ಕಲಬುರಗಿ: ದೇಶದ 152 ಆಕಾಶವಾಣಿ ಮತ್ತು ದೂರದರ್ಶನ ಕೆಂದ್ರಗಳನ್ನು ಅಕ್ಟೊಬರ 31ರೊಳಗೆ ಮುಚ್ಚುವಂತೆ ಪ್ರಸಾರ ಭಾರತಿಯ ಆರ್.ಎನ್. ಮೀನಾ ಅವರು ಆದೇಶಿಸಿದರೆ, ನಮ್ಮ ಲೋಕಸಭಾ ಸದಸ್ಯರಾದ ಡಾ.ಉಮೇಶ ಜಾದವ್ ಅವರು ಪ್ರಾದೇಶಿಕ ನಿರ್ದೆಶಕರಾದ ವಿ.ರವಿಕಾಂತ ಅವರೊಂದಿಗೆ ಮಾತಾಡಿದ್ದೇನೆ ಕಲಬುರಗಿ ದೂರದರ್ಶನ ರದ್ದಾಗುವುದಿಲ್ಲ ಇದು ಸುಳ್ಳು ಮತ್ತು ಅಪ್ರಚಾರವೆಂದಿದ್ದಾರೆ. ಇದರಲ್ಲಿ ಯಾವುದು ಸತ್ಯವೆಂಬುದು ತಿಳಿಯದೆ ಈ ಭಾಗದ ಜನತೆ ಹಾಗೂ ಸಾಂಸ್ಕ್ರತಿಕ ಲೋಕ ಕಳವಳಕ್ಕೀಡಾಗಿದೆ.
ಈ ಬಗ್ಗೆ ನವದೇಹಲಿಯ ದೂರದರ್ಶನ ಪ್ರಸಾರ ಭಾರತಿಯಿಂದ ಸ್ಪಷ್ಟನೆಗೊಳಿಸಬೇಕು. ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ವೀರಭದ್ರ ಸಿಂಪಿ ಅವರು ಪತ್ರಿಕಾ ಪ್ರಕಟಣೆ ಮೂಲಕ ಲೋಕಸಭಾ ಸದಸ್ಯರಾದ ಡಾ. ಉಮೇಶ ಜಾಧವ ಅವರಗೆ ಒತ್ತಾಯಿಸಿದ್ದಾರೆ.
ಕಲಬುರಗಿ ದೂರದರ್ಶನ ಕೇಂದ್ರದಲ್ಲಿ 120 ಸಿಬ್ಬಂದಿಗಳಲ್ಲಿ ಈಗ ತಾವು ಹೇಳಿದಂತೆ ಆಡಳಿತಗಾರರು, ಇಂಜನೀಯರಗಳು, ಸಿಪಾಯಿಗಳು ಸೇರಿ 27 ಜನರಿದ್ದಾರೆ, ಹೊರತು, ಕಾರ್ಯತಾಂತ್ರಿಕರು, ಕಾರ್ಯಕ್ರಮಗಳು ನಿರ್ವಾಹಕರು,ಗ್ರಾಫೀಕ್ ಕಲಾವಿದರು, ರಂಗ ಸಜ್ಜಿಕೆ ದಾರರು,ಸಂಕಲನ ಇತರೆ 97 ಸಿಬ್ಬಂದಿಗಳನ್ನು ಈಗಾಗಲೆ ವರ್ಗಾಯಿಸಲಾಗಿದೆ. ಇದರಿಂದಲೇ ನಾಲ್ಕು ವರ್ಷಗಳಿಂದ ಕಲಬುರಗಿ ದೂರದರ್ಶನ ಕೇಂದ್ರದ ಕಾರ್ಯಕ್ರಮ ಪ್ರಸಾರ ಪಡಿಸದೆ ಮುಚ್ಚಿ. ಕಾವಲುಗಾರರಾಗಿ ಕುಳಿತಂತಾಗಿದೆ.
ತಮ್ಮ ಕಳಕಳಿ ಆಸಕ್ತಿಗೆ ಮೆಚ್ಚುತ್ತೇವೆ. ತಾವು ಮತ್ತು ಕೇಂದ್ರ ಸಚಿವ ಭಗವಂತಪ್ಪ ಖೂಬಾ ಅವರು ಮಾತು ಕೊಟ್ಟಂತೆ ಏನೇ ಸಮಸ್ಯೆಗಳಿದ್ದರೂ ದೇಶದ ಪ್ರಥಮ ಕಲಬುರ್ಗಿ ದೂರದರ್ಶನ ಕೇಂದ್ರ ಉಳಿಸಿ ಕೊಡುವುದಾಗಿ ಹೇಳಿದಂತೆ ತಮ್ಮದೆ ಪಕ್ಷದ ಸರ್ಕಾರಕ್ಕೆ ಈ ಭಾಗದ ಮಹತ್ವತೆ ಮತ್ತು ಅಗತ್ಯತೆಗಳನ್ನು ಮನವರಿಕೆ ಗೊಳಿಸಿ, ಡಿಜಿಟೆಲ್ಲಗಳೊಂದಿಗೆ ಉಳಿಸಿ,ಬೆಳಸಿ ರೈತರಿಗೆ, ಯುವಜನತೆಗೆ, ಇತಿಹಾಸ, ಐತಿಹಾಸಿಕ ಪರಂಪರೆಯ ಸಾಂಸ್ಕೃತಿಕ ಲೋಕದ ಈ ನೆಲಕ್ಕೆ ತಮ್ಮ ಕೊಡುಗೆ ನೀಡಿದಂತಾಗಲಿದೆ ಎಂದು ವೀರಭದ್ರ ಸಿಂಪಿ ಅವರು ಕೊಂರಿದ್ದಾರೆ.