ಸುರಪುರ: ತಾಲೂಕಿನ ಖಾನಾಪುರ ಎಸ್.ಹೆಚ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಶೀಬಾರಬಂಡಿ ಗ್ರಾಮಕ್ಕೆ ಮೂಲಭೂತ ಸೌಲಭ್ಯ ನೀಡಬೇಕೆಂದು ಆಗ್ರಹಿಸಿ ಜಯಕರ್ನಾಟಕ ಸಂಘಟನೆಯಿಂದ ಖಾನಾಪುರ ಎಸ್.ಹೆಚ್ ಗ್ರಾಮ ಪಂಚಾಯತಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ,ಕಳೆದ ಅನೇಕ ವರ್ಷಗಳಿಂದ ಶೀಬಾರಬಂಡಿ ಗ್ರಾಮ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ.ಕುಡಿಯುವ ನೀರಿಲ್ಲ,ಸರಿಯಾದ ರಸ್ತೆಯಿಲ್ಲ,ಮಕ್ಕಳಿಗೆ ಶಾಲೆ ಕಟ್ಟಡವಿಲ್ಲ,ಶವಸಂಸ್ಕಾರಕ್ಕೆ ಸನ್ಮಾನವಿಲ್ಲ ಹೀಗೆ ಅನೇಕ ಸಮಸ್ಯೆಗಳು ಗ್ರಾಮವನ್ನು ಕಾಡುತ್ತಿವೆ.ಆದ್ದರಿಂದ ಕೂಡಲೇ ಗ್ರಾಮ ಪಂಚಾಯತಿ ಅಧಿಕಾರಿಗಳು ಎಚ್ಚೆತ್ತು ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು ಇಲ್ಲವಾದಲ್ಲಿ ಸಂಘಟನೆಯಿಂದ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ನಂತರ ತಹಸೀಲ್ದಾರರಿಗೆ ಬರೆದ ಮನವಿಯನ್ನು ಸಂಘಟನೆಯ ತಾಲೂಕು ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ನಾಯಕ ಓದಿ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಶರಣಪ್ಪ ಬೈರಿಮಡ್ಡಿ,ತಾಲೂಕು ಕಾರ್ಯಾಧ್ಯಕ್ಷ ಮಲ್ಲಪ್ಪ ನಾಯಕ,ರಂಗನಾಥ ರಾಮಬಾಣ,ಶಿವರಾಜ ವಗ್ಗರ ದೀವಳಗುಡ್ಡ,ದೇವು ನಾಯಕ,ಮೌನೇಶ ಅಂಬಿಗೇರ,ಬಸವರಾಜ ಪೂಜಾರಿ,ಮೌನೇಶ ರಾಮಬಾಣ,ಸಂಗಪ್ಪ ರಾಮಬಾಣ,ಚಂದಪ್ಪ ರಾಮಬಾಣ ಇತರರಿದ್ದರು.