ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪೂರಕ: ಪ್ರೊ. ಸಿ.ಎಸ್. ಬಸವರಾಜ

0
20

ಕಲಬುರಗಿ: ನಗರದ ಡಾ. ಅಂಬೇಡ್ಕರ ಕಲಾ ವಾಣಿಜ್ಯ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ರ ಬಿ.ಎ. ಬಿ.ಕಾಂ. ಪ್ರಥಮ ಸೆಮಿಸ್ಟರ ವಿದ್ಯಾರ್ಥಿಗಳಿಗಾಗಿ ಜಾಗೃತಿ ಅಭಿಯಾನ ಕಾರ್ಯಾಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ವಾಣಿಜ್ಯ ವಿಭಾಗದ ಡೀನ ಹಾಗೂ ಎನ್.ಇ.ಪಿ ೨೦೨೦ರ ಸಂಯೋಜಕರಾದ ಪ್ರೊ. ಸಿ.ಎಸ್. ಬಸವರಾಜರ ಅವರು ಮಾತನಾಡುತ್ತಾ ವಿದ್ಯಾರ್ಥಿಗಳು ಹಾಗೂ ಸಮಾಜ ಕಾಲಕಾಲಕ್ಕೆ ಬದಲಾಗಬೇಕು ಎಂಬ ನೀತಿಯ ಮೂಲಕ ಹೊಸ ರಾಷ್ಟೀಯ ಶೀಕ್ಷಣ ನೀತಿಯನ್ನು ಅಳವಡಿಸಲಾಗಿದೆ. ವಿದ್ಯಾರ್ಥಿ ಕೇಂದ್ರಿತ ಕ್ರೇಡಿಟ್ ಪದ್ದತಿ ವಿಷಯ ಆಯ್ಕೆಗೆ ಮತ್ತು ಕೌಶಲ್ಯ ಅಳವಡಿಕೆಗೆ ಹೆಚ್ಚು ಮಹತ್ವ ನೀಡಿದೆ ಎಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಕೆಪಿಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ. ಮಾರುತಿರಾವ ಡಿ. ಮಾಲೆ ರವರು ಮಾತನಾಡಿ ಡಾ. ಬಿ.ಆರ್. ಅಂಬೇಡ್ಕರ ರವರು ನುಡಿದಂತೆ ಮನುಷ್ಯನ ಮನಸ್ಸು ಸ್ವತಂತ್ರವಾಗಿರಬೇಕು ಎನ್ನುವ ಹಾಗೆ ವಿದ್ಯಾರ್ಥಿಗಳಿಗೆ ವಿಷಯ ಆಯ್ಕೆಗಳಲ್ಲಿ ಸ್ವಾತಂತ್ರ್ಯ ಕೊಡಬೇಕು. ಡಾ. ಅಂಬೇಡ್ಕರರವರು ಹೇಳಿದ ಹಾಗೆ ಭಾರತದ ದೇಶದ ಇತಿಹಾಸ ಬದಲಾಗಬೇಕು ಎಂದಿದ್ದರು. ಅದು ಎನ್.ಇ.ಪಿ ಯಿಂದ ಸಾಧ್ಯ ಎಂದು ನುಡಿದರು ಹಾಗೇಯೆ ಮಕ್ಕಳ ಮನಸ್ಸು ಮತ್ತು ಭಾವನೆಗಳು ಚೆನ್ನಾಗಿ ಇಟ್ಟುಕೊಳ್ಳಬೇಕು. ಚೆನ್ನಾಗಿ ಇಟ್ಟುಕೊಂಡರೆ ದೇಶ ಸದೃಢವಾಗುತ್ತೆ ಹಾಗು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗಳು ಕೂಡ ಸಾಧ್ಯವಾಗುತ್ತದೆ ಎಂದು ಹೇಳಿದರು.

Contact Your\'s Advertisement; 9902492681

ಪ್ರಾಸ್ಥಾವಿಕವಾಗಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಗಿರೀಶ ಮೀಶಿ ರವರು ಎನ್.ಇ.ಪಿ. ೨೦೨೦ರ ಪಕ್ಷಿ ನೋಟದ ಮೇಲೆ ಬೆಳಕು ಚೆಲ್ಲಿದರು. ಅತಿಥಿಗಳಾಗಿ ಡಾ. ಚಂದ್ರಶೇಖರ ಶೀಲವಂತ, ಪ್ರೊ. ಸಿದ್ದಪ್ಪ ಕಾಂತಾ ಭಾಗವಹಿಸಿದರು.

ಈ ಸಂದರ್ಭದಲ್ಲಿ ಡಾ. ಗಾಂಧೀಜಿ ಮೋಳಕೇರೆ ನಿರ್ವಹಣೆ ಮಾಡಿದರು. ಕಾಲೇಜಿನ ಎನ್.ಇ.ಪಿ. ನೋಡಲ್ ಅಧಿಕಾರಿಯಾದ ಡಾ. ನಿರ್ಮಲಾ ಸಿರಗಾಪುರ ರವರು ಸ್ವಾಗತಿಸಿದರು, ಡಾ. ಹರ್ಷವರ್ಧನ ಬಡಿಗೇರ ರವರು ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here