ಕಲಬುರಗಿ: ಸೆಪ್ಟೆಂಬರ್ ೨೮ ರಂದು ಬೆಳಗ್ಗೆ ೧೧ ಗಂಟೆಗೆ ನಗರದ ರಾಮಮಂದಿರ ಹಿಂದಗಡೆ ಹೊಸ ಜೀವರ್ಗಿ ರಸ್ತೆಯಲ್ಲಿರುವ ಶರಣ ಹರಳಯ್ಯ ಸಮುದಾಯ ಸಭಾ ಭವನದಲ್ಲಿ ಜಿಲ್ಲಾ ಹಡಪದ ಸಮಾಜದ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ.
ಈ ಸಭೆಗೆ ಕಲಬುರ್ಗಿ ಜಿಲ್ಲೆಗೆ ಒಳಪಡುವ ಎಲ್ಲಾ ತಾಲೂಕಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಸಮಾಜದ ಬಾಂಧವರು ತಪ್ಪದೆ ಬರಬೇಕು ಹಾಗೂ ಕಲಬುರ್ಗಿ ಜಿಲ್ಲೆಯಾದ್ಯಂತ ಇರುವ ಎಲ್ಲಾ ಹಡಪದ ಸಮಾಜದ ಹಿರಿಯರು ಸಮಾಜದ ಮುಖಂಡರು ಯುವಕರು ತಾಯಂದಿರ ಸಭೆಗೆ ಬಂದು ಸಭೆಯನ್ನು ಯಶಸ್ವಿಗೊಳಿಸಬೇಕಾಗಿ ಪತ್ರಿಕಾ ಪ್ರಕಟಣೆ ಮೂಲಕ ಹಡಪದ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಹಡಪದ್ ನೀಲೂರ್ ಅವರು ಮಾಡಿದ್ದಾರೆ.