ಸುರಪುರ: ಲಕ್ಷ್ಮೀಪುರ ಬಿಜಾಸಪುರ ಬಳಿಯ ಶ್ರೀಗಿರಿ ಮಠದ ಪೀಠಾಧಿಪತಿ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳಿಗೆ ಅಕ್ಟೋಬರ್ ೨ ರಂದು ಬೆಂಗಳೂರಿನಲ್ಲಿ ಇಂಡಿಯನ್ ಎಂಪಾಯರ್ ವಿಶ್ವ ವಿದ್ಯಾಲಯ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಿದ ಹಿನ್ನೆಲೆಯಲ್ಲಿ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಗೆ ಶ್ರೀಗಿರಿ ಮಠದ ಭಕ್ತರಿಂದ ಮಂಗಳವಾರ ಅಭಿನಂದನಾ ಸಮಾರಂಭ ನಡೆಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವೀರಗೋಟದ ಅಡವಿಲಿಂಗ ಮಹಾರಾಜ ಮಾತನಾಡಿ,ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಕಿರಿಯ ವಯಸ್ಸಿನಲ್ಲಿ ಹಿರಿಯದಾದ ಸಾಧನೆಯನ್ನು ಮಾಡಿದ್ದಾರೆ.ಅವರ ಶೈಕ್ಷಣಿಕ,ಆಧ್ಯಾತ್ಮಿಕ,ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿನ ಗಣನಿಯ ಸೇವೆಯನ್ನು ಗುರುತಿಸಿ ಇಂಡಿಯನ್ ಎಂಪಾಯರ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿರುವುದು ನಮ್ಮೆಲ್ಲರಿಗೂ ಖುಷಿಯ ಸಂಗತಿಯಾಗಿದೆ ಎಂದರು.ಶ್ರೀಗಳ ಸೇವೆಗೆ ಭಕ್ತರು ಬೆನ್ನೆಲುಬಾಗಿ ನಿಂತು ಅವರ ಸೇವೆಗೆ ಸಹಕರಿಸುತ್ತಿದ್ದಾರೆ.ಮುಂದೆಯೂ ಇದೇ ರೀತಿಯಲ್ಲಿ ಸ್ವಾಮೀಜಿಗಳ ಜೊತೆಗೆ ನಿಲ್ಲಬೇಕು ಎಂದು ತಿಳಿಸಿದರು,ಅಲ್ಲದೆ ಇಂದು ಎಲ್ಲಾ ಭಕ್ತಾದಿಗಳು ಸೇರಿ ಸ್ವಾಮೀಜಿಗಳ ಅದ್ಧೂರಿ ಅಭಿನಂದನೆ ನಡೆಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಶಂಭುನಾಥ ಸೋಮನಾಥ ಸ್ವಾಮೀಜಿ ಸೇರಿದಂತೆ ಅನೇಕ ಸ್ವಾಮೀಜಿಗಳು ಮಾತನಾಡಿ,ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಪೀಠಕ್ಕೆ ಬರುವ ಪೂರ್ವದಲ್ಲಿ ಹೇಳಿಕೊಳ್ಳುವಂತ ಅಭೀವೃಧ್ಧಿ ಇರಲಿಲ್ಲ.ಆದರೆ ಈಗ ಮರಡಿ ಮಲ್ಲಿಕಾರ್ಜುನ ದಯೆಯಿಂದ ವೇದಪಾಠ ಶಾಲೆ,ಗೋಶಾಲೆ ಸೇರಿದಂತೆ ಅನೇಕ ಅಭೀವೃಧ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ.ಇದೇ ರೀತಿಯ ಸೇವೆ ಇನ್ನಷ್ಟು ಮುಂದುವರೆಯಲೆಂದು ಹಾರೈಸಿದರು.
ಅಭಿನಂದನೆಯ ಸನ್ಮಾನ ಸ್ವೀಕರಿಸಿ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ,ನಾನು ಇನ್ನು ಏನು ಸಾಧನೆ ಮಾಡಿಲ್ಲ ಇನ್ನೂ ಮಾಡಬೇಕಿರುವುದು ತುಂಬಾ ಇದೆ,ಇದೆಲ್ಲದಕ್ಕೂ ಮರಡಿ ಮಲ್ಲಿಕಾರ್ಜುನ ದೇವರ ಮತ್ತು ತಂದೆ ಮೂಕಪ್ಪಯ್ಯನವರ ಆಶಿರ್ವಾದ ಮುಖ್ಯವಾಗಿದೆ.ಜೊತೆಗೆ ಶ್ರೀ ಮಠದ ಎಲ್ಲಾ ಭಕ್ತಾದಿಗಳ ಸಹಕಾರದಿಂದ ಇದೆಲ್ಲವು ಸಾಧ್ಯವಾಗಿದೆ.ಇಂದು ಇಂಡಿಯನ್ ಎಂಪಾಯರ್ ವಿಶ್ವವಿದ್ಯಾಲಯ ನೀಡಿರುವ ಗೌರವ ಡಾಕ್ಟರೇಟ್ ಅದು ನನಗಲ್ಲ ಎಲ್ಲರಿಗೂ ಸಲ್ಲಲಿದೆ ಎಂದರು.
ಇದೇ ಸಂದರ್ಭದಲ್ಲಿ ವೇದಿಕೆ ಮೇಲಿದ್ದ ವಿಶ್ವರಾಧ್ಯ ದೇವರು ಚಟ್ನಳ್ಳಿ,ಚನ್ನಬಸವ ಶಿವಾಚಾರ್ಯ ಸ್ವಾಮೀಜಿ ಕೆಂಭಾವಿ,ರೇಣುಕಾ ಶಾಂತಮಲ್ಲಿ ಶಿವಾಚಾರ್ಯ ನೀಲಗಲ್,ಸೋಮನಾಥ ಶಿವಾಚಾರ್ಯ,ರಾಜೇಂದ್ರ ಒಡೆಯರ್ ನಾವದಗಿ,ಸಿದ್ಧೇಶ್ವರ ಶಿವಾಚಾರ್ಯರು ಶಹಾಪುರ,ಶರಣು ಗದ್ದುಗೆ ಸೇರಿದಂತೆ ವೇದಿಕೆ ಮೇಲಿನ ಎಲ್ಲಾ ಮಠಾಧೀಶರು ಹಾಗು ಮುಖಂಡರಾದ ಸೂಗುರೇಶ ವಾರದ್,ಗುರು ಕಾಮಾ,ಮಲ್ಲು ದಂಡಿನ್,ಸೂಗುರೇಶ ಮಡ್ಡಿ,ಮಲ್ಲಣ್ಣ ಸಾಹು ನರಸಿಂಗಪೇಟ,ಶರಣಪ್ಪ ಕಲಕೇರಿ,ಡಿ.ಬಿ.ಪಾಟೀಲ್ ಮಾಲಗತ್ತಿ,ಚಂದ್ರಶೇಖರ ಡೊಣೂರ,ಹಣಮಂತ ಮಟ್ಲ,ಭೀಮಣ್ಣ ಪೀರಬಾವಿ,ಶಿವರಾಜ ಕಲಕೇರಿ,ಕಾಂತು ಪಾಟೀಲ್,ಶಾಂತರಡ್ಡಿ,ಮಹೇಶ ಸಗರ,ಮಹೇಶ ಆನೆಗುಂದಿ,ರಂಗನಗೌಡ ಪಾಟೀಲ್,ಭಂಡಾರಿ ನಾಟೇಕರ್,ಚನ್ನು ದೇಸಾಯಿ,ಪ್ರಕಾಶ ಯಾದವ್,ರಂಗನಾಥ ಜಾಲಹಳ್ಳಿ,ಜಗದೀಶ ಪಾಟೀಲ್,ಸಿದ್ದನಗೌಡ ಹೆಬ್ಬಾಳ,ಲಚಮರಡ್ಡಿ ಬಿಜಾಸಪುರ,ಶಾಂತರಡ್ಡಿ ಬಿಜಾಸಪುರ,ಶರಣಯ್ಯ ಸ್ವಾಮಿ,ಮಲ್ಲಿಕಾರ್ಜುನ ಸುಬೇದಾರ,ಬಾಗೇಶ ಕಾಳಗಿ,ರಾಹುಲ್ ಅಜಯ್,ಆನಂದ ಮಡ್ಡಿ ಸೇರಿದಂತೆ ನೂರಾರು ಜನರು ಶ್ರೀಗಳನ್ನು ಸನ್ಮಾನಿಸಿ ಗೌರವಿಸಿದರು.s
ಖಾಸ್ಗತೇಶ್ವರ ಸಂಗೀತ ಬಳಗದಿಂದ ಸಂಗೀತ ಕಾರ್ಯಕ್ರಮ,ಹಣಮಂತ್ರಾಯ ದೇವತ್ಕಲ್ ಬಳಗದಿಂದ ಡೊಳ್ಳು ಕುಣಿತ ಹಾಗು ಶಾಲಾ ಮಕ್ಕಳಿಂದ ಭರತನಾಟ್ಯ ನೃತ್ಯ ಜರುಗಿತು,ಗಂಗಾಧರ ಶಾಸ್ತ್ರಿಗಳು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.