ಕನಿಷ್ಠ ವೇತನ, ಪಿಂಚಣಿಗಾಗಿ ಒತ್ತಾಯಿಸಿ ಪ್ರತಿಭಟನೆ

0
45

ಶಹಾಬಾದ: ಕನಿಷ್ಠ ವೇತನ, ಪಿಂಚಣಿ ಹಾಗೂ ಮರಣ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ಶುಕ್ರವಾರ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಹಾಗೂ ಅಕ್ಷರ ದಾಸೋಹ ನೌಕರರ ಸಂಘ, ಆಶಾ ಕಾರ್ಯಕರ್ತೆಯರ ಸಂಘದಿದಂದ ಪ್ರತಿಭಟನೆ ನಡೆಸಿ ತಹಸೀಲ್ದಾರ ಮುಖಾಂತರ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಿದರು.

ಕೋವಿಡ್ ಸಂಕಷ್ಟದ ಸಮಯದಲ್ಲಿ ಕರ್ತವ್ಯ ನಿರ್ವಹಿಸಿದ ನಮಗೆ ಕೋವಿಡ್‌ನ ಸಕಲ ಸೌಲಭ್ಯ ನೀಡಿ.ನಿಯತಕಾಲಿಕವಾಗಿ ಉಚಿತ ಕೋವಿಡ್ ಪರೀಕ್ಷೆ ನಡೆಸಿ.ಕೋವಿಡ್ ಸೋಂಕಿತ ನೌಕರರಿಗೆ ಆಸ್ಪತ್ರೆ ಸೇವೆಯಲ್ಲಿ ಮೊದಲ ಆದ್ಯತೆ ನೀಡಿ ಎಂದು ಆಗ್ರಹಿಸಿದರು.

Contact Your\'s Advertisement; 9902492681

ಅಲ್ಲದೇ ೬% ಜಿಡಿಪಿಯನ್ನು ಆರೋಗ್ಯಕ್ಕೆ ಕ್ಷೇತ್ರಕ್ಕೆ ಒದಗಿಸಿ. ಸಮಪರ್ಕವಾದ ಬೆಡ್‌ಗಳು, ಆಮ್ಲಜನಕ ಮತ್ತಿತ್ತರ ಆರೋಗ್ಯ ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಸಾರ್ವಜನಿಕ ಆರೋಗ್ಯ ಕ್ಷೇತ್ರ ಮತ್ತು ಆರೋಗ್ಯ ಸಂಪನ್ಮೂಲಗಳನ್ನು ಬಲಪಡಿಸಿ. ಆರೋಗ್ಯ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಿ ಎಂದರು. ಸೇವಾ ಅವಧಿಯಲ್ಲಿ ಮೃತಪಟ್ಟ ಎಲ್ಲಾ ನೌಕರರಿಗೆ ೫೦ ಲಕ್ಷ ರೂ. ವಿಮಾ ಸುರಕ್ಷೆ ಒದಗಿಸಬೇಕು.ಕೋವಿಡ್ ಸೊಂಕಿತ ಫ್ರಂಟ್ ಲೈನ್ ನೌಕರರು ಹಾಗೂ ಅವರ ಕುಟುಂಬಸ್ಥರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು.

ಹೆಚ್ಚುವರಿಯಾಗಿ ಕೋವಿಡ್-೧೯ ಸವೆಯಲ್ಲಿ ನಿರತರಾಗಿರುವ ಎಲ್ಲಾ ಗುತ್ತಿಗೆ ನೌಕರರಿಗೆ ಮಾಸಿಕ ೧೦ ಸಾವಿರ ರೂ. ಕೋವಿಡ್ ಅವಘಡ ಭತ್ಯೆ ಒದಗಿಸಬೇಕು. ನೂತನ ಶಿಕ್ಷಣ ನೀತಿಯಿಂದ ಐಸಿಡಿಎಸ್ ಮತ್ತು ಬಿಸಿಯೂಟ ಯೋಜನೆಗಳನ್ನು ರಕ್ಷಿಸಬೇಕೆಂದು ಹೇಳಿದರು.

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ತಾಲೂಕಾಧ್ಯಕ್ಷೆ ಶೇಖಮ್ಮ ಕುರಿ, ಪ್ರಧಾನಕಾರ್ಯದರ್ಶಿ ಮಲ್ಲಮ್ಮ, ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಸಂಪತ್ತಕುಮಾರಿ,ರುದ್ರಮ್ಮ, ಧನಲಕ್ಷ್ಮಿ, ಗಂಗೂಬಾಯಿ, ಲಕ್ಷ್ಮಿ, ಶಾರದಾ,ಜುಲೇಖಾ ಸೇರಿದಂತೆ ಅನೇಕರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here