BSNL: ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಣೆ

0
19

ಕಲಬುರಗಿ:ಅ.೦೧: ಕಲಬುರಗಿ ನಗರ ರಾಜಭಾಷಾ ಕಾರ್ಯಾನ್ವಯನ ಸಮಿತಿಯಿಂದ ಹಿಂದಿ ಪಾಕ್ಷಿಕದ ಸಮಾರೋಪ ಸಮಾರಂಭದ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಕಲಬುರಗಿ ದೂರಸಂಪರ್ಕ ಜಿಲ್ಲಾ ವ್ಯವಸ್ಥಾಪಕ ಕಚೇರಿಯ ಸಭಾಂಗಣದಲ್ಲಿ ಬುಧವಾರ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಜಿಲ್ಲಾ ದೂರಸಂಪರ್ಕ ಇಲಾಖೆಯ ಉಪ ವ್ಯವಸ್ಥಾಪಕ ಅನಂತರಾಮ ಚೌದರಿ ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ಯುನಿಯನ್ ಬ್ಯಾಂಕ್ ಕಲಬುರಗಿಯ ಕ್ಷೇತ್ರೀಯ ಕಾರ್ಯಾಲಯದ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಅರವಿಂದ, ರಾಜಭಾಷಾ ಅಧಿಕಾರಿ ಕಮಲಕುಮಾರ, ಜಿಲ್ಲಾ ವಿಜ್ಞಾನಾಧಿಕಾರಿಗಳಾದ ಲಕ್ಷ್ಮೀನಾರಾಯಣ, ಭಾರತೀಯ ಸ್ಟೇಟ್ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕರಾದ ಸುಧೀರಕುಮಾರ್ ಶರ್ಮಾ, ಕೆನರಾ ಬ್ಯಾಂಕಿನ ಸಹಾಯಕ ಮಹಾಪ್ರಭಂದಕರಾದ ಸಂಜೀವಪ್ಪ ಆರ್. ಬಿ, ಯೂನಿಯನ್ ಬ್ಯಾಂಕಿನ ರಾಜಭಾಷಾ ಅಧಿಕಾರಿ ಶೌರ್ಯ ಚೌಧುರಿ, ಹಾಗೂ ನಗರ ರಾಜಭಾಷಾ ಕಾರ್ಯಾನ್ವಯನ ಸಮಿತಿಯ ಅಧೀನದಲ್ಲಿ ಹಿಂದಿ ಭಾಷೆಯನ್ನು ತಮ್ಮ ಕಛೇರಿಗಳಲ್ಲಿ ವಿವಿಧ ಇಲಾಖೆಯ ಮುಖ್ಯಸ್ಥರು ಕಾರ್ಯಗತ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದರು.

Contact Your\'s Advertisement; 9902492681

ಈ ಸಭೆಯಲ್ಲಿ ರಾಜಭಾಷಾ ಹಿಂದಿಯನ್ನು ಕಾರ್ಯಗತ ಮಾಡುವ ನಿಟ್ಟಿನಲ್ಲಿ ಆದ ಪ್ರಗತಿಯ ವಿವರಣೆಯನ್ನು ನಗರ ವಿವಿಧ ಇಲಾಖೆಗಳ ಮುಖ್ಯಸ್ಥರು ಮಂಡಿಸಿದರು. ಸಮಾರಂಭದ ಅದ್ಯಕ್ಷತೆವಹಿಸಿದ್ದ ಬಿ.ಎಸ್.ಎನ್.ಎಲ್. ಉಪ ಮಹಾ ವ್ಯವಸ್ಥಾಪಕ ಅನಂತರಾಮ ಚೌದರಿಯವರು ರಾಜಭಾಷಾ ಪ್ರತಿಜ್ಞೆ ಭೋದಿಸಿ, ಮಾತನಾಡಿದ ಅವರು ಹಿಂದಿ ಭಾಷೆ ಅತ್ಯಂತ ಸರಳವಾಗಿದ್ದು, ದೇಶದಾದ್ಯಂತ ಈ ಭಾಷೆಯನ್ನು ಎಲ್ಲರೂ ಮಾತನಾಡುವುದಲ್ಲದೆ , ಕಛೇರಿಯಲ್ಲೂ ಅದನ್ನು ಕಾರ್ಯಗತ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದರು. ಬಿ.ಎಸ್.ಎನ್.ಎಲ್. ಉಪ ಮಂಡಲ ಅಭಿಯಂತರರು ಅಶೋಕ ಖಂಡಿ ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದಕ್ಕಾಗಿ ಶ್ಲಾಘಿಸಿದರು.

ಕಲಬುರಗಿಯ ರಾಜಭಾಷಾ ಕಾರ್ಯಾನ್ವಯನ ಸಮಿತಿಯ ನಿವೃತ್ತ ರಾಜಾಭಾಷಾ ಅಧಿಕಾರಿ ಹಾಗೂ ಸದಸ್ಯ ಕಾರ್ಯದರ್ಶಿ ಡಾ. ಹೀರಾಸಿಂಗ್ ರಾಠೋಡ್ ಕಾರ್ಯಕ್ರಮದ ನಿರ್ವಹಿಸಿದರು. ನಿವೃತ್ತ ಹಿಂದಿ ಅನುವಾದಕರಾದ ಶ್ಯಾಮರಾವ ಕಟಕೆ ಪ್ರಾರ್ಥಿಸಿದರು. ಭಾರತೀಯ ಸ್ಟೇಟ್ ಬ್ಯಾಂಕಿನ ರಾಜಾಭಾಷಾ ಅಧಿಕಾರಿಯಾದ ಸುಧೀರಕುಮಾರ್ ಶರ್ಮಾ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here