ಕಲಬುರಗಿ: ಇಂದು ಚಂದ್ರನಗರ ಗ್ರಾಮದಲ್ಲಿ ಬಡ ಕೂಲಿ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಆಹಾರ ಕಿಟ್ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಗುರಪ್ಪ ದಂಡುಗುಲಕರ್ ಮಾತಾಡಿದರು. ಮುಖ್ಯ ಅಥಿತಿಗಳಾಗಿ ಯುವ ಹೋರಾಟಗಾರರಾದ ಸುನೀಲ್ ಮಾನಪಡೆ ಮಾತನಾಡಿ ಕೋವಿಡ್ ಮಾಹಾಮಾರಿಯಿಂದ ಬಡವರ ಬದುಕು ಸಾಗಿಸಲು ತುಂಬಾ ಕಷ್ಟ ಪಡುತ್ತಿದ್ದಾರೆ ಹಿಂತಾ ಸಮಯದಲ್ಲಿ ಸರ್ಕಾರದ ಸವಲತ್ತುಗಳನ್ನು ತಲುಪಿಸುವ ನಿಟ್ಟಿನಲ್ಲಿ ರೈತ ಸಂಘದ ಪ್ರಯತ್ನ ಮಾಡುತ್ತಿದ್ದೆ , ಚಂದ್ರನಗರ ಗ್ರಾಮದಲ್ಲಿ ಪ್ರತಿಯೊಬ್ಬರು ಜಮೀನು ಇಲ್ಲದೆ ಕೇವಲ ಕೂಲಿ ಕಾರ್ಮಿಕರ ಕೆಲಸವನ್ನೇ ಅವಲಂಬಿಸಿದ್ದಾರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸವಲತ್ತುಗಳನ್ನು ಒದಗಿಸುವ ನಿಟ್ಟಿನಲ್ಲಿ ರೈತ ಸಂಘ ಹೋರಾಟ ನಡೆಸಲಿದೆ ಎಂದರು.
ರೈತ ಸಂಘದ ಜಿಲ್ಲಾ ಮುಖಂಡರಾದ ಶಾಂತಪ್ಪ ಪಾಟೀಲ್ ಸನ್ನೂರ ಅವರು ಮಾತನಾಡಿ ಈ ಗ್ರಾಮದ ಪ್ರತಿಯೊಬ್ಬರಿಗೂ ಜಮೀನಿನ ಹಕ್ಕು ಪತ್ರ ನೀಡುವದು ಮತ್ತು ಉಳಿಮೆ ಮಾಡಲು ಯೋಗ್ಯ ಇರುವ ಸಾಗುವಳಿ ಜಮೀನನ್ನು ಪಟ್ಟಾ ಮಾಡಿಕೊಡುವ ಮೂಲಕ ಮಾರುತಿ ಮನಪಡೆಯವರ ಒಂದು ಕನಸು ನನಸಾಗುವ ಜವಾಬ್ದಾರಿ ರೈತ ಸಂಘದ ಮೇಲೆ ಇದೆ, ಕಳೆದ ಮೂವತ್ತು ವರ್ಷಗಳ ಕಾಲ ಚಂದ್ರನಗರ ಗ್ರಾಮದ ಜನರು ಕರ್ನಾಟಕ ಪ್ರಾಂತ ರೈತ ಸಂಘ ಮುಖಂಡರಾದ ಮಾರುತಿ ಮನಪಡೆಯವರ ಜೊತೆಗೆ ನಿಂತು ಅವಿರತವಾಗಿ ದುಡಿದು ರೈತ ಚಳುವಳಿ ಬಲಪಡಿಸಿ ಈ ಬಾಗದ ನೀರಾವರಿ ಯೋಜನೆ , ತೊಗರಿ ಬೋರ್ಡ್ ರಚನೆ , ಬೆಂಬಲ ನೀಡುವ ಬಗ್ಗೆ ಹಲವಾರು ರೈತರ ಹೋರಾಟಗಳು ಯಶಸ್ವಿಗೊಳಿಸದ ಕೀರ್ತಿ ತಮಗೆ ಸಲ್ಲುತ್ತದೆ ಎಂದರು.
ವೇದಿಕೆ ಮೇಲೆ ಹಣಮಂತ ದಂಡುಗುಲಕರ್ ,ಭೀಮಶಾ ದಂಡುಗುಲಕರ್ ಉಪಸ್ಥಿತಿಯಲ್ಲಿದ್ದರು. ಹಣಮಂತ ಪೂಜಾರಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಪವನಕುಮಾರ ಯಾಂಕಣ್ಣ ಚವ್ಹಾಣ ವಂದಾನಾರ್ಪಣೆ ನೆರವೆರಿಸಿದರು. ನೂರಾರು ಗ್ರಾಮದ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದರು .