ಮೈಸೂರು: ಮತ್ತೆ ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆಯನ್ನು ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿಯ ವತಿಯಿಂದ ನಗರದ ಕೋರ್ಟ್ ಮುಂಭಾಗದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಜನವರಿ 1ರಿಂದ ಸೆಪ್ಟೆಂಬರ್ 1ರ ನಡುವೆ ಎಲ್ಪಿಜಿ ಸಿಲಿಂಡರ್ ಬೆಲೆ ಬರೋಬ್ಬರಿ 190 ರೂ. ಹೆಚ್ಚಾಗಿದೆ. ಸದ್ಯದ ಗ್ಯಾಸ್ ಸಿಲಿಂಡರ್ ಬೆಲೆಗೆ ಹೋಲಿಸಿದರೆ, ಎಲೆಕ್ಟ್ರಿಕ್ ಒಲೆ ಕಡಿಮೆ ಬೆಲೆಗೆ ಸಿಗುತ್ತಿದೆ. ಅಡುಗೆ ಎಣ್ಣೆ ಬೆಲೆ ಏರಿಕೆ ಮಾಡಿದ್ದ ಸರ್ಕಾರ, ಬಳಿಕ ದಿನಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಏರಿಸಿತ್ತದೆ ಎಂದು ಪ್ರತಿಭಟನಕಾರರು ಅಸಮಧಾನ ಹೋರಹಾಕಿದರು.
ಸದ್ಯ ಕಳೆದ 2 ತಿಂಗಳಿನಿಂದ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳವಾಗಿಲ್ಲ. ಅಡುಗೆ ಎಣ್ಣೆಯ ಬೆಲೆಯೂ ಸಹ ಸ್ಥಿರತೆ ಕಾಯ್ದುಕೊಂಡಿದೆ. ಆದರೆ ಈಗ ಪ್ರತಿದಿನ ಬಳಸುವ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಏರಿಸುವ ಮೂಲಕ ಗ್ರಾಹಕರಿಗೆ ಮತ್ತೆ ಬರೆ ಹಾಕಿದೆ ಈ ರೀತಿಯ ಆರ್ಥಿಕ ಹೊರೆಯನ್ನು ಖಂಡಿಸಿ ಪ್ರತಿಭಟಿಸುವುದು ಪ್ರಜಾಪ್ರಭುತ್ವದ ನಾಗರಿಕರೆಲ್ಲರ ಕರ್ತವ್ಯವಾಗಿದೆ ಎಂದು ಪ್ರತಿಷ್ಠಾಪನ ಸಮಿತಿಯ ಅಧ್ಯಕ್ಷರಾದ ಜಾಕೀರ್ ಹುಸೇನ್ ಕರೆ ನೀಡಿದರು.
ಮಂಜುಳಾ ಮಾನಸ, ಡೈರಿ ವೆಂಕಟೇಶ್, ಕೊರಿಯರ್ ವೆಂಕಟೇಶ್, ಹಿರಿಯ ರಂಗಕರ್ಮಿ ಕೆ,ಆರ್, ಗೋಪಾಲಕೃಷ್ಣ, ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷರಾದ ಮಾನವಿಕ, ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕೇಂದ್ರ ಸಂಘದ ರಾಜ್ಯಾಧ್ಯಕ್ಷರಾದ ಪಿ ರಾಜು, ಜಿಲ್ಲಾ ಕನ್ನಡ ಚಳುವಳಿ ಹೋರಾಟಗಾರರಾದ ಶಿವಶಂಕರ್, ಪರಿಸರವಾದಿ ಭಾನು ಮೋಹನ್, ಸಮಾಜ ಸೇವಕಿ ಭವ್ಯ, ಡಾ,ಭರತ್, ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣೆ ರಾಜ್ಯ ಅಧ್ಯಕ್ಷರಾದ ದ್ಯಾವಪ್ಪ ನಾಯ್ಕ, ಪ್ರಶಾಂತ್ ಆರ್ಯ, ಮಂಜುನಾಥ್, ( ಸವಿತಾ ಸಮಾಜ) ,ರದಿ ವುಲ್ಲಾ, ಕಿರಣ್ ಕುಮಾರ್, ಪಂಪಾಪತಿ ಸೇರಿದಂತೆ ಅನೇಕರು ಇದ್ದರು.