ಚಿಂಚೋಳಿಯಿಂದ ಐನಾಪೂರವರೆಗೆ ಕಳಪೆ ಕಾಮಗಾರಿ ವಿರುದ್ಧ ಸಿಎಂಗೆ ರಾಜು ಮನವಿ

0
37

ಕಲಬುರಗಿ: ಗ್ರಾಮೀಣಾಭಿವೃದ್ಧಿ ಸಚಿವಾಲಯ ಭಾರತ ಸರ್ಕಾರ ಅನುದಾನಿತ ಪ್ರಧಾನ ಮಂತ್ರಿ ಗ್ರಾಮ ಸಡಕ ಯೋಜನೆಯಡಿಯಲ್ಲಿ ಒಟ್ಟು ಅಂದಾಜು ಮೊತ್ತ ರೂ. ೧೨ ಕೋಟಿ (ಎರಡು ಕಾಮಗಾರಿ ಸೇರಿ) ಅನುದಾನದಲ್ಲಿ ಕೈಗೊಂಡ ರಸ್ತೆ ಸುಧಾರಣೆ ಮತ್ತು ಡಾಂಬರಿಕರಣ ಕಾಮಗಾರಿಯು ಅತ್ಯಂತ ಕಳಪೆ ಮಟ್ಟದಾಗಿ ನಡೆದಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಭಾರತೀಯ ಯುವ ಸೈನ್ಯ ಸಂಸ್ಥಾಪಕ ಅಧ್ಯಕ್ಷ ಶ್ರೀನಿವಾಸ ರಾಜು ಡೊಣ್ಣಿಗೇರಿ ಮನವಿ ಸಲ್ಲಿಸಿದರು.

ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಸ್ಥಳ ಪರಿಶೀಲಿಸಿ ಕಾಮಗಾರಿಯ ಉದ್ದಗಲೂಕ್ಕೂ ಯಾವುದೇ ಗುಣಮಟ್ಟದ ಸಾಮಗ್ರಿಗಳು ಬಳಸಿರುವುದಿಲ್ಲ ಮತ್ತು ಕಾಮಗಾರಿ ಸ್ಥಳದಲ್ಲಿ ಹಾಕಿದ ಬೋರ್ಡನಲ್ಲಿ ವಿವರಿಸಿದಂತೆ ರಸ್ತೆಯ ಮಾದರಿ ಸೀಳು ನೋಟ ಮತ್ತು ಕಐಗೊಂಡ ಕಾಮಗಾರಿಯು ತದ್ವಿರುದ್ಧವಾಗಿರುತ್ತದೆ ಯೋಜನೆ ಮಾದರಿ ಸೀಳು ನೋಟದಲ್ಲಿ ತೋರಿಸಿದಂತೆ ಯಾವುದೇ ಕಾಮಗಾರಿ ಆಗಿರುವುದಿಲ್ಲ. ಕೇವಲ ಈಗಗಲೇ ಇರುವ ರಸ್ತೆ ಮೇಲೆ ೨೦ ಎಮ್.ಎಮ್. ಡಾಂಬರೀಕರಣ ಮಾತ್ರ ಆಗಿರುತ್ತದೆ ಒಟ್ಟಾರೆಯಾಗಿ ಸದರಿ ಕಾಮಗಾರಿಗಳು ನಿಯಮಗಳ ಪ್ರಕಾರ ಆಗದೇ ಸಂಪೂರ್ಣ ಕಾಮಗಾರಿ ಕಳಪೆ ಮಟ್ಟದ್ದಾಗಿದ್ದು ಸದರಿ ಕಾಮಗಾರಿಯ ಬಿಲ್ ಎತ್ತುತ್ತಿದ್ದಾರೆ ಎಂದು ಮನವಿ ಪತ್ರ ತಿಳಿಸಿದರು.

Contact Your\'s Advertisement; 9902492681

ಕಮಗಾರಿಯೂ ಯಾವ ಮಟ್ಟದ್ದಾಗಿರುತ್ತದೆ ಎಂದು ಪರಿಶೀಲಿಸಿದ ನಂತರವೇ ಬಿಲ್ ಮಾಡಲು ನಮ್ಮ ತಕರಾರು ಇರುವುದಿಲ್ಲ. ಸಹಾಯಕ ಅಭಿಯಂತರರಾದ ಲಕ್ಷ್ಮೀನಾರಾಯಣ ರೆಡ್ಡಿ ಮತ್ತು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಚಂದ್ರಕಾಂತ ಇವರು ಗುತ್ತಿಗೆದಾರರೊಂದಿಗೆ ಶಾಮಿಲಾಗಿ ಕಳಪೆ ಕಾಮಗಾರಿಯಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಸದರಿ ಅಧಿಕಾರಿಗಳು ನಿಯಮಗಳನ್ನು ಪಾಲಿಸದೇ ಭ್ರಷ್ಟತನದಿಂದ ಪರ್ಸೆಂಟೆಜ್ ಸಲುವಾಗಿ ಇಂತಹ ಗುತ್ತೇದಾರರು ತಲೆ ಎತ್ತುವಂತಾಗಿದೆ.

ಆದ್ದರಿಂದ ಕಳಪೆ ಮಟ್ಟದ ಕಾಮಗಾರಿ ನಿರ್ವಹಿಸಲು ಅನುವು ಮಾಡಿಕೊಟ್ಟ ಸದರಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ, ಸದರಿ ಅಧಿಕಾರಿಗಳನ್ನು ವಜಾಗೊಳಿಸಬೇಕು ಹಾಗೂ ಗುತ್ತಿಗೆದಾರರ ಲೈಸೆನ್ಸ್ ರದ್ದುಗೊಳಿಸಿ ಇವರನ್ನು ಕಪ್ಪು ಪಟ್ಟಿಗೆ ಸೇರಿಸಿ, ಸಾರ್ವಜನಿಕ ಹಿತದೃಷ್ಟಿಯಿಂದ ಮುಖ್ಯಮಂತ್ರಿಗಳು ನ್ಯಾಯ ಒದಗಿಸಿ ಇವರ ಮೇಲೆ ಶಿಸ್ತಿನ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಕಲಬುರಗಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕಲಬುರಗಿ ರವರಿಗೆ ಮನವಿ ಮಾಡಿಕೊಂಡಿದ್ದು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಂಬಂಧಪಟ್ಟ ಕಾರ್ಯನಿರ್ವಾಹಕ ಅಭಿಯಂತರರಾದ ಚಂದ್ರಕಾಂತ ಮತ್ತು ಸಹಾಕಯ ಅಭಿಯಂತರರಾದ ಲಕ್ಷ್ಮೀನಾರಾಯಣ ರೆಡ್ಡಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಆದೇಶವನ್ನು ಸಹ ಪಾಲಿಸದೇ ಗುತ್ತಿಗೆದಾರರ ಜೊತೆಗೆ ಶ್ಯಾಮಿಲಾಗಿದ್ದು ಯಾವುದೇ ಕ್ರಮಕೈಗೊಂಡಿರುವುದಿಲ್ಲ ಮತ್ತು ಎಲ್ಲಾ ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿಯನ್ನು ಒದಗಿಸುತ್ತಿರುವ ಗುತ್ತಿಗೆದಾರರಿಗೆ ರಕ್ಷಿಸದೇ ಅವರ ಮೇಲೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here