ಕಲಬುರಗಿ: ಶಾಸಕಿ ಕನೀಜ್ ಫಾತೀಮಾ ಅವರ ಅಪ್ತನ ಮೇಲೆ ಕಲಬುರಗಿ ನಗರ ಪೊಲೀಸ್ ಆಯುಕ್ತರು ಹಲ್ಲೆ ನಡೆಸಿರುವುದನ್ನು ಖಂಡಿಸಿ, ಇಲ್ಲಿನ ನಗರದ ಮುಸ್ಲಿಂ ಚೌಕದಿಂದ ಪೊಲೀಸ್ ಮಹಾ ನಿರೀಕ್ಷಕರು, ಈಶಾನ್ಯ ವಲಯ, ಕಲಬುರಗಿ (I.G.P Office) ಕಚೇರಿವರೆಗೆ ಶಾಸಕ ಕನೀಜ್ ಫಾತೀಮಾ ಅವರ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕಲಬುರಗಿ ಉತ್ತರ ಕ್ಷೇತ್ರದ ಶಾಸಕರ ಸಂಬಂಧಿಕಯಾದ ಆದಿಲ್ ಸುಲೇಮಾನ್ ಅವರಿಗೆ ಬಾಸುಂಡೆ ಬರುವ ರೀತಿಯಲ್ಲಿ ಥಳಿಸಿ, ಕಾನೂನು ಕೈಗೆತ್ತಿಕೊಂಡು ಮನಸ್ಸಿಗೆ ಬಂದಂತೆ ಹಲ್ಲೆ ಮಾಡಿರುವ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ, ಪೊಲೀಸ್ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶಾಸಕಿ ಕನಿಜ್ ಫಾತೀಮಾ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಜಗದೇವ್ ಗುತ್ತೇದ್ದಾರ, ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್, ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್, ಶಾಸಕಿ ಪುತ್ರ ಫರಾಜ್ ಉಲ್ ಇಸ್ಲಾಂ, ಬಾಬಾ ಖಾನ್, ಮಹಿಳಾ ಕಾಂಗ್ರೆಸ್ ಪಕ್ಷದ ಕಾರ್ಯಾಕರ್ತರು ಸೇರಿದಂತೆ ಮುಂತಾದವರು ಇದ್ದರು.