ಆಳಂದ: ತಾಲೂಕಿನ ಏಕೈಕ ನೀರಾವರಿ ಯೋಜನೆ ಹಾಗೂ ಆಳಂದ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಅಮರ್ಜಾ ಅಣೆಕಟ್ಟಿಗೆ ಅ.೮ರಂದು ಬೆಳಿಗ್ಗೆ ೧೧ ಗಂಟೆಗೆ ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಅವರು ಬಾಗಿನ ಅರ್ಪಿಸಲಿದ್ದಾರೆ.
ತಾಲೂಕಿನ ಕೋರಳ್ಳಿ ಗ್ರಾಮದ ಹತ್ತಿರ ಇರುವ ಅಮರ್ಜಾ ಅಣೆಕಟ್ಟಿನಿಂದ ಸಾವಿರಾರು ಏಕರೆಗೆ ನೀರಾವರಿ ಪ್ರದೇಶ ಲಭ್ಯವಾಗಿದೆ ಅಲ್ಲದೇ ಆಳಂದ ಪಟ್ಟಣಕ್ಕೆ ಕುಡಿಯುವ ನೀರು ಕೂಡ ಲಭ್ಯವಾಗಿದೆ. ಅಮರ್ಜಾ ಅಣೆಕಟ್ಟು ಈ ಸಲ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ತುಂಬಿರುವುದರಿಂದ ರೈತರಲ್ಲಿ ಸಂತಸ ಮನೆ ಮಾಡಿದೆ.
ಕಾರ್ಯಕ್ರಮದಲ್ಲಿ ಜಿ.ಪಂ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ, ಜೆಸ್ಕಾಂ ನಿರ್ದೇಶಕ ವೀರಣ್ಣ ಮಂಗಾಣೆ, ಮುಖಂಡ ಮಲ್ಲಿಕಾರ್ಜುನ ಕಂದಗೂಳೆ, ಭೂಸನೂರ ಗ್ರಾ. ಪಂ ಅಧ್ಯಕ್ಷ ಚಂದ್ರಶೇಖರ ಸಾಹು, ಮುಖಂಡರಾದ ಅಶೋಕ ಗುತ್ತೇದಾರ, ಅನಂತರಾವ ಸಾಹು ಭೂಸನೂರ, ಕಲ್ಯಾಣಿ ಧನ್ನಾಗೋಳ, ಶಂಕರ ಸೋಮಾ, ಪುರಸಭೆ ಅಧ್ಯಕ್ಷೆ ರಾಜಶ್ರೀ ಖಜೂರಿ, ಉಪಾಧ್ಯಕ್ಷ ಚಂದ್ರಕಾಂತ ಹತ್ತರಕಿ, ಸಿ ಕೆ ಪಾಟೀಲ, ನಿಜಲಿಂಗಪ್ಪ ಕೊರಳ್ಳಿ, ಶ್ರೀಶೈಲ ವಿಭೂತೆ ಪಾಟೀಲ, ಗುರುಶಾಂತ ಪಾಟೀಲ ನಿಂಬಾಳ, ಮಹಿಬೂಬ ಆಳಂದ, ಮಲ್ಲಿಕಾರ್ಜುನ ತಡಕಲ, ಚಂದ್ರಕಾಂತ ಭೂಸನೂರ, ರಾಜಶೇಖರ ಮಲಶೆಟ್ಟಿ, ರವಿ ಮದನಕರ, ಸಂತೋಷ ಹಾದಿಮನಿ, ನೀರಾವರಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ ಆದ್ದರಿಂದ ತಾಲೂಕಿನ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಆಳಂದ ಮಂಡಲ ಬಿಜೆಪಿ ಅಧ್ಯಕ್ಷ ಆನಂದರಾವ ಪಾಟೀಲ ಕೊರಳ್ಳಿ ಮನವಿ ಮಾಡಿದ್ದಾರೆ.