ಚಕ್ರಕಟ್ಟಾ ನಿರ್ಮಾಣಕ್ಕೆ ಶಾಸಕರಿಂದ ಅನುದಾನ ಭರವಸೆ

0
20

ಆಳಂದ: ಪ್ರತಿವರ್ಷ ದಸರಾ ಆಚರಣೆಯ ನಿಮಿತ್ತ ಮಾಡುವ ದೇವಿಯ ಆರಾಧನೆಯಿಂದ ಕುಟುಂಬದಲ್ಲಿ ಸುಖ, ಶಾಂತಿ ಸಮೃದ್ಧಿ ಹಾಗೂ ಮಳೆ, ಬೆಳೆ ವ್ಯಾಪಾರ ಉದ್ಯಮೆಕ್ಕೆ ತಾಯಿಯ ವರವಾಗಲಿದೆ ಎಂದು ಶಾಸಕ ಸುಭಾಷ ಗುತ್ತೇದಾರ ಅವರು ಹೇಳಿದರು.

ಪಟ್ಟಣದ ಮುಖ್ಯರಸ್ತೆಯಲ್ಲಿನ ಚಕ್ರಕಟ್ಟಾದಲ್ಲಿ ಬಡಾವಣೆಯವರು ಪ್ರತಿಷ್ಠಾಪನೆ ಕೈಗೊಂಡ ನವರಾತ್ರಿ ಮಹೋತ್ಸವ ಅಂಗವಾಗಿ ದೇವಿಯ ಆರಾಧನೆ ಖಂಡೆಯ ಪೂಜೆಯಂದು ದೇವಿಗೆ ಪೂಜೆ ನೆರವೇರಿಸಿ ಉತ್ಸವ ಕಮೀಟಿ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಧಾರ್ಮಿಕ ಆಚರಣೆ ಭಾರತೀಯ ಪ್ರಾಚೀನ ಪರಂಪರೆಯಿಂದ ನಡೆದು ಬಂದಿದೆ. ದುಶ್ಚಶಕ್ತಿಗಳನ್ನು ನಾಶ ಮಾಡಿ ಶಿಷ್ಠ ಶಕ್ತಿಗಳನ್ನು ದಯಪಾಲಿಸುವ ಆರಾಧನಯೇ ನವರಾತ್ರಿ ಆಗಿದೆ. ದ್ವೇಷ ಅಸೋಹಗಳನ್ನು ಮರೆತು ಪರಸ್ಪರ ಸಾಮರಸ್ಯೆ ಬಾಳ್ವೆ ಕಲಿಸಿಕೊಡುವ ಸಂಕೇತವಾಗಿ ಬನ್ನಿ ವಿನಿಮಿಯ ಮಾಡಿಕೊಳ್ಳುವ ಸಾಂಪ್ರದಾಯ ವೈಶಿಷ್ಠ್ಯವಾಗಿ ಭಾರತೀಯರಲ್ಲಿ ಮಾತ್ರ ಇದೆ. ನಮ್ಮ ಸಂಸ್ಕೃತಿ ಪರಂಪರೆಯನ್ನು ಮುಂದುವರೆಸಿಕೊಂಡು ಶಿಕ್ಷಣ, ಆರ್ಥಿಕ ಅಭಿವೃದ್ದಿಗಾಗಿ ದೇವಿಯ ಕೃಪೆ ದೊರೆಯಲಿ. ಬಹುವರ್ಷಗಳಿಂದ ಚಕ್ರಕಟ್ಟಾದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಕಟ್ಟಡ ಅವಶಕತೆ ಇದ್ದು ಇದಕ್ಕಾಗಿ ಅನುದಾನ ಒದಗಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಬಿಜೆಪಿ ಜಿಲ್ಲಾ ಮುಖಂಡ ಸಂಜಯ ಮಿಸ್ಕಿನ್, ಪುರಸಭೆ ಸದಸ್ಯ ಧೋಂಡಿಬಾ ಸಾಳುಂಕೆ, ಕಮೀಟಿ ಕಾರ್ಯದರ್ಶಿ ಚಂದ್ರಕಾಂತ ಜವಳಿ, ಸುರೇಶ ವೇದಪಾಠಕ, ಲಕ್ಷ್ಮಣ ಇಂಗಳೆ, ಸೋಮನಾಥ ಕಾಂಬಳೆ, ಸತೀಶ ಗುತ್ತೇದಾರ, ಶ್ರೀಶೈಲ ಉಳ್ಳೆ, ಮತ್ತಿತರು ಪಾಲ್ಗೊಂಡಿದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here