ಯಾದಗಿರಿ: ವಡಗೇರ ತಾಲೂಕಿನ ಟಿ ವಡಗೇರ ಗ್ರಾಮ ಪಂಚಾಯತ ಹಯ್ಯಾಳ ಕೆ ಗ್ರಾಮದಲ್ಲಿ ಅಭಿವೃಧ್ದಿ ಮರೀಚಿಕೆಯಾಗಿದೆ ಎಂದು ಗ್ರಾಮದ ಯುವ ಮುಖಂಡ ಸಾಬಣ್ಣ ಭಂಡಾರಿ ಆರೋಪಿಸಿದ್ದಾರೆ.
ಗ್ರಾಮದಲ್ಲಿ ಚರಂಡಿ ಹುಳೆತ್ತದ ಕಾರಣ ದುರ್ವಾಸನೆ ಬರುತ್ತಿದೆ ಗ್ರಾಮಸ್ತರಿಗೆ ಸಾಂಕ್ರಾಮಿಕ ರೋಗಗಳು ಬರುತ್ತಿವೆ ಮತ್ತು ಗ್ರಾಮದಿಂದ ಬಸವಂತಪೂರ ರಸ್ತೆ ಗ್ರಾಮದಿಂದ ಐಕೂರ ರಸ್ತೆಗಳು ರಸ್ತೆ ಸೂದಾರಣೆ ಮಾಡದಿರುವ ಕಾರಣ ರೈತರ ಜಮೀನುಗಳಿಗೆ ಹೊಗಲು ತುಂಬ ಕಷ್ಟವಾಗಿದೆ ರಸ್ತೆ ಸುಧಾರಣೆಗಾಗಿ ನರೇಗಾ ಕ್ರಿಯಾಯೋಜನೆ ತಯಾರಿಸಿದರು ಕಾಮಗಾರಿ ಮಾಡಲು ವಿಳಂಬ ಮಾಡುತ್ತಿದ್ದಾರೆ.
ಚರಂಡಿ ಹುಳೆತ್ತಲು ಹದಿನೈದನೆ ಹಣಕಾಸಿನ ಯೋಜನೆಯಲ್ಲಿ ಕಾಮಗಾರಿ ಮಾಡದೆ ಖರ್ಚುಮಾಡಿದ್ದಾರೆ ಗ್ರಾಮ ಪಂಚಾಯತ ಅಭಿವೃಧ್ದಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತ ಸದಸ್ಯರು ಹೊಂದಿಕೊಂಡು ಕೆಲಸಮಾಡುತ್ತಿಲ್ಲ ಹೀಗಾಗಿ ಗ್ರಾಮ ಪಂಚಾಯತ ಆಡಳಿತದಿಂದ ಅಭಿವೃಧ್ದಿ ಶೂನ್ಯವಾಗಿದೆ ಎಂದು ಗ್ರಾಮಸ್ತರು ಆರೋಪಿಸಿದ್ದಾರೆ.
ಕೂಡಲೆ ಗ್ರಾಮದಲ್ಲಿ ಚರಂಡಿ ಹುಳೆತ್ತಬೇಕು ಮತ್ತು ರಸ್ತೆ ಸುಧಾರಣೆ ಮಾಡಬೇಕು ಗ್ರಾಮದಲ್ಲಿ ಯಾವುದೆ ಸಮಸ್ಯಗಳಿಲ್ಲದ ಹಾಗೆ ನೋಡಿಕೊಳ್ಳಬೇಕು ನಿರ್ಲಕ್ಷ್ಯವಹಿಸಿದರೆ ಮುಂದಿನ ದಿನಗಳಲ್ಲಿ ಗ್ರಾಮಸ್ತರೆಲ್ಲ ಸೇರಿ ಗ್ರಾಮ ಪಂಚಾಯತ ಬೀಗ ಹಾಕಿ ಪ್ರತಿಭಟಿಸಲಾಗುವುದೆಂದು ಗ್ರಾಮಸ್ತರು ಆಕ್ರೋಷ ವ್ಯಕ್ತಪಡಿಸಿದರು.