Tuesday, July 16, 2024
ಮನೆಬಿಸಿ ಬಿಸಿ ಸುದ್ದಿಕೊರೊನಾ ವಾರಿಯರ್ಸ್ ಸನ್ಮಾನಿಸಿ ಡಿ.ಜಿ.ಸಾಗರ ಜನ್ಮ ದಿನಾಚರಣೆ

ಕೊರೊನಾ ವಾರಿಯರ್ಸ್ ಸನ್ಮಾನಿಸಿ ಡಿ.ಜಿ.ಸಾಗರ ಜನ್ಮ ದಿನಾಚರಣೆ

ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ ಬಣ) ಸಂಸ್ಥಾಪಕ ಅಧ್ಯಕ್ಷರಾದ ಡಿ.ಜಿ.ಸಾಗರ್ ಅವರ ೬೫ನೇ ಜನುಮ ದಿನಾಚರಣೆ ಅಂಗವಾಗಿ ಸಂಘಟನೆಯ ಸುರಪುರ ತಾಲೂಕು ಘಟಕದಿಂದ ವಿಶೇಷವಾಗಿ ಆಚರಣೆ ಮಾಡಲಾಯಿತು.

ನಗರದ ತಾಲೂಕು ಆಸ್ಪತ್ರೆಯಲ್ಲಿನ ವೈದ್ಯರನ್ನು ಸನ್ಮಾನಿಸಿ ಮಾತನಾಡಿದ ಸಂಘಟನೆಯ ಜಿಲ್ಲಾ ಸಂಘಟನಾ ಸಂಚಾಲಕ ಶಿವಲಿಂಗ ಹಸನಾಪುರ,ನಾಡಿನಲ್ಲಿಯ ದಲಿತ ಪರ ಹೋರಾಟದಲ್ಲಿ ಮುಂಚುಣಿಯಲ್ಲಿರುವ ನಾಯಕರಲ್ಲಿ ಡಿ.ಜಿ.ಸಾಗರ್ ಅವರು ಒಬ್ಬರು.ಅವರು ಹುಟ್ಟು ಹೋರಾಟಗಾರರಾಗಿದ್ದು ಬದುಕಿನುದ್ದಕ್ಕೂ ಸಮಾಜದ ಏಳಿಗೆಗಾಗಿ ದುಡಿಯುತ್ತಿರುವ ಮಹಾ ನಾಯಕರಾಗಿದ್ದಾರೆ.ಅವರು ನೀಡಿದ ಮಾರ್ಗದರ್ಶನದಿಂದ ಲಕ್ಷಾಂತರ ಹೋರಾಟಗಾರರು ಹುಟ್ಟಿಕೊಂಡಿದ್ದಾರೆ. ನಾವೆಲ್ಲರು ಕೂಡ ನಮ್ಮ ನಾಯಕರಾದ ಡಿ.ಜಿ.ಸಾಗರ್ ಅವರ ಮಾರ್ಗದರ್ಶನದಲ್ಲಿ ಅನೇಕ ಹೋರಾಟಗಳನ್ನು ರೂಪಿಸಿಕೊಂಡು ಹೋಗುತ್ತಿದ್ದು,ಜೀವನದುದ್ದಕ್ಕೂ ನಾಡಿನ ದೀನ ದಲಿತ ಶೋಷಿತರ ಪರವಾಗಿ ಧ್ವನಿ ಎತ್ತುವುದಾಗಿ ತಿಳಿಸಿದರು.

ಅಲ್ಲದೆ ಈಬಾರಿ ಸಾಗರ್‌ಜಿ ಅವರ ಜನುಮ ದಿನವನ್ನು ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದೇವು,ಆದರೆ ದೇಶದಲ್ಲಿ ಕೊರೊನಾ ಇರುವ ಕಾರಣದಿಂದ ಸರಳವಾಗಿ ಮತ್ತು ಅರ್ಥಪೂರ್ಣವಾಗಿ ಆಚರಣೆ ಮಾಡಲು ಕೊರೊನಾ ವಾರಿಯರ್ಸ್‌ಗಳನ್ನು ಸನ್ಮಾನಿಸುವ ಜೊತೆಗೆ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು ಹಂಪಲು ಹಾಲು ಬ್ರೇಡ್ ವಿತರಣೆ ಮಾಡುವ ಮೂಲಕ ಆಚರಿಸುತ್ತಿರುವುದು ಸಂತಸ ಮೂಡಿಸಿದೆ ಎಂದರು.

ನಂತರ ವೈದ್ಯಾಧಿಕಾರಿ ಹರ್ಷವರ್ಧನ ರಫಗಾರ ಮತ್ತು ಪಿಎಸ್‌ಐ ಚಂದ್ರಶೇಖರ ನಾರಾಯಣಪುರ ಮತ್ತಿತರರನ್ನು ಸನ್ಮಾನಿಸಿದರು ಹಾಗು ಆಸ್ಪತ್ರೆಯಲ್ಲಿನ ಎಲ್ಲಾ ರೋಗಿಗಳಿಗೆ ಹಾಲು ಹಣ್ಣು ಬ್ರೇಡ್ ವಿತರಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ತಿಪ್ಪಣ್ಣ ಶೆಳ್ಳಗಿ,ಮಾನಪ್ಪ ಶೆಳ್ಳಗಿ,ಶೇಖರ ಮಂಗಳೂರು,ಮರಲಿಂಗ ಹುಣಸಿಹೊಳೆ,ರಮೇಶ ಬಾಚಿಮಟ್ಟಿ,ಶಿವಪ್ಪ ಶೆಳ್ಳಗಿ,ಮೌನೇಶ ಶೆಳ್ಳಗಿ,ಸಂಗಪ್ಪ ಶೆಳ್ಳಗಿ ಹಾಗು ಹಸನಪ್ಪ ಶೆಳ್ಳಗಿ ಸೇರಿದಂತೆ ಅನೇಕರಿದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular