ಸಂವಿಧಾನಬದ್ಧ ವಿಶೇಷ ಸ್ಥಾನಮಾನಕ್ಕೆ ನಿರ್ಲಕ್ಷ ಖೇದಕರ: ಶಾಸಕಿ ಕನೀಜ ಫಾತಿಮಾ

0
49

ಕಲಬುರಗಿ : ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ವಿಶೇಷ ರಚನಾತ್ಮಕ ಪ್ರಗತಿ ಮಾಡಬೇಕೆಂದು ಒತ್ತಾಯಿಸಿ ನಡೆದ ಈ ಭಾಗದ ಬಹುದಿನಗಳ ಹೋರಾಟದ ಫಲವಾಗಿ ಸಂವಿಧಾನಬದ್ಧವಾದ ೩೭೧ನೇ(ಜೆ) ಕಲಂ ವಿಶೇಷ ಸ್ಥಾನಮಾನ ಸಿಕ್ಕರು ಪ್ರದೇಶಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ನಿರ್ಲಕ್ಷ ಮಾಡುತ್ತಿರುವುದು ಸಂವಿಧಾನಕ್ಕೆ ಅಪಚಾರ ಎಂದು ಶಾಸಕಿ ಕನೀಜ್ ಫಾತೀಮಾ ತಿಳಿಸಿದ್ದಾರೆ.

ಕಲ್ಯಾಣ ನಡೆ ಜನಪ್ರತಿನಿಧಿಗಳ ಕಡೆ ಅಭಿಯಾನದನ್ವಯ ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ನಿಯೋಗ  ಶಾಸಕಿ ಖನೀಜ ಫಾತಿಮಾ ಅವರ ನಿವಾಸದಲ್ಲಿ ಭೇಟಿಯಾಗಿ ಅಭಿಯಾನದ ಬಗ್ಗೆ ಮಾತನಾಡಿ ಅಸಮಧಾನ ವ್ಯಕ್ತಪಡಿಸಿದರು.

Contact Your\'s Advertisement; 9902492681

ಈ ವೇಳೆಯಲ್ಲಿ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ಮಾತನಾಡಿ ಭಾಗಕ್ಕೆಆಗುತ್ತಿರುವ ಅನ್ಯಾಯ ಸರಿಪಡಿಸಲು ಎಲ್ಲಾ ಪಕ್ಷದ ಜನಪ್ರತಿನಿಧಿಗಳು ಸಂಘಟಿತ ರಾಜಕೀಯ ಇಚ್ಛಾಶಕ್ತಿ ವ್ಯಕ್ತಪಡಿಸುವದು ಅತಿ ಅವಶ್ಯವಾಗಿದೆ.

ಬಡಮಕ್ಕಳಿಗೆ ಹಣ್ಣು, ಪ್ಯಾಡ ವಿತರಿಸುವ ಮೂಲಕ ಹುಟ್ಟುಹಬ್ಬ ಆಚರಣೆ

ಅದರಂತೆ ಬರುವ ದಿನಗಳಲ್ಲಿ ಹಮ್ಮಿಕ್ಕೊಳ್ಳಲಾಗುತ್ತಿರುವ ಕಲ್ಯಾಣ ಕರ್ನಾಟಕ ಜನತಾ ಅಧಿವೇಶನಕ್ಕೆ ಹಾಜರಾಗಲು ಆಮಂತ್ರಣ ನೀಡಲಾಯಿತು.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕಿ ಸರಕಾರ ನಮ್ಮ ಭಾಗಕ್ಕೆ ಕಲ್ಯಾಣ ಕರ್ನಾಟಕ ಹೆಸರು ಇಟ್ಟು ಕೈತೊಳೆದುಕೊಳ್ಳುತಿರುವುದು ನೋವಿನ ಸಂಗತಿಯಾಗಿದೆ. ನಾವೆಲ್ಲಾ ಜನಪ್ರತಿನಿಧಿಗಳು ಮುಂದೆ ಸಂಘಟಿತವಾಗಿ ಅಭಿವೃದ್ಧಿಪರ ಸದಾ ಸಿದ್ಧರಿದ್ದೇವೆ ಎಂದು ಭರವಸೆ ನೀಡಿದರು.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉಪನ್ಯಾಸಕರು ಪಾಠ ಮಾಡಬೇಕು: ಶಿವಶರಣಪ್ಪ ಮೂಳೆಗಾಂವ

ಈ ಸಂದರ್ಭದಲ್ಲಿ ಮುಖಂಡರಾದ ಡಾ. ಮಾಜಿದ ದಾಗಿ, ಮನೀಷ್ ಜಾಜು, ಲಿಂಗರಾಜ ಸಿರಗಾಪೂರ ಶಿವಲಿಂಗಪ್ಪ ಬಂಡಕ, ಶಾಮ್ ನಾಟಿಕಾರ, ಭದ್ರಶೆಟ್ಟಿ, ಅಸ್ಲಂ ಚೌಂಗೆ, ಶಾಂತಪ್ಪ ಕಾರಭಾಸಗಿ, ರಾಜು ಜೈನ್, ವೀರೇಶ ಪುರಾಣಿಕ, ಶಿವಾನಂದ ಕಾಂದೆ, ರಮೇಶ ಎನ್, ಸಂಜೀವಕುಮಾರ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here