ಕಲಬುರಗಿ- ನೆಲೋಗಿಯಲ್ಲಿ ಮಾಜಿ ಸಿಎಂ ಧರಂಸಿಂಗ್ ಸ್ಮರಣೆ

0
24

ಕಲಬುರಗಿ: ರಾಜ್ಯ ಕಂಡ ಮುತ್ಸದ್ದಿ ರಾಜಕಾರಣಿ, ಮುಖ್ಯಮಂತ್ರಿಗಳಾಗಿ ಗೃಹ ಸಚಿವರಾಗಿ ಲೋಕೋಪಯೋಗಿ ಸಚಿವರಾಗಿ ಹೀಗೆ ಹಲವಾರು ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಮಾಜಿ ಮುಖ್ಯಮಂತ್ರಿ, ಅಜಾತಶತ್ರು ದಿ. ಧರ್ಮಸಿಂಗ್ ಅgವರ 4 ನೇ ಪುಣ್ಯ ಸ್ಮರಣೋತ್ಸವ ಅವರ ತವರು ಜಿಲ್ಲೆ ಕಲಬುರಗಿ ಹಾಗೂ ಹುಟ್ಟೂರು ನೆಲೋಗಿಯಲ್ಲಿ ಸರಳವಾಗಿ ಆಚರಣೆ ಮಾಡಲಾಯ್ತು.

ಸದರಿ ಸ್ಮರಣೋತ್ಸವದಲ್ಲಿ ದಿ. ಧರಂಸಿಂಗ್ ಅವರ ಪತ್ನಿ ಪ್ರಭಾವತಿ ಧರಂಸಿಂಗ್,  ಪುತ್ರರಾದ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್, ವಿದಾನ ಪರಿಷತ್ ಸದಸ್ಯ ವಿಜಯ್ ಸಿಂಗ್ ಹಾಗೂ ಕುಟುಂಬ ವರ್ಗದವರು ಆಪ್ತರು, ಆತ್ಮೀಯರು ಪಾಲ್ಗೊಂಡು ಗೌರವ ಪೂರ್ವಕವಾಗಿ ನೆನೆಯುತ್ತಾ ಅವರಿಗೆ ನನ್ನ ನಮನಗಳನ್ನು ಸಲ್ಲಿಸಿದರು.

Contact Your\'s Advertisement; 9902492681

ಮಾಜಿ ಎಂಎಲ್‍ಸಿ ಅಲ್ಲಂಪ್ರಭು ಪಾಟೀಲ್, ನಾರಾಯಣರಾವ ಕಾಳೆ, ಕೆಪಿಸಿಸಿ ಸದಸ್ಯ ಹಣಮಂತರಾವ್ ಭೂಸನೂರ್ ಸೇರಿದಂತೆ ಕಾಂಗ್ರೆಸ್ ಪ್ರಮುಖರು, ಕಾರ್ಯಕರ್ತರು ಅಭಿಮಾನಿಗಳು ಪಾಲ್ಗೊಂಡಿದ್ದರು.

ಧರಂಸಿಂಗ್ ಅವರ ಆಪ್ತರಲ್ಲೊಬ್ಬರಾದ ಸಿಬಿ ಪಾಟೀಲ್ ತಮ್ಮ ಊರು ಓಕಳಿಯಲ್ಲಿ ಮಂಗಳವಾರ ಧರಂಸಿಂಗ್ ಸ್ಮರಣೋತ್ಸವ ನಡೆಸಿದರು. ಕರ್ನಾಟಕ ಕಂಡ ಅಪರೂಪದ ಹಾಗೂ ಜನಪರ ಆಡಳಿತ ನೀಡಿದ ಸಿಎಂ ಎಂದರೆ ಧರಂಸಿಂಗ್ ಎಂದು ಅವರು ಇದೇ ವೇಳೆ ನಡೆದ ಸಭೆಯಲ್ಲಿ ಮಾತನಾಡುತ್ತ ಹೇಳಿದರು.

ಸಮಾರಂಭದ ನಂತರ ಪಾಲ್ಗೊಂಡ ಮಕ್ಕಳು, ಮಹಿಳೆಯರು, ಊರವರೆಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಧರಂಸಿಂಗ್ ಜನಪರ ಧೋರಣೆಯೇ ಅವರನ್ನು ಇದುವರೆಗೂ ಜನಮನದಲ್ಲಿರುವಂತೆ ಮಾಡಿದೆ ಎಂದು ನೆಲೋಗಿ ಊರವರು ತಮ್ಮೂರಿನ ಜನನಾಯಕನನ್ನು ಕೊಂಡಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here