ನಕಲಿ ಬೀಜ ವಿತರಣೆ: ಸರಡಗಿ ಆರೋಪ

0
45

ಕಲಬುರಗಿ: ಕಲಬುರಗಿ ಜಿಲ್ಲೆಯ ಶ್ರೀನಿವಾಸ ಸರಡಗಿ ಗ್ರಾಮದ ಹಾಗೂ ಸುತ್ತಮುತ್ತಲ್ಲಿನ ಗ್ರಾಮ ರೈತರಿಗೆ ನಕಲಿ ಬೀಜ ವಿತರಣೆ ಮಾಡಿರುವ ದೀಪಕ ಗಿಲ್ಡಾ ರವರ ಕಂಪನಿ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಜಯ ಕರ್ನಾಟಕ ರಕ್ಷಣಾ ಸೇನೆಯೂ ಕೃಷಿ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದರು.

ಈ ಕುರಿತು ಮನವಿ ಮಾಡಿರುವ ಸಂಘಟನೆಯ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಎಸ್ ಸರಡಗಿ ಮಾತನಾಡಿ ದೀಪಕ್ ಗಿಲ್ಡಾ ಬಳಿ ರೈತ ಸಿದ್ದಪ್ಪ ಪೂಜಾರಿ ಕಂಟಿಕಾರ ಅವರು ೯೦ ಕೆಜಿ ಹಾಗೂ ಶ್ರೀನಿವಾಸ ಸರಡಗಿ ಗ್ರಾಮದ ಸುಮಾರು ೮೦ ರಿಂದ ೧೦೦ ಎಕರೆ ಜಮೀನಿನಲ್ಲಿ ರೈತರು ತಮ್ಮ ತಮ್ಮ ಜಮೀನಿನಲ್ಲಿ ದೀಪಕ್ ಗಿಲ್ಡಾ ಅವರ ಹತ್ತಿರ ಹೆಸರು ಬೀಜ ಖರೀದಿಸಿ ಹೆಸರು ಬೀಜ ಬಿತ್ತನೆ ಮಾಡಿರುತ್ತಾರೆ ರೈತರು ಬಿತ್ತನೆ ಮಾಡಿ ೬೦ ದಿನ ಕಳೆದರು ಇನ್ನೂ ಮಗ್ಗಿ ಹೂವು ಬಿಡುವ ಹಂತದಲ್ಲಿ ಇರುವುದಿಲ್ಲ.

Contact Your\'s Advertisement; 9902492681

ಎಲ್ಲಾ ರೈತರು ತಮ್ಮ ಜಮೀನುಗಳಿಗೆ ಹೋಗಿ ನೋಡಿ ಗಾಬರಿಗೊಂಡು ನಿಸ್ಸಾಹಕರಾಗಿ ಏನು ತೋಚದೇ ಕಂಗಲಾಗಿದ್ದಾರೆ. ಈ ಹೆಸರು ಬೀಜ ನಂಬರ ಒಂದು ಇರುತ್ತದೆ ಎಂದು ಹೇಳಿ ಈಗ ರೈತರು ಹೆಸರು ಬೀಜ ಖರೀದಿಸಿ ಮಾಲೀಕರನ್ನು ಕೇಳಲು ಹೋದಾಗ ಲೋಕಲ್ ಬೀಜ ಇರುತ್ತವೆ ಎಂದು ಹೇಳತ್ತಾರೆ. ಆದ್ದರಿಂ ೬೦ ದಿವಸಗಳಾದರೂ ಮಗ್ಗಿ ಹೂವು ಬಿಡದೇ ಗೊಡ್ಡು ಹೂವು ಹೋಗಿರುವುದರಿಂದ ಸರಕಾರದ ವತಯಿಂದ ಬೆಳೆ ಪರಿಹಾರ ಧನ ಒದಗಿಸಿಕೊಡಬೇಕು ಮತ್ತು ನಕಲಿ ಬೀಜ ವಿತರಣೆ ಮಾಡಿದ ದೀಪಕ ಗಿಲ್ಡಾ ಕಂಪನಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸರಡಗಿ ಅವರು ಕೃಷಿ ಸಹಾಯಕ ನಿರ್ದೇಶಕರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಗ್ರಾಮೀಣ ಮತಕ್ಷೇತ್ರದ ಸಂಯೋಜಕ ಶಿವಾನಂದ ಆರ್ ಕಿಳ್ಳಿ, ಕುರುಬ ಸಮಾಜದ ಅಧ್ಯಕ್ಷ ಸಿದ್ದಪ್ಪ ಪೂಜಾರಿ ಕಂಟಿಕಾರ, ಯುವ ಮುಖಂಡರಾದ ಮಲ್ಲಿಕಾರ್ಜುನ ಶ್ರೀಗನ್, ರಮೇಶ್ ಮೀಸಿ, ಶರಣಪ್ಪ ವಗ್ಯಾ, ಅನಿಲ್ ಹರಸೂರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here