ಬೆಳೆನಷ್ಟ ಉಂಟಾದ್ದಲ್ಲಿ ತಕ್ಷಣವಾಗಿ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಸೂಚನೆ

0
35

ಕಲಬುರಗಿ: ಬೆಳೆವಿಮೆ ಯೋಜನೆಯಡಿ ನೋಂದಾಯಿಸಿದ ಜಿಲ್ಲೆಯ ರೈತರು ಮುಂಗಾರು ಹಂಗಾಮಿನಲ್ಲಿ ಅತಿಯಾದ ಮಳೆ, ಪ್ರವಾಹ ಅಥವಾ ಇತರೆ ಪ್ರತಿಕೂಲ ಹವಾಮಾನ ಸಂದರ್ಭದಲ್ಲಿ ಬೆಳೆ ನಷ್ಟವುಂಟಾದ್ದಲ್ಲಿ ಸ್ಥಳೀಯ ವಿಪತ್ತು (Localise calamity) ಯಡಿ ಬೆಳೆವಿಮೆ ಪರಿಹಾರಕ್ಕಾಗಿ 72 ಗಂಟೆಯೊಳಗೆ ಬೆಳೆಹಾನಿ ಕುರಿತು ಮಾಹಿತಿಯನ್ನು ಯುನಿವರ್ಸಲ್ ಸೊಂಪೊ ಜೆನೆರಲ್ ಇನ್ಸುರೆನ್ಸ್ ಕಂಪನಿ ಲಿ. ಸಹಾಯವಾಣಿ ಸಂಖ್ಯೆ 1800-200-5142 ಗೆ ಕರೆ ಮಾಡಿ ವಿವರಗಳೊಂದಿಗೆ ತಮ್ಮ ಅರ್ಜಿಯನ್ನು ದಾಖಲಿಸಬಹುದಾಗಿದೆ ಎಂದು ಕಲಬುರಗಿ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 2021ರ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ ಅನುಷ್ಠಾನಗೊಳಿಸಲು ಬೆಂಗಳೂರಿನ ಯುನಿವರ್ಸಲ್ ಸೊಂಪೊ ಜೆನೆರಲ್ ಇನ್ಸುರೆನ್ಸ ಕಂಪನಿ ಲಿ. ವಿಮಾ ಸಂಸ್ಥೆ ನಿಗದಿಪಡಿಸಲಾಗಿದೆ.

Contact Your\'s Advertisement; 9902492681

ರೈತ ಭಾಂದವರು ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಂಬಂಧಪಟ್ಟ ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಹಾಗೂ ಸಹಾಯವಾಣಿ ಸಂಖ್ಯೆ 1800-200-5142 ಕರೆ ಮಾಡಿ ಮಾಹಿತಿ ನೀಡಬೇಕು. ಬೆಂಗಳೂರಿನ ಯುನಿವರ್ಸಲ್ ಸೊಂಪೊ ಜೆನೆರಲ್ ಇನ್ಸ್ಸುರೆನ್ಸ್ ಕಂಪನಿ ಲಿ. ವಿಮಾ ಸಂಸ್ಥೆಯ ಈ ಕೆಳಕಂಡ ತಾಲೂಕಿನ ವಿಮಾ ಪ್ರತಿನಿಧಿಗಳನ್ನು ಸಂಪರ್ಕಿಸಬೇಕು.

ಕಲಬುರಗಿ ಜಿಲ್ಲೆ-ಮೊಬೈಲ್ ಸಂಖ್ಯೆ 9731499917, 8867508750, 9538185343, 9620006812, ಚಿತ್ತಾಪೂರ-9731499917, ಅಫಜಲಪುರ-9902356434, ಜೇವರ್ಗಿ-9731499917, ಆಳಂದ-9731499917, ಕಲಬುರಗಿ-9538185343, ಚಿಂಚೋಳಿ-8095384057, 9731499917 ಹಾಗೂ ಸೇಡಂ-7204579007 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here