ಸೇಡಂ: ಸೇಡಂ ತಾಲೂಕಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವದರಿಂದ ಮಳಖೇಡ ಸೇತುವೆ ಸಂಪೂರ್ಣ ಮುಳುಗಿ ಹೋಗಿದು ರಸ್ತೆ ಸಂಚಾರ ಸ್ಥಂಗಿತಗೊಂಡಿದು ಜೊತೆಗೆ ಗ್ರಾಮದ ಮನೆಗಳಲ್ಲಿ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದು ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ ಅವರು ಮಾತನಾಡಿ ಹೆಚ್ಚಿನ ಮಳೆ ಬಂದಾಗ ಪ್ರವಾಹ ಉಂಟಾಗಿ ಮೇಲ್ಸೇತುವೆ ಮುಳುಗಿ ಬ್ರಿಡ್ಜ್ ಮೇಲೆ ನೀರು ಹರಿಯುತ್ತದೆ. ಇದರಿಂದ ಹೈದರಾಬಾದ್- ಕಲಬುರಗಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಸಂಪೂರ್ಣ ಸ್ಥಗಿತಗೊಂಡು ಜನರು ಪರದಾಡುತಿದ್ದಾರೆ.
ಈ ಕಾಮಗಾರಿ ಪ್ರಾರಂಭವಾಗಿ 3 ವರ್ಷಗಳು ಆಗಿದರು ಇನ್ನುವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲಾ, ಮಳೆಯ ಪ್ರವಾಹ ಸ್ಥಿತಿಯಿಂದ ಕಾಗಿಣ ನದಿ ತಟದಲ್ಲಿರುವ ಮನೆಗಳಿಗೆ ನೀರು ನುಗ್ಗಿ ಇಲ್ಲಿನ ಜನರು ಅಪಾರ ಸಷ್ಟ ಅನುಭವೀಸುತಿದ್ದಾರೆ. ಅಲ್ಲದೆ ಅನೇಕ ಸಾವು ನೋವುಗಳು ಉಂಟಾಗಿವೆ. ಇಷ್ಟೆಲ್ಲಾ ಸಮಸ್ಯೆ ಆಗುತಿದ್ದರು ಸ್ಥಳಿಯ ಶಾಸಕರು ಹಾಗೂ ಅಧಿಕಾರಿಗಳು ನಿರ್ಲಕ್ಷಮಾಡುವ ಮೂಲಕ ಜನರ ಜೀವಗಳ ಜೊತೆ ಆಟವಾಡುತಿದ್ದಾರೆ ಎಂದು ಆರೋಪಿಸಿದರು.
ಈ ಕಾಮಗಾರಿ ತ್ವರಿತಗತಿಯಲ್ಲಿ ಆದಷ್ಟು ಬೇಗಾ ಪೂರ್ಣಗೋಳಿಸಬೇಕು ಹಾಗೂ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ನಷ್ಟ ವಾಗಿದ ಕುಟುಂಬಗಳಿಗೆ ಪರಿಹಾರ ನೀಡಬೇಕು ಒಂದು ವೇಳೆ ನಿರ್ಲಕ್ಷಿಸಿದರೆ ರಾಜ್ಯ ಹೆದ್ದಾರಿ ತಡೆದು ಜೆಡಿಎಸ್ ಪಕ್ಷದಿಂದ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಮಸ್ತಾನ, ಹಮೀದ, ರಂಗಪ್ಪಾ, ಸಾವಣ್ಣಾ, ತಿಪ್ಪಣ್ಣಾ, ಪ್ರಕಾಶ್, ಸಾಬಣ್ಣಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.