ಕಲಬುರಗಿ: ತಾಲೂಕಿನ ಕೋಟನೂರ ಡಿ ಗ್ರಾಮದ ಸರಕಾರಿ ಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಲಬುರಗಿ ಮತ್ತು ಗ್ರಾಮ ಪಂಚಾಯತ್ ನಂದಿಕೂರ ಇವರ ಸಂಯುಕ್ತಾಶ್ರಯದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಗೌರವಾನ್ಹಿತ ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯದರ್ಶಿಗಳಾದ ಸುಶಾಂತ ಎಮ್.ಚೌಗಲೆ ಅವರು ಉದ್ಘಾಟಿಸಿ ಮಾತ್ತನಾಡಿ ಕಾನೂನಿನ ಅರಿವು ಮತ್ತು ಅದರ ನೆರವು ಕೂಡ ಪಡೆದುಕೊಳ್ಳಬಹುದು ಅದಕ್ಕಾಗಿ ಕಾನೂನು ಸೇವೆಗಳ ಪ್ರಾಧಿಕಾರವಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಂದಿಕೂರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ವೇತಾ ದಿನೇಶ ದೊಡ್ಡಮನಿ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಾನಪ್ಪ ಕಟ್ಟಿಮನಿ, ಕಂದಾಯ ನೀರಿಕ್ಷಕರಾದ ಖಾಜಾ ಪಾಷಾ ,ಪಿಡಿಓ ಸಂದೀಪ ಗುತ್ತೆದಾರ, ಶಿಕ್ಷಕಿ ವಿಜಯಲಕ್ಷ್ಮಿ ಮಾಲಿಪಾಟೀಲ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶಿವಪುತ್ರ ಮಾಲಿಪಾಟೀಲ ಸದಸ್ಯರಾದ ಶ್ರೀನಿವಾಸ ದೊಡ್ಡಮನಿ, ದಿನೇಶ ದೊಡ್ಡಮನಿ, ಶಿವರಾಜ ಬಿರಾದಾರ, ಚಂದ್ರಕಾಂತ ಸಿರಸಗಿ, ಮುಖಂಡರಾದ ಶಿವರಾಜ ಸಿರಸಗಿ ಸೇರಿದಂತೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಗ್ರಾಮದ ಹಿರಿಯರು, ಮಹಿಳೆಯರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.