ಶಹಾಪುರ: ತಾಲ್ಲೂಕಿನ ವಿಧಾನಸಭಾ ಮತಕ್ಷೇತ್ರದಲ್ಲಿ ತಳಮಟ್ಟದಿಂದ ಜೆಡಿಎಸ್ ಪಕ್ಷ ಸಂಘಟಿಸುತ್ತ ಮುನ್ನಡೆಸಿಕೊಂಡು ಬರುವುದೇ ನನ್ನ ಮುಖ್ಯ ಗುರಿಯಾಗಿದೆ ಎಂದು ಯುವ ಮುಖಂಡರಾದ ಅಮೀನರೆಡ್ಡಿ ಪಾಟೀಲ್ ಹೇಳಿದರು.
ಪಿ.ಎಲ್.ಡಿ ಬ್ಯಾಂಕಿನ ಮಹಿಳಾ ಮೀಸಲು ಕ್ಷೇತ್ರದಿಂದ ಸಗರ ಗ್ರಾಮದ ಶರಣಮ್ಮ ಗಂಡ ಭಾಗಪ್ಪ ಹೇರುಂಡಿ ಅವಿರೋಧವಾಗಿ ಆಯ್ಕೆಯಾದ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿ ಮಾತನಾಡಿ ಮಾಜಿ ಪ್ರಧಾನಿಗಳಾದ ದೇವೇಗೌಡ ಹಾಗೂ ಮಾಜಿ ಮುಖ್ಯ ಮಂತ್ರಿಗಳಾದ ಕುಮಾರಸ್ವಾಮಿ ಅವರು ನನ್ನ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡು ಅವರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಬಡವರ,ದೀನದಲಿತರ, ನೆರವಿಗೆ ಸ್ಪಂದಿಸುತ್ತಾ ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷ ತಳಮಟ್ಟದಿಂದ ಸಂಘಟಿಸುವುದೆ ನನ್ನ ಮೊದಲ ಆದ್ಯ ಕರ್ತವ್ಯವಾಗಿದೆ ಎಂದರು ಆದ್ದರಿಂದ ಮುಂಬರುವ ದಿನಗಳಲ್ಲಿ ಎಲ್ಲರಲ್ಲೂ ಕುತೂಹಲ ಉಂಟುಮಾಡುತ್ತದೆ ಎಂದು ಹೇಳಿದರು.
ಮೀಸಲಾತಿ ಪರಮರ್ಶಿಸುವ “ಉನ್ನತ ಮಟ್ಟದ ಸಮಿತಿ” ರದ್ದುಪಡಿಸಂತೆ ಆಗ್ರಹ
ಜೆಡಿಎಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಇಂದು ಅವಿರೋಧವಾಗಿ ಆಯ್ಕೆಯಾಗಿರುವುದರಿಂದ ಪಕ್ಷದ ಮುಖಂಡರಾದ ಉಮೇಶ್ ಮಾಲಿ ಪಾಟೀಲ್, ಮಲ್ಲನಗೌಡ ಪೊಲೀಸ್,ಪಾಟೀಲ, ದೇವರಡ್ಡಿ ಕರ್ಕಳ್ಳಿ,ಭೈರಪ್ಪಗೌಡ ಉಕ್ಕಿನಾಳ, ಶರಣಗೌಡ ಮಾದಳ್ಳಿ, ಚಂದಪ್ಪ ಸೇರಿ, ತಿರುಪತಿ ಹತ್ತಿಕಟಿಗಿ,ತಿರುಪತಿ ಸೇರಿ,ಸಿದ್ದಯ್ಯ ಪುರಾಣಿಕಮಠ,ಮಲ್ಕಣ್ಣ ಕೋಡ್ಲೂರ, ಭೀಮರಾಯ ಹೂಗಾರ ,ಬಸಪ್ಪ ಹೇರುಂಡಿ, ಶಿವಶರಣ ಕೂಡ್ಲುರ, ಹಾಗೂ ಇತರರು ಹರ್ಷ ವ್ಯಕ್ತಪಡಿಸಿದ್ದಾರೆ.