ಕಲಬುರಗಿ: ಜಿಲ್ಲೆಯ ಡೊಂಗರಗಾಂವದ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನದ ವತಿಯಿಂದ ನೀಡುವ ಐದನೇ ವರ್ಷದ 2021 ನೇ ಸಾಲಿನ ‘ಅವ್ವ’ ಪ್ರಶಸ್ತಿಗೆ ಬೆಂಗಳೂರಿನ ಡಾ. ಪದ್ಮಿನಿ ನಾಗರಾಜು ಅವರ “ಉರಿವ ಬೆಂಕಿಗೆ ಮೈಯೆಲ್ಲ ಬಾಯಿ”( ಕಥಾಸಂಕಲನ) ಚಾಂದಪಾಷ ಎನ್.ಎಸ್ ಅವರ “ಚಿತ್ರ ಚಿಗುರುವ ಹೊತ್ತು” (ಕವನ ಸಂಕಲನ) ಕೃತಿಗಳನ್ನು ಅವ್ವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಅದೇ ರೀತಿ ಪ್ರೊ. ಬಿ. ಪಿ ಹೂಗಾರ ( ಇತಿಹಾಸ ತಜ್ಞರು ) ಡಾ. ಶಾಂತಾ ಅಷ್ಟಗಿ (ಶಿಕ್ಷಣ )ಶ್ರೀ ಸಿದ್ದರಾಮಪ್ಪ ಮೂಲಗೆ ( ಸಂಗೀತ) ಶ್ರೀ ವಿಶ್ವೇಶ್ವರಯ್ಯ ಭೋವಿ ಟಿ. ಎನ್ (ಶಿಲ್ಪಕಲೆ) ಅವರನ್ನು 2021 ನೇ ಸಾಲಿನ ‘ಅವ್ವ ಗೌರವ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಶರಣಬಸಪ್ಪ ವಡ್ಡನಕೇರಿ ಹಾಗೂ ಪ್ರತಿಷ್ಠಾನದ ಸಂಚಾಲಕರಾದ ಡಾ. ನಾಗಪ್ಪ ಗೋಗಿ ತಿಳಿಸಿದ್ದಾರೆ.