ವಿದ್ಯಾರ್ಥಿ ವೇತನಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

0
130

ಕಲಬುರಗಿ: ಪ್ರಸಕ್ತ 2021-22ನೇ ಸಾಲಿಗೆ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕಾಗಿ ನ್ಯಾಷನಲ್ ಸ್ಕಾಲಪ್‍ಶಿಪ್ ಪೋರ್ಟಲ್‍ದಲ್ಲಿ ಅನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮಹಿಮೂದ್ ಅವರು ತಿಳಿಸಿದ್ದಾರೆ.

ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ (1 ರಿಂದ 10ನೇ ತರಗತಿ)ಕ್ಕಾಗಿ ಅರ್ಜಿ ಸಲ್ಲಿಸಲು 2021ರ ನವೆಂಬರ್ 15 ಕೊನೆಯ ದಿನವಾಗಿದೆ. ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕಾಗಿ (ಪಿಯುಸಿ ದಿಂದ ಪಿಜಿ) ಹಾಗೂ ಮೇರಿಟ್ ಕಮ್ ಮಿನ್ಸ್ ಸ್ಕಾಲರ್‍ಶಿಫ್‍ಗಾಗಿ (ಎಲ್ಲಾ ವೃತ್ತಿಪರ ಕೋರ್ಸ್‍ಗಳಿಗೆ) ಅರ್ಜಿ ಸಲ್ಲಿಸಲು 2021ರ ನವೆಂಬರ್ 30 ಕೊನೆಯ ದಿನವಾಗಿದೆ.

Contact Your\'s Advertisement; 9902492681

ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಫಾರ್ಸಿ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು ಮೆಟ್ರಿಕ್ ಪೂರ್ವ/ನಂತರದ ಹಾಗೂ ವೃತ್ತಿಪರ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕಾಗಿ ನಿಗದಿತ ದಿನಾಂಕದೊಳಗಾಗಿ ಅನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಹ ವಿದ್ಯಾರ್ಥಿಗಳು www.scholarship.gov.in, ಅಲ್ಪಸಂಖ್ಯಾತರ ಸಚಿವಾಲಯದ ಕೇಂದ್ರ ಸರ್ಕಾರದ ಪೋರ್ಟಲ್ www.minorityaffairs.gov.in ಹಾಗೂ ಅಲ್ಪಸಂಖ್ಯಾತರ ನಿರ್ದೇಶನಾಲಯದ ಪೋರ್ಟಲ್ http://gokdom.kar.nic ಗೆ ಲಾಗಿನ್ ಆಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here