ಕಲಬುರಗಿ: ಶಾಸಕಿ ಖನಿಜ್ ಫಾತಿಮಾ ಅವರ ಆಪ್ತ ಸಾಹಾಯಕ ಸಂಬಂಧಿ ಆದಿಲ್ ಸೇಠ್ ಸುಲೇಮಾನಿಗೆ ರಾತ್ರಿ ವೇಳೆ ನಗರದ ಸಾಥ್ ಗುಂಬಜ್ ಬಳಿ ಬಾಸುಂಡೆ ಬರುವ ರೀತಿ ಪೋಲಿಸ್ ಆಯುಕ್ತರು ಹೊಡೆದಿದ್ದಾರೆ ಎಂದು ಶಾಸಕಿ ಅಪ್ತರಾದ ಆದಿಲ್ ಸೇಠ್ ಸುಲೇಮಾನಿ ಆರೋಪಿಸಿದ್ದಾರೆ.
ಇಂದು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಘಟನೆಯ ಕುರಿತು ಮಾಜಿ ಸಚಿವ ಶರಣ ಪ್ರಕಾಶ್ ಪಾಟೀಲ್ ಮತ್ತು ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್ ಫಾತೀಮಾ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಪೊಲೀಸರ ಸಹಾಯದಿಂದ ಕಾಂಗ್ರೆಸ್ ಅಭ್ಯರ್ಥಿಗಳನ್ನು ಹತ್ತಿಕ್ಕುವ ಕೆಲಸ ಬಿಜೆಪಿ ಮಾಡುತ್ತಿದೆ. ಬಿಜೆಪಿಗೆ ಸೋಲುವ ಭೀತಿ ಇದೆ. ಹೀಗಾಗಿ ಬಿಜೆಪಿ ಈ ಕೆಲಸಕ್ಕೆ ಕೈ ಹಾಕಿದೆ ಎಂದು ಮಾಜಿ ಸಚಿವ ಶರಣ ಪ್ರಕಾಶ್ ಪಾಟೀಲ್ ಆರೋಪಿಸಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಶೋಕ್ ಕಪನೂರ, ನಂದಕುಮಾರ ನಾಗಭೂಜಂಗೆಗೆ ಚೌಕ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎಸ್ ಆರ್ ನಾಯಕ ಬೇದರಿಕೆ ಹಾಕಿದ್ದಾರೆ ಎಂದು ಶಾಸಕಿ ಕನೀಜ್ ಫಾತೀಮಾ ತಿಳಿಸಿದರು.
ಚೌಕ್ ಠಾಣೆ, ರೋಜಾ ಠಾಣೆ ಸೇರಿದಂತೆ ಹಲವಡೆ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಬೆಂಬಲಿಗರು ಕಾರ್ಯಕರ್ತರನ್ನು ಹೇದರಿಸುವದು ಥಳಿಸುವ ಕೆಲಸ ಪೊಲೀಸರು ಮಾಡುತ್ತಿದ್ದಾರೆಂದು ಆಸಮಧಾನ ವ್ಯಕ್ತಪಡಿಸಿದರು.