ಫರತಾಬಾದ: ಸಮೀಪದ ಫಿರೋಜಾಬಾದ್‌ನಲ್ಲಿ ಕಲ್ಲಿದ್ದಲು ಥರ್ಮಲ್ ಕಂಪೆನಿ ವಿರುದ್ಧ ರೈತರು ಹಮ್ಮಿಕೊಂಡಿದ್ದ ಧರಣಿ ಸ್ಥಳಕ್ಕೆ ತಹಸಿಲ್ದಾರ್ ಪ್ರಕಾಶ್ ಕುದುರಿ ಅವರು ಭೇಟಿ ನೀಡಿ, ಬೇಡಿಕೆಗಳಿಗೆ ಸ್ಪಂದಿಸಿದರು.
ಈ ಸಂದರ್ಭದಲ್ಲಿ ರೈತ ಅಬ್ದುಲ್ ಲತೀಫ್ ಎಸ್.ಎಂ. ಜಾಗಿರದಾರ್ ಅವರು ತಹಸಿಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ, ತಾಲ್ಲೂಕಿನ ಫಿರೋಜಾಬಾದ್, ನದಿಸಿಣ್ಣೂರ್ ಗ್ರಾಮಗಳ ರೈತರ 1600 ಎಕರೆ ಜಮೀನುಗಳಲ್ಲಿ ಕಲ್ಲಿದ್ದಲು ಥರ್ಮಲ್ ಪವರ್‌ಗಾಗಿ ಸ್ವಾಧೀನಪಡಿಸಿಕೊಂಡಿದ್ದು, ಅದರಲ್ಲಿ 1600 ಎಕರೆ ಜಮೀನಿನಲ್ಲಿ ಕೇವಲ 50 ಎಕರೆ ಜಮೀನು ವರ್ಗಾಯಿಸಿದ ಮ್ಯೂಟೇಶನ್ ನಕಲು ನೀಡುವಂತೆ ಒತ್ತಾಯಿಸಿದರು. ಸರ್ವೆ ನಂಬರ್ 139 ರ ಜಮೀನಿನಲ್ಲಿ ಸರ್ಕಾರದ ವತಿಯಿಂದ ಅನುಮತಿ ಪಡೆದ ದಾಖಲಾತಿ ನಕಲುಗಳು ಪರಿಸರ ಇಲಾಖೆ, ಕೃಷಿ ಮತ್ತು ಇತರೆ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದಿದ್ದ ದಾಖಲಾತಿ ನಕಲುಗಳು, ಗ್ರಾಮ ಪಂಚಾಯಿತಿ ಪರವಾನಿಗೆ ಪಡೆದ ನಕಲುಗಳನ್ನು ನೀಡುವಂತೆ, ರೈತರ 1600 ಎಕರೆ ಜಮೀನು ಸ್ವಾಧೀನ ಪಡೆದ ಜಮೀನಿನಲ್ಲಿ ಕೇವಲ ಒಂದೇ ಸರ್ವೆ ನಂಬರ್ ವಶಕ್ಕೆ ಪಡೆದ ಕುರಿತು ಉತ್ತರ ನೀಡುವಂತೆ ಅವರು ಆಗ್ರಹಿಸಿದರು.
ಸುತ್ತಮುತ್ತಲಿನ ರೈತರ ಕೃಷಿ ಜಮೀನುಗಳಿಗೆ ಯಾವುದೇ ಅಪಾಯ ಆಗುವ ಕುರಿತು ವಿಚಾರಿಸಿ ರೈತರ ಕೃಷಿ ಜಮೀನು ನಾಶ ಆಗದಂತೆ ಏನೇನು ವ್ಯವಸ್ಥೆ ಕೈಗೊಳ್ಳಲಾಗಿದೆ ಎಂಬುದನ್ನು ಬಹಿರಂಗ ಪಡಿಸುವಂತೆ ಒತ್ತಾಯಿಸಿದ ಅವರು, ಕಾಮಗಾರಿ ಯೋಜನೆಯ ಕುರಿತು ಸುತ್ತಮುತ್ತಲಿನ ರೈತರಿಗೆ ನೋಟಿಸ್ ಮುಖಾಂತರ ಮಾಹಿತಿ ನೀಡದೇ ಇದ್ದರೆ ಅದರ ನಕಲುನೀಡುವಂತೆಗ್ರಾಮಸ್ಥರ ಗಮನಕ್ಕೆ ತರಲು ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಿದ್ದರೆ ಅದರ ಮಾಹಿತಿ ಕೊಡುವಂತೆ ಆಗ್ರಹಿಸಿದರು.
ರೈತರ ಜಮೀನುಗಳಲ್ಲಿ ಮಳೆ ನೀರು ಹರಿಯುವ ನಾಲಾದಲ್ಲಿ ನೀರು ತಡೆಗಟ್ಟಿ ವಾಹನ ಹೋಗಲು ರಸ್ತೆ ಮಾಡಲು ಯಾರಿಂದ ಅನುಮತಿ ಪಡೆಯಲಾಗಿದೆ ? ಅದಕ್ಕೆ ಉತ್ತರಿಸಿ, ನಾಲಾ ನೀರು ತಡೆಗಟ್ಟಿ ರೈತರ ಜಮೀನು ನಾಶವಾಗಿ ಹಾಳಾಗಿದ್ದು , ಅದಕ್ಕೆ ಯಾರು ಹೊಣೆ ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಸುತ್ತಮುತ್ತಲಿನ ರೈತರ ಜಮೀನು ನಾಶವಾಗಿರುವ ಕುರಿತು ಪೂರ್ತಿ ಪರಿಹಾರ ನೀಡುವ೦ತೆ ಒತ್ತಾಯಿಸಿದ ಅವರು ಸರ್ವೆ ನಂಬರ್ 138 ಜಮೀನನಲ್ಲಿ ಅಪಾರ ಪ್ರಮಾಣ ಎರೆ ಮಣ್ಣು ಕಿತ್ತಿ ಹೋಗಿದೆ. ತೊಗರಿ ಬೆಳೆ ಹಾನಿಯಾಗಿದೆ ಈ ಥರ್ಮಲ್ ಪವರ್ ಕಂಪನಿಗೆ ಕೊಟ್ಟ ರೈತರು ಸರಕಾರಿ ನೌಕರಿ ಕೊಡಲು ಆಗ್ರಹಿಸಿದರು. ಈ ಸಂದರ್ಭದಲ್ಲಿ ಶರಣಗೌಡ ನೆವಣಿ, ಸಿದ್ದಪ್ಪ ಸಿರೂರ, ಜಬ್ಬರ್ ಜಾಗೀರ್ದಾರ, ವಿಶ್ವನಾಥ್ ನೆಲೋಗಿ, ಧರ್ಮಣ್ಣ ಇಟಗಿ, ಶರಣಪ್ಪ ಪೂಜಾರಿ, ಹುಸೇನ್ ನದಿಸಿನ್ನೂರ್, ಸಿದ್ದಪ್ಪ ಪೂಜಾರಿ, ಕಲ್ಯಾಣಿ ಮಾಮನಿ, ಶಿವಪುತ್ರ ಮುತ್ತಿಗಿ, ಹಸೇನ್ ಪಟೇಲ್ ಕೊಳಗೇರಿಕೆಪಿಟಿಸಿಎಲ್ಅಧಿಕಾರಿಗಳು. ನದಿಸಿಣ್ಣೂರ್ ಗ್ರಾಮ ಲೆಕ್ಕಿಗಇನ್ನು ಇತರರು ಇದ್ದರು ಹಾಗೂ ಹೊನ್ನಕಿರಣಗಿ, ನದಿಸಿಣ್ಣೂರ್. ಫಿರೋಜಾಬಾದಗ್ರಾಮದರೈತರು ಇದ್ದರು.