ಆಳಂದ: ಹಲವು ಕ್ಷೇತ್ರ ಒಳಗೊಂಡು ದೇಶದ ಪ್ರಗತಿಗೆ ಮುನ್ನೂಡಿ ಬರೆಯುವ ಮಕ್ಕಳ ಶೈಕ್ಷಣಿಕ ಕ್ಷೇತ್ರಕ್ಕೆ ಶಾಲಾ ಶಿಕ್ಷಕರ ಕೊಡುಗೆ ಅಪಾರವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಭರತರಾಜ ಸಾವಳಗಿ ಅವರು ಇಂದಿಲ್ಲಿ ಹೇಳಿದರು.
ಪಟ್ಟಣದ ಗುರುಭವನದಲ್ಲಿ ರವಿವಾರ ಜಿಲ್ಲಾ ಪಂಚಾಯತ, ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಆಶ್ರಯದಲ್ಲಿ ಸರಳವಾಗಿ ಹಮ್ಮಿಕೊಂಡ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಕಾರಣಕ್ಕಾಗಿಯೇ ಸಮಾಜದಲ್ಲಿ ಶಿಕ್ಷಕರಿಗೆ ಘನತೆ ಗೌರವವಿದೆ. ಅದನ್ನು ಉಳಿಸಿ ಬೆಳೆಸಿಕೊಳ್ಳಲು ಶಿಕ್ಷಕರಾದವರು ಶ್ರಮಿಸುವ ಮೂಲಕ ಶಿಕ್ಷಣದ ಗುಣಮಟ್ಟತೆಗೆ ಒತ್ತು ನೀಡಿದರೆ ಸೇವಾ ಸಾರ್ಥಕವಾಗುತ್ತದೆ ಎಂದರು.
ತಾಲೂಕಿನ ಶಿಕ್ಷಕರ ವೇತನ ಪಾವತಿ ಸೇರಿ ಯಾವುದೇ ಕಡತವನ್ನು ಬಾಕಿಯಿಟ್ಟುಕೊಳ್ಳದೆ ವಿಲೆವಾರಿ ಮಾಡಿ ಅನುಕೂಲ ಒದಗಿಸಲಾಗಿದೆ. ಶಾಲಾ ಆರಂಭಗೊಂಡಿದ್ದು ಕೋವಿಡ್ ನಿಮಾವಳಿ ಅನುಸರಿಸಿ ಪಾಠ ಪ್ರವಚನ ಮಾಡಬೇಕು ಎಂದು ಸಲಹೆ ನೀಡಿದರು. ನಿವೃತ್ತಿ ಸನ್ಮಾನ ಸ್ವೀಕರಿಸಿದ ವಿನೋಧ ಮಠ, ಚಂದ್ರಕಾಂತ ಫುಲಾರ, ಧರ್ಮಣ್ಣಾ ಪೂಜಾರಿ, ಲವುಕುಮಾರ ಕಠಾರೆ ಮತ್ತಿತರು ಮಾತನಾಡಿ, ಮಕ್ಕಳ ಶಿಕ್ಷಣದ ಪ್ರಗತಿ ಹಾಗೂ ವೃತ್ತಿ ಜೀವನದ ಕುರಿತು ಮೆಲುಕು ಹಾಕಿದರು.
ಶಿಕ್ಷಣ ಸಂಯೋಜಕ ಪ್ರಕಾಶ ಕೊಟ್ರೆ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮರೆಪ್ಪ ಬಡಿಗೇರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಪುರಸಭೆ ಉಪಾಧ್ಯಕ್ಷ ಈರಣ್ಣಾ ಹತ್ತರಕಿ ಕಾರ್ಯಕ್ರಮ ಉದ್ಘಾಟಿಸಿದರು. ಸಮನ್ವಯಾಧಿಕಾರಿ ಗೌರಿಶಂಕರ, ಮುಖ್ಯ ಶಿಕ್ಷಕ ಶ್ರೀಮಂತ ಜಿಡ್ಡೆ ಶ್ರೀಮಂತ ಪಾಟೀಲ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ರಾಣಪ್ಪ ಸಂಗನ, ನೌಕರ ಸಂಘದ ಲೋಕೇಶ ಜಾಧವ ಉಪಸ್ಥಿತರಿದ್ದರು.
ಸಿಆರ್‌ಸಿ ಪ್ರಕಾಶ ಸೂರವಾಸೆ, ಸೈಫಾನ ಡಾಂಗೆ, ಶಿಕ್ಷಕ ಕಲ್ಯಾಣಪ್ಪ ಬಿಜ್ಜರಗಿ, ವಿಠ್ಠಲ ಕೌಲಗಿ, ವಿಶ್ವನಾಥ ಘೋಡಕೆ, ಸತೀಶ ಷಣ್ಮೂಖ ಸೇರಿದಂತೆ ತಾಲೂಕಿನ ಆಯ್ದ ಶಿಕ್ಷಕ, ಶಿಕ್ಷಕರಿಯರು ಹಾಜರಿದ್ದರು. ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ, ಕೋವಿಡ್‌ನಿಂದ ಮೃತ ಶಿಕ್ಷಕರ ಕುಟುಂಬದ ಸದಸ್ಯರಿಗೆ ಗೌರವಿಸಿ ಧೈರ್ಯ ತುಂಬಲಾಯಿತು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗುರುನಾಥ ಭಾವಿ ಗಾಯನ ಪ್ರಸ್ತುತ ಪಡಿಸಿದರು. ಪ್ರಧಾನ ಕಾರ್ಯದರ್ಶಿ ನರಸಪ್ಪ ಬಿರಾದಾರ ನಿರೂಪಿಸಿದರು. ಶಿಕ್ಷಣ ಸಂಯೋಜಕ ಶ್ರೀಮಂತ ಪಾಟೀಲ ಸ್ವಾಗತಿಸಿದರು. ಅಂಬಾರಾಯ ಕಾಂಬಳೆ ವಂದಿಸಿದರು.