ಕಲಬರುಗಿ: ವಿಶ್ವದ ಮನುಕುಲಕ್ಕೆ ಶಾಂತಿ ಹಾಗೂ ಅಹಿಂಸೆಯ ತತ್ವಗಳನ್ನು ಬೋಧಿಸಿದ ಪೂಜ್ಯನೀಯ ಭಗವಾನ್ ಮಹಾವೀರರ ಜಯಂತಿಯನ್ನು ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸುವಂತೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ರಾಜ್ಯ ನಿರ್ದೇಶಕರಾದ ಸುರೇಶ್ ಎಸ್. ತಂಗಾ ಅವರು ಮನವಿ ಮಾಡಿದ್ದಾರೆ
ಮನುಕುಲಕ್ಕೆ ಕಂಟಕವಾಗಿರುವ ಕೂರೋನಾ ವೈರಸ್ ತಡೆಗಟ್ಟುವುದು ಹಾಗೂ ಅದರ ಕುರಿತು ಮುಂಜಾಗೃತೆ ಕುರಿತು ಎಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದ್ದು ಈ ಸಮಯದಲ್ಲಿ ಮಹಾವೀರ ಜಯಂತಿಯನ್ನು ಆದ್ದೂರಿಯಾಗಿ ಆಚರಣೆ ಕೈ ಬಿಟ್ಟು ಜೈನ್ ಸಮುದಾಯ ಸೇರಿದಂತೆ ಸರ್ವರೂ ತಮ್ಮ ತಮ್ಮ ಮನೆಯಲ್ಲಿಯೇ ಪೂಜೆ ಪ್ರಾರ್ಥನೆ ಮಾಡುವಂತೆ ಜನೆತೆಯಲ್ಲಿ ಕೋರಿದ್ದಾರೆ.
ಮನೆಯಲ್ಲಿ ಪೂಜೆ ಮಾಡುವ ಸಂದರ್ಭದಲ್ಲಿ ಸಾಮಾಜಿಕ ಅಂತರ್ ಮತ್ತು ಮಾಸ್ಕ್ ಧರಿಸುವಿಕೆ ಸ್ಯಾನೀಟೇಜರ್ ಬಳಕೆ ಮಾಡುವಂತೆ ವಿನಂತಿ ಮಾಡಿರುವ ತಂಗಾ ಅವರು ಮನುಕುಲ,ಶಾಂತಿ ನಮ್ಮೆದಿಯಿಂದ ಜೀವನ ಸಾಗಿಸುವಂತೆ ಹಾಗೂ ಅದಷ್ಟೂ ಬೇಗ ಕೂರೋನಾ ವೈರಸ್ ನಿವಾರಣೆಯಾಗುವಂತೆ ಭಗವಾನ್ ಮಹಾವೀರ ಸ್ವಾಮಿಯಲ್ಲಿ ಪ್ರಾರ್ಥನೆ ಮಾಡುವಂತೆ ಕೋರಿರುವ ಅವರು ಜನತೆಗೆ ಮಹಾವೀರ ಜಯಂತಿಯ ಶುಭಾಶಯಗಳನ್ನು ತಿಳಿಸಿದ್ದಾರೆ.