ಸುರಪುರ: ನಗರದ ರಂಗಂಪೇಟೆಯ ಬಸವೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚಾರಣೆ ಆಚರಿಸಲಾಯಿತು. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ವಂದಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಲಬುರಗಿ ಹಾಗೂ ಯಾದಗಿರಿ ಡಿ.ಸಿ.ಸಿ ಬ್ಯಾಂಕಿನ ಉಪಾಧ್ಯಕ್ಷ ಡಾ. ಸುರೇಶ ಸಜ್ಜನ್ ಮಾತನಾಡಿ, ಜಗತ್ತಿನ ಎಲ್ಲಾ ಹುದ್ದೆಗಳಲ್ಲಿಯು ಶಿಕ್ಷಕ ಹುದ್ದೆ ಅತ್ಯಂತ ಪವಿತ್ರ ಮತ್ತು ಗೌರಯುತವಾದದ್ದು, ಆ ಹುದ್ದೆಗೆ ಗೌರವ ತಂದು ಕೊಟ್ಟ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರು ಸರ್ವಕಾಲಕ್ಕು ಆದರ್ಶಪ್ರಾಯರು ಎಂದರು.
ಜಗತ್ತಿನ ಅತ್ಯಂತ ಮಹತ್ವದ ಹುದ್ದೆ ಮತ್ತು ಉದ್ಯೋಗಗಳಲ್ಲಿ ಶಿಕ್ಷಕ ವೃತ್ತಿಗೆ ತನ್ನದೆ ಆದ ಪಾವಿತ್ರತೆ ಹಾಗೂ ಗೌರವವಿದೆ ಆ ಕಾರಣದಿಂದ ರಾಷ್ಟ್ರಪತಿ, ಉಪರಾಷ್ಟ್ರಪತಿ ಹುದ್ದೆ ನಿಭಾಯಿಸಿದಂತಹ ಮಹಾನ್ ಸಾಧಕರು ಕೂಡ ಮರಳಿ ಶಿಕ್ಷಕ ವೃತ್ತಿಗೆ ಬಂದು ಸೇವೆ ಸಲ್ಲಿಸಿದ ಉದಾಹರಣೆ ನಮಗೆ ಸಿಗುತ್ತದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ ಅಂಗಡಿ ಮಾತನಾಡಿ, ಇಂದು ಸ್ಪರ್ದಾತ್ಮಕ ಯುಗ ಪ್ರತಿಯೊಂದರಲ್ಲು ಸ್ಪರ್ದೆ ಇರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ನಾವು ಉತ್ತಮ ಗುರಿ, ಉದ್ದೆಶ, ಸಾಧಿಸುವ ಛಲ, ಉತ್ತಮ ಅಭ್ಯಾಸ ಬೆಳಸಿಕೊಳ್ಳಬೆಕಾಗಿದೆ ಆ ದಿಶೆಯಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ಪ್ರಶ್ನಿಸಿದಾಗ ಮಾತ್ರ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಬಲಭಿಮ ಪಾಟೀಲ್, ಪ್ರಮುಖರಾದ ವಿಜಯಕುಮಾರ ಅಂಗಡಿ, ಆದಪ್ಪ ಜಾಲಹಳ್ಳಿ, ದೇವರಾಜ ನಂದಗೀರಿ, ಮಹೇಶ ಬಿಶೇಟ್ಟಿ, ಪ್ರವೀಣ ಜಕಾತಿ, ಸಂತೋಷ ಬಿಶೇಟ್ಟಿ, ಸಿದ್ದಪ್ರಸಾದ ಪಾಟೀಲ್ ಸೇರಿದಂತೆ ಇತರರು ಭಾಗವಹಿಸಿದ್ದರು.