ಬೆಲೆ ಏರಿಕೆಯಿಂದಾಗಿ ಜನರ ಬದುಕ ದುಸ್ತರವಾಗುತ್ತಿದೆ: ಶಾಸಕ ಡಾ. ಅಜಯ್ ಸಿಂಗ್ ತೀವ್ರ ಕಳವಳ

0
21

ಕಲಬುರಗಿ: ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಜನರ ಬವಣೆ ಕಣ್ಣಿಗೆ ಕಾಣುತ್ತಿಲ್ಲ. ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದರೂ ಅದ್ಯಾವುದು ಕೇಂದ್ರ, ರಾಜ್ಯ ಸರಕಾರಗಳಿಗೆ ಕಾಣುತ್ತಿಲ್ಲ, ತುತ್ತು ಅನ್ನ ಬೇಯಿಸಿಕೊಂಡು ಹೊಟ್ಟೆ ಹೊರೆಯಲಿಕ್ಕೂ ಆಗದಂತಹ ವಾತಾವರಣ ದೇಶಾದ್ಯಂತ ನಿರ್ಮಾಣವಾಗುತ್ತಿದ್ದರೂ ಆಳುವವರು ಜಾಣ ಕುರುಡುತನ ಧೋರಣೆ ತಾಳಿದ್ದಾರೆಂದು ವಿಧಾನಸಬೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕರಾಗಿರುವ ಡಾ. ಅಜಯ್ ಸಿಂಗ್ ತೀವ್ರ ಕಳವಳ ಹೊರಹಾಕಿದ್ದಾರೆ.

ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕೆಪಿಸಿಸಿ ಕ್ವೀನ್ಸ್ ರಸ್ತೆಯಿಂದ ವಿಧಾನಸೌಧದ ಎಕಂಗಲ್ ಹನುಮಂತಯ್ಯನವರ ಪ್ರತಿಮೆವರೆಗೂ ಆಯೋಜಿಸಿದ್ದ ಸೈಕಲ್ ಜಾಥಾದಲ್ಲಿ ಭಾಗವಹಿಸಿದ ನಂತರ ಅವರು ಮಾತನಾಡುತ್ತ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನ ವಿರೋಧಿ ನೀತಿಗೆ ಆಕ್ರೋಶ ಹೊರಹಾಕಿದರು.

Contact Your\'s Advertisement; 9902492681

ಕೇಂದ್ರ ಸರ್ಕಾರದ ನಿರಂತರ ಪೆಟ್ರೋಲ್- ಡಜೀಸೆಲ್ ಬೆಲೆ ಹೆಚ್ಚಿಸುತ್ತಿದೆ. ಉಣ್ಣುವ ಎಣ್ಣೆಯ ಬೆಲೆಯೂ ಹೆಚ್ಚುತ್ತಿದ್ದರೂ ಕೇಳೋರಿಲ್ಲದಂತಾಗಿದೆ. ಇತ್ತ ಅಡುಗೆ ಅನಿಲದ ಬೆಲೆಯೂ ಗಗನಕ್ಕೇರುತ್ತಿದ್ದರೂ ಯಾರೂ ಕ್ಯಾರೆ ಎನ್ನೋರಿಲ್ಲ. ಇಂಧನ ಬೆಲೆ ಹೆಚ್ಚಳದ ಪರಿಣಾಮವಾಗಿ ದಿನಬಳಕೆ ವಸ್ತುಗಳ ದರಗಲೆಲ್ಲವೂ ಹೆಚ್ಚಿದ್ದು ಬೆಲೆ ಅರಿಕೆಯ ಬಿಸಿಗೆ ಜನಸಾಮಾನ್ಯರು ನಲುಗಿದ್ದಾರೆ. ಬದುಕೇ ಇವರಿಗೆ ಕಷ್ಟಕರವಾಗಿದೆ. ನಿತ್ಯ ತುತ್ತು ಅನ್ನ ಬೇಯಿಸಿ ತಿನ್ನಲಿಕ್ಕೂ ಆಗದ ದುರವಸ್ಥೆ ಜನರಿಗೆ ಬಂದೊದಗಿದ್ದರೂ ಆಳುವವರು ಕ್ಯಾರೆ ಎನ್ನುತ್ತಿಲ್ಲವಂದು ಡಾ. ಅಜಯ್ ಸಿಂಗ್ ದೂರಿದ್ದಾರೆ.

ರಾಜ್ಯ ಸರಕಾರವೂ ಕೇಂದ್ರದ ಧೋರಣೆಗೆ ಕೈ ಜೋಡಿಸಿದಂತಿದೆ. ಇಂಧನ ತೆರಿಗೆಗಳ ಮೇಲೆ ತನ್ನ ಪಾಲಿನ ತೆರಿಗೆ ವಿಧಿಸೋದನ್ನ ಕೈಬಿಡಬಹುದು, ಆ ಮೂಲಕ ರಾಜ್ಯದಲ್ಲಾದರೂ ನಾಲ್ಕಾರು ರುಪಾಯಿ ಇಂಧನ ಬೆಲೆ ತಗ್ಗುತ್ತದೆ. ಈ ಕೆಲಸಕ್ಕೂ ರಾಜ್ಯದ ಬಿಜೆಪಿ ಸರಕಾರ ಮನಸ್ಸು ಮಾಡುತ್ತಿಲ್ಲ. ಇದದರಿಂದಾಗಿ ಜನರ ಬವಣೆಗಳು ಹೆಚ್ಚುತ್ತಿವೆಯೇ ಹೊರತು ಕಮ್ಮಿಯಾಗುತ್ತಿಲ್ಲ. ಇದರಿಂದಾಗಿ ಬೊಮ್ಮಾಯಿ ಸರಕಾರವೂ ಜನರ ಹಿತಕಾಯುವಲ್ಲಿ ವಿಫಲವಾಗಿದೆ ಎಂದು ಡಾ. ಸಿಂಗ್ ತಿವಿದಿದ್ದಾರೆ.

ನಾಡಿನ ಜನ ಸಂಕಷ್ಟಕ್ಕೆ ಸಿಲುಕಿರುವದರ ಹಿನ್ನೆಲೆಯಲ್ಲಿ ಜನರೆಲ್ಲರ ಧ್ವನಿಯಾಗಿ ಕಾಂಗ್ರೆಸ್ ಪಕ್ಷ ಬೆಲೆ ಏರಿಕೆ ವಿರುದ್ಧ ದನಿ ಎತ್ತಿದೆ. ಕೇಂದ್ರ- ರಾಜ್ಯ ಸರಕಾರಗಳನ್ನು ತಿವಿಯುವ ಮೂಲಕ ನಿರಂತರ ಹೋರಾಟ ರೂಪಿಸಲಾಗುತ್ತಿದೆ. ಅಂತಹ ಸರಮಿ ಹೋರಾಟದ ಬಾಗವಾಹಿ ಇಂದು ಸೈಕಲ್ ಜಾಥಾ ಮಾಡಲಾಗಿದೆ. ಸದನದಲ್ಲಿಯೂ ಈ ಸಂಗತಿ ಚರ್ಚೆಗೆ ಎಳೆಯುವ ಮೂಲಕ ಸರಕಾರಕ್ಕೆ ಚಾಟಿ ಬೀಸುತ್ತೇವೆ ಎಂದೂ ಡಾ. ಅಜಯ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here