ಪೊಲೀಸರ ವರ್ತನೆಗೆ ಕೆಎಸ್‌ಡಿಎಸ್‌ಎಸ್ ಖಂಡನೆ

0
204

ಶಹಾಬಾದ: ಹೋಳಿ ಹಬ್ಬದ ನಿಮಿತ್ತ ಶನಿವಾರ ನಗರದ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾದ ಶಾಂತಿ ಸಭೆಯಲ್ಲಿ ಪೋಲಿಸರು ತಮಗೆ ಬೇಕಾದವರನ್ನು ಮಾತ್ರ ಕರೆದು, ಬೇರೆಯವರನ್ನು ಕಡೆಗಣಿಸಿದ್ದಾರೆ. ಇದಕ್ಕೆ ಕೆಎಸ್‌ಡಿಎಸ್‌ಎಸ್ ವತಿಯಿಂದ ಖಂಡಿಸುತ್ತೆವೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಕೃಷ್ಣಪ್ಪ ಕರಣಿಕ್ ತಿಳಿಸಿದ್ದಾರೆ.

ಯಾವುದೇ ಶಾಂತಿ ಸಭೆ ಮಾಡಿದರೇ ಎಲ್ಲಾ ಸಮುದಾಯದ ನಾಯಕರನ್ನು, ಸಂಘಟನೆಗಳ ಪದಾಧಿಕಾರಿಗಳನ್ನು, ಸುತ್ತಮುತ್ತಲಿನ ಗ್ರಾಮದ ಗಣ್ಯರನ್ನು ಅಥವಾ ಗ್ರಾಪಂ ಸದಸ್ಯರನ್ನು ಕರೆಯುತ್ತಿದ್ದರು. ಅಲ್ಲದೇ ಸುಮಾರು ವರ್ಷದಿಂದ ನಮ್ಮನ್ನು ಎಲ್ಲಾ ಶಾಂತಿ ಸಭೆ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಕರೆಯುತ್ತಿದ್ದರು.ಆದರೆ ಇತ್ತಿಚ್ಚಿನ ಒಂದು ವರ್ಷದಿಂದ ತಮಗೆ ಬೇಕಾದವರನ್ನು ಕರೆದು ನಾಮಕೇ ವಾಸ್ತೆ ಶಾಂತಿ ಸಭೆ ಮಾಡುತ್ತಿದ್ದಾರೆ.

Contact Your\'s Advertisement; 9902492681

ಸಾಧನೆ ಮಾಡಿದ ವ್ಯಕ್ತಿಗಳಿಗೆ ಸನ್ಮಾನಿಸಿ ಪ್ರೋತ್ಸಾಹಿಸಿ: ಕಿರಣ್ ಚವ್ಹಾಣ

ಕಳೆದ ಗಣೇಶ ಚತುರ್ಥಿ ಸಂದರ್ಭದಲ್ಲಿ ಜಗದಂಬಾ ಮಂದಿರದಲ್ಲಿ ಶಾಂತಿ ಸಭೆ ನಡೆಸಿದ್ದರು.ಆಗ ಮುಸ್ಲಿಂ ಬಾಂಧವರನ್ನು ಕರೆದಿರಲಿಲ್ಲ. ಈಗ ಮತ್ತೆ ಅದೇ ಚಾಳಿ ನಡೆದಿದೆ. ಹೋಳಿ ಹಬ್ಬ, ಮುಂಬರುವ ಶಬ್ ಇ ಭಾರಾತ್ ಹಾಗೂ ಗುಡ್ ಪ್ರಾಯಿಡೆಯನ್ನು ಬಹಿರಂಗವಾಗಿ ಆಚರಣೆ ಮಾಡುವುದಕ್ಕೆ ತಾಲೂಡಳಿತದಿಂದ ನಿರ್ಬಂಧಿಸಲಾಗಿದೆ.ಆದರೆ ಕ್ರೈಸ್ತ ಧರ್ಮಿಯರ ಪರವಾಗಿ ಒಬ್ಬರನ್ನು ಕರೆಯಲಾಗಿಲ್ಲ. ಕೆಎಸ್‌ಡಿಎಸ್‌ಎಸ್ ಒಬ್ಬ ಪದಾಧಿಕಾರಿಯನ್ನು ತಿಳಿಸಿಲ್ಲ.ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಒಬ್ಬ ಗಣ್ಯ ವ್ಯಕ್ತಿಗಳನ್ನಾಗಲಿ ಅಥವಾ ಗ್ರಾಪಂ ಸದಸ್ಯರನ್ನಾಗಲಿ ಕರೆದಿಲ್ಲ.

ಈ ರೀತಿ ಮಾಡಿದರೇ ಶಾಂತಿ ಸಭೆ ಮಾಡಿ ಏನು ಪ್ರಯೋಜನ ಎಂದು ಭಂಕೂರ ಗ್ರಾಪಂ ಸದಸ್ಯ ಈರಣ್ಣ ಕಾರ್ಗಿಲ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈ ಸಂಬಂಧ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತರುತ್ತೆವೆ ಎಂದು ಕೃಷ್ಣಪ್ಪ ಕರಣಿಕ್ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here