ಸುರಪುರ: ನಗರದ ಟೇಲರ್ ಮಂಜಿಲ್ ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ ಬಣ)ಕವಡಿಮಟ್ಟಿ ಗ್ರಾಮ ಶಾಖೆಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘಟನೆ ತಾಲ್ಲೂಕು ಅಧ್ಯಕ್ಷರಾದ ವೆಂಕಟೇಶ ನಾಯಕ ಭೈರಿಮಡ್ಡಿ ರವರು ಮಾತನಾಡಿ ಕನ್ನಡ ನಾಡು ನುಡಿ ಗಡಿ ವಿಚಾರದಲ್ಲಿ ಯಾವುದೇ ರಾಜಿಯಿಲ್ಲದೇ ನಿರಂತರ ಕಳೆದ ಎರಡು ದಶಕಗಳಿಂದ ಹೋರಾಟ ಮಾಡುತ್ತಾ ಕರ್ನಾಟಕ ರಕ್ಷಣಾ ವೇದಿಕೆ ನಾಡ ಕಟ್ಟುವ ಕೆಲಸ ಮಾಡುತ್ತಾ ಬಂದಿದೆ ಇಂತಹ ಬಹುದೊಡ್ಡ ಸಂಘಟನೆ ಸುರಪೂರ ತಾಲ್ಲೂಕಿನಲ್ಲಿ ಉದಯವಾಗಿ ಇಂದಿಗೆ 17 ವರ್ಷಕ್ಕೆ ಕಾಲಿಡುತ್ತಿರುವ ದು ಹೆಮ್ಮೆಯ ಸಂಗತಿ . ನೂತನ ಪದಾಧಿಕಾರಿಗಳು ತಾವೆಲ್ಲರೂ ತಮ್ಮ ಗ್ರಾಮದ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಹೋರಾಡಿ ಅಭಿವೃದ್ಧಿ ಗಾಗಿ ಶ್ರಮಿಸಲು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂ ಕಾರ್ಯದರ್ಶಿ ಭೀಮು ನಾಯಕ ಮಲ್ಲಿಭಾವಿ. ತಾಲ್ಲೂಕು ಪದಾಧಿಕಾರಿಗಳಾದ ಹಣಮಗೌಡ ಶಖಾಪೂರ. ಹಣಮಂತ ಹಾಲಗೇರಾ. ಸೋಮನಾಥ ಹಾಲಗೇರಾ. ಗೋವಿಂದ ಕವಡಿಮಟ್ಟಿ. ಉಪಸ್ಥಿತರಿದ್ದರು
ನೂತನ ಪದಾಧಿಕಾರಿಗಳು ಗೌರವಾಧ್ಯಕ್ಷ ವೆಂಕೋಬ ಬಿ ದೊಡ್ಡಮನಿ, ಅಧ್ಯಕ್ಷರು ಅಂಬ್ರೇಶ ಮಾಳಿಗೇರ.ಕೆ,ಉಪಾಧ್ಯಕ್ಷ ರು ವೀರೇಶ ಹಾಳೇರ ಮತ್ತು ದ್ಯಾವಪ್ಪ ದೊಡ್ಡಮನಿ, ಪ್ರಧಾನ ಕಾರ್ಯದರ್ಶಿ ಬಾಬುರಾವ್,ಕಾರ್ಯದರ್ಶಿ ದೇವರಾಜ ಬಡಿಗೇರ ,ಸಹ ಕಾರ್ಯದರ್ಶಿ ಶರಣಬಸವ ಲಗಳಿ,ಪ್ರಧಾನ ಸಂ.ಕಾರ್ಯದರ್ಶಿ ದೊಡ್ಡಪ್ಪ ದೊಡ್ಡಮನಿ, ಸಂಘಟನಾಕಾರ್ಯದರ್ಶಿ ಮಲ್ಲಿಕಾರ್ಜುನ ಹಾಳೇದ,ಸಹ ಸಂ ಕಾರ್ಯದರ್ಶಿ ಮೌನೇಶ ಕೆಂಗೂರಿ,ಪ್ರಧಾನ ಸಂಚಾಲಕ ಮಾನಪ್ಪ ಹಾಳೇದ, ಸಂಚಾಲಕ ದೇವರಾಜ ದೊಡ್ಡಮನಿ,ಸಹ ಸಂಚಾಲಕ ಬಸವರಾಜ ರಾಮಣ್ಣ, ಖಜಾಂಚಿ ಗಳು ರವಿಚಂದ್ರ ಬಿರಾದಾರ ಮತ್ತು ಚಾಂದ ಪಾಷ ಇವರನ್ನು ನೇಮಕಗೊಳಿಸಲಾಯಿತು.