ಕಲಬುರಗಿ: ಕರ್ನಾಟಕ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡ ತಾಲೂಕು ಕೇಂದ್ರ ಆಳಂದ ಪಟ್ಟಣ ಸೇರಿ ನೂರಕ್ಕೂ ಹೆಚ್ಚು ಹಳ್ಳಿಗಳಲ್ಲಿ ನವರಾತ್ರಿ ಉತ್ಸವ ಸಡಗರ ಎರಡು ವರ್ಷಗಳಿಂದ ಕೊರೊನಾದಿಂದ ನೋಂದು ಬೆಂದು ಹೋಗಿದ್ದ ಬಹುಸಂಖ್ಯಾತ ಭಕ್ತಗಣವು ದೇವಿಯ ಆರಾಧನೆ ಕೈಗೊಂಡರು.
ಒಂಬತ್ತು ದಿನಗಳ ಕಾಲ ಮನೆಗಳಲ್ಲಿ ಹಾಗೂ ಸಾರ್ವಜನಿಕವಾಗಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಸಾಂಪ್ರದಾಯಿಕವಾಗಿ ೯ ಅಥವಾ ೫ ದಿನಗಳ ಕಾಲ ತಮ್ಮ ಮನೆಗಳಲ್ಲಿ ಘಟಸ್ಥಾಪಿಸಿ ನಿರಂತರ ದೀಪ ಹಚ್ಚಿ ಉಪವಾಸ ಒಪ್ಪತ್ತು ಹೀಗೆ ವಿಶೇಷ ವೃತ್ತಾಚರಣೆ ಕೈಗೊಂಡು ೯ನೇ ದಿನಕ್ಕೆ ಶನಿವಾರ ಹಬ್ಬವರನ್ನು ಆಚರಿಸಿ ಸಂಜೆ ಹೊಸ ಬಟ್ಟೆ ಧರಿಸಿ ಪರಸ್ಪರ ಬನ್ನಿ ವಿನಿಯೋಗಿಸಿಕೊಂಡ ಮಕ್ಕಳು, ಮಹಿಳೆಯರು ಸ್ತ್ರೀ ಪುರುಷರು, ಯುವಕ, ಯುವತಿಯರು, ಗುರು ಹಿರಿಯರಿಗೆ ಶುಭಾಷಯ ಕೋರಿಕೊಂಡರು.
ಸಾರ್ವಜನಕ ಹಾಗೂ ದೇವಸ್ಥಾನಗಳಲ್ಲಿ ಸ್ಥಾಪಿಸಿದ ದೇವಿಯ ಆರಾಧಾನಾ ಮಹೋತ್ಸವದಲ್ಲಿ ಹೋಮ ಹವನ, ರಂಗೋಲಿ ಸ್ಪರ್ಧೆ ಭಜನೆ ಹೀಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಮನತಣ್ಣಿಸಿತು.
ಪಟ್ಟಣದಲ್ಲಿ ಹನುಮಾನ ರಸ್ತೆ, ಚಕ್ರಕಟ್ಟಾ, ಬಾಳನಕೇರಿ, ಹತ್ತ್ಯಾನಗಲ್ಲಿ, ಶರಣನಗರ, ರೇವಣಸಿದ್ಧೇಶ್ವರ ಕಾಲೋನಿ, ನಾಯಕ ನಗರ ಮತ್ತಿತರ ಕಡೆ ಸೇರಿ ದೇವಿಯ ಪ್ರತಿಷ್ಠಾಪಿಸಿ ಆರಾಧನೆ ಕೈಗೊಂಡರು.
ಗ್ರಾಮೀಣ ಭಾಗದಲ್ಲಿ ಖಜೂರಿ, ಹಿರೋಳಿ, ರುದ್ರವಾಡಿ, ಮಾದನಹಿಪ್ಪರಗಾ, ಕೊಡಲಹಂಗರಗಾ, ಕಡಂಗಚಿ, ನಿಂಬರಗಾ ನರೋಣಾ, ಬಸವಣ್ಣ ಸಂಗೋಳಗಿ ಸಾಲೇಗಾಂವ ಹಡಲಗಿ ಮತ್ತಿತರ ಗ್ರಾಮಗಳಲ್ಲಿ ಆರಾಧನೆ ಹಬ್ಬದ ಆಚರಣೆ ನಡೆಯಿತು.