಣ ಕೊಡಸಾ, ಭೀಮಣ್ಣ ಗೆಜ್ಜಿ, ಬಸಪ್ಪ ಬನ್ನೇಪನೋರ್, ರಾಯಪ್ಪ ಹುರಮುಂಜಿ,ನಾಗು ಕುಂಬಾರ, ಕಾಶಿನಾಥ ಹಡಪದ,ದೇವು ಮಿರಲಕರ್ ಸೇರಿದಂತೆ ಗ್ರಾಪಂ ಸದಸ್ಯರು ಹಾಜರಿದ್ದರು.