ಬೆಂಗಳೂರು: ದಿನಾಂಕ: 13.05.21 ರಂದು ರಾಷ್ಟ್ರೀಯ ರೋಗ ನಿರೋದಕ ತಾಂತ್ರಿಕ ಸಲಹಾ ಸಮಿತಿ (ಎನ್ ಟಿ ಎ ಜಿ ಐ) ಮತ್ತು ಲಸಿಕೆ ಆಡಳಿತದ ರಾಷ್ಟ್ರೀಯ ತಜ್ಞರ ಸಮಿತಿ (ಎನ್ಇಜಿವಿಎಸಿ) ಶಿಫಾರಸಿನ ಆಧಾರದ ಮೇಲೆ ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ಮೊದಲ ಡೋಸ್ ಪಡೆದ ನಂತರ 12 ರಿಂದ 16 ವಾರಗಳ ಅಂತರದಲ್ಲಿ ಅರ್ಹ ಫಲಾನುಭವಿಗಳಿಗೆ ನೀಡಲು ಸಲಹೆ ನೀಡಿರುತ್ತದೆ.
ಆದ್ದರಿಂದ, 2 ಡೋಸ್ಗಳ ನಡುವಿನ COVISHIELD ಲಸಿಕೆಗಾಗಿ 6 ರಿಂದ 8 ವಾರಗಳ ಹಿಂದಿನ ಮಧ್ಯಂತರವನ್ನು 12 ರಿಂದ 16 ವಾರಗಳಿಗೆ ಪರಿಷ್ಕರಿಸಲಾಗಿದೆ.
ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ನಂತರ 12 ವಾರಗಳನ್ನು ಪೂರ್ಣಗೊಳಿಸದ ನಾಗರೀಕರು ವ್ಯಾಕ್ಸಿನೇಷನ್ ಕೇಂದ್ರಗಳಿಗೆ ಭೇಟಿ ನೀಡದಂತೆ ಕೋರಲಾಗಿದೆ.
2 ಬಾರಿ ಪಡೆಯುವ ಲಸಿಕೆಯ ನಡುವಿನ ಈ ಪರಿಷ್ಕೃತ ಸಮಯದ ಅಂತರ COVISHIELD ಲಸಿಕೆಗೆ ಮಾತ್ರ ಅನ್ವಯಿಸುತ್ತದೆ ಮತ್ತು COVAXIN ಲಸಿಕೆಗೆ ಅಲ್ಲ ಎಂದು ಪ್ರಕಟಣೆ ತಿಳಿಸಿದೆ.