ಕಲಬುರಗಿ: ಪ್ರಧಾನಿ ಮೋದಿ ಅವರ ಕನಸಿನ ಕುಸಾಗಿರುವ ಡಿಜಿಟಲ್ ಇಂಡಿಯಾ ಮತ್ತು ಕ್ಯಾಶ್ ಲೇಸ್ ವ್ಯವಹಾರಕ್ಕೆ ಇಲ್ಲಿನ ಕಲಬುರಗಿ ಡೈಗ್ನೋಸಿಸ್ ಸೆಂಟರ್ ಗಾಳಿಗೆ ತೂರಿ ಕೇವಲ ನಗದು ವ್ಯವಹಾರಕ್ಕೆ ಉತ್ತೇಜನ ನೀಡುತ್ತಿದೆ.
ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಕ್ಯಾಶ್ ಲೇಸ್ ವ್ಯವಹಾರ ಮತ್ತು ವ್ಯಾಪಾರ ಉತ್ತಮವಾಗಿದ್ದು, ಡೈಗ್ನೋಸಿಸ್ ಕೇಂದ್ರದಲ್ಲಿ ಆನ್ ಲೈನ್ ಮತ್ತು ಕ್ಯಾಶ್ ಲೇಸ್ ಪಾವತಿಗೆ ಅವಕಾಶ ಇಲ್ಲವೆಂದು ರೋಗಿಗಳಿಗೆ ಮತ್ತು ಗ್ರಾಹಕರಿಗೆ ಎಟಿಎಂ ಕೇಂದ್ರಗಳಿಗೆ ಮೊರೆ ಹೋಗುವಂತೆ ಮಾಡಿದ್ದು, ಕೇಂದ್ರದ ಈ ನಡೆ ಹಲವು ಸಂಶಯಕ್ಕೆ ಎಡೆಮಾಡಿಕೊಟ್ಟಂತಾಗಿದೆ.
ದೇಶಾದ್ಯಂತ ತರಕಾರಿ ಅಂಗಡಿ, ಹೋಟಲ್, ಪಾನ್ ಶಾಪ್ ಶಾಪಿಂಗ್ ಮಾಲ್, ಹಣ್ಣಿನ ವ್ಯಾಪಾರಿಗಳು ಕ್ಯಾಶ್ ಲೇಶ್ ವ್ಯವಹಾರ ನಡೆಸಿ ಜನರಿಗೆ ಅನುಕೂಲ ಮಾಡಿಕೊಟ್ಟು ಡಿಜಿಟಲ್ ಇಂಡಿಯಾ ಅಭಿಯಾನದ ಭಾಗವಾಗುತ್ತಿದ್ದರೆ, ನಗರದ ಕಲಬುರಗಿ ಡೈಗ್ನೋಸಿಸ್ ಸೆಂಟರ್ ನಲ್ಲಿ ಕೇವಲ ನಗದು ಪಾವತಿ ಮಾಡಬೇಕು ಎಂದು ಗ್ರಾಹಕರಿಗೆ ಪೀಡಿಸಲಾಗುತ್ತಿದೆ ಎಂದೆ ಹೇಳಬಹುದಾಗಿದೆ.