ದೇವಿಕೇರಾ: ಜಿಲ್ಲಾಧಿಕಾರಿಗಳ ನಡೆ ಹಳ್ಲಿಕಡೆ ಕಾರ್ಯಕ್ರಮ

0
19

ಸುರಪುರ: ಸರಕಾರದ ಮಹತ್ವಕಾಂಕ್ಷೆಯ ಯೋಜನೆಯಾದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ತಾಲೂಕಿನ ದೇವಿಕೇರಾ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ಬೆಳಿಗ್ಗೆ ನಡೆಸಲಾಯಿತು.ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಮಾತನಾಡಿ,ಗ್ರಾಮೀಣ ಭಾಗದ ಜನರ ಯಾವುದೇ ಇಲಾಖೆಯಲ್ಲಿನ ಕೆಲಸ ಕಾರ್ಯಗಳನ್ನು ಅವರ ಬಳಿಗೆ ಹೋಗಿ ಪರಿಹರಿಸಿಕೊಡುವ ನಿಟ್ಟಿನಲ್ಲಿ ಸರಕಾರ ಇಂತಹ ಯೋಜನೆಯನ್ನು ಆರಂಭಿಸಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಕೃಷಿ ಇಲಾಖೆ, ಕಂದಾಯ, ಶೀಕ್ಷಣ, ಸಮಾಜ ಕಲ್ಯಾಣ, ಅರಣ್ಯ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದಾರೆ ಸಾರ್ವಜನಿಕರು ತಮ್ಮ ಕುಂದು ಕೊರತೆಗಳನ್ನು ಅರ್ಜಿಗಳ ಮುಖಾಂತರ ನೀಡಿದಲ್ಲಿ ಅವುಗಳನ್ನು ಪರಿಶೀಲಿಸಿ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಕಂದಾಯ ಸೇರಿದಂತೆ ವಿವಿಧ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸುಮಾರು ೩೯ ಜನರು ತಮ್ಮ ಅರ್ಜಿಗಳನ್ನು ಸಲ್ಲಿಸಿದರು. ಅಲ್ಲದೆ ವೃಧ್ಯಾಪವೇತನ,ಸಂಧ್ಯಾಸುರಕ್ಷಾ,ವಿಧವಾ ವೇತನದ ಸುಮಾರು ೧೯ ಅರ್ಜಿಗಳನ್ನು ಸ್ಥಳದಲ್ಲಿಯೇ ಪರಿಹರಿಸುವ ನಿಟ್ಟಿನಲ್ಲಿ ವೇತನ ಮಂಜೂರುಗೊಳಿಸಿ ಆದೇಶ ಪ್ರತಿಯನ್ನು ನೀಡಲಾಯಿತು.ಇನ್ನುಳಿದ ಅರ್ಜಿಗಳನ್ನು ಶೀಘ್ರದಲ್ಲಿಯೆ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರಿಗೆ ಕಳುಹಿಸಿ ಶೀಘ್ರವೆ ನಿಮ್ಮ ಸಮಸ್ಯೆಗಳನ್ನು ನಿವಾರಿಸಲು ತಿಳಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರೇಡ್ ೨ ತಹಶೀಲ್ದಾರ ಸುಫಿಯಾ ಸುಲ್ತಾನ, ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ ರೆಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸತ್ಯನಾರಯಣ ದರಬಾರಿ, ಜೇಸ್ಕಾಂ ಎಈಈ ಈರಣ್ಣ ಹಳಿಚಂಡ, ಬಿಸಿಎಂ ವಿಸ್ತೀಣಾಧಿಕಾರಿ ತಿಪ್ಪಾರೆಡ್ಡಿ ಪೊಲೀಸ್ ಪಾಟೀಲ್, ಸಿಡಿಪಿಓ ಲಾಲಸಾಬ್ ಪಿರಾಪೂರ,ಅರಣ್ಯ ಇಲಾಖೆಯ ಬಸವರಾಜ ಕುಂಬಾರ, ಪಿಡಿಒ ಸಂಗೀತಾ ಸಜ್ಜನ್,ಅಲ್ಪಸಂಖ್ಯಾತರ ಇಲಾಖೆ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಿ ಸಂಗೀತಾ ಗ್ರಾಮಸ್ಥರಾದ ರಂಗನಗೌಡ ಪಾಟೀಲ್ ದೇವಿಕೇರಾ ಸೇರಿದಂತೆ ಅಬಕಾರಿ,ಲೋಕೊಪಯೋಗಿ,ಪೊಲೀಸ್ ಇಲಾಖೆ,ತಾಲೂಕು ಪಂಚಾಯತಿ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗು ನೂರಾರು ಸಂಖ್ಯೆಯ ಸಾರ್ವಜನಿಕರು ಭಾಗವಹಿಸಿದ್ದರು.

ತಾಲೂಕು ಪಂಚಾಯತಿಗೆ ೧೨,ಜೆಸ್ಕಾಂ ಇಲಾಖೆಗೆ ೦೪,ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಗೆ ೦೧,ಕೃಷ್ಣಾ ಮೇಲ್ದಂಡೆ ಯೋeನೆ ಕಚೇರಿಗೆ ೦೧,ಕಲ್ಯಾಣ ಕರ್ನಾಟಕ ಸಾರಿಗೆ ಇಲಾಖೆಗೆ ೦೧,ಆರೋಗ್ಯ ಇಲಾಖೆಗೆ ೦೧ ಹಾಗು ಕಂದಾಯ ಇಲಾಖೆಗೆ ೧೯ ಸೇರಿ ಒಟ್ಟು ೩೯ ಅರ್ಜಿಗಳು ಸಲ್ಲಿಕೆಯಾಗಿವೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here