ಕಾನೂನು ಪಾಲನೆ ನಮ್ಮೆಲ್ಲರ ಆದ್ಯ ಕರ್ತವ್ಯ: ವಕೀಲ ಶಿವಕುಮಾರ ನಾಯಕ ದಿನ್ನಿ .

0
23

ರಾಯಚೂರು : ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪೋಲಿಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ವಕೀಲರ ಸಂಘ, ವಾರ್ತಾ ಮತ್ತು ಪ್ರಸಾರ ಇಲಾಖೆ, ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆ, ಮಕ್ಕಳ ರಕ್ಷಣಾ ಘಟಕ ಸೇರಿ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ರಾಯಚೂರು ತಾಲೂಕಿನ ಪುರತಪ್ಲಿ, ಮಟಮಾರಿ, ಪಂಚಮುಖಿ ಗಾಣದಾಳ ಮತ್ತು ಸಿಂಗನೋಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಉದ್ಘಾಟಸಿದರು.

ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಯ ಶಿವಕುಮಾರ ನಾಯಕ ದಿನ್ನಿ ಮಾತನಾಡಿ ಈ ಹಿಂದೆ ಜನ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ನ್ಯಾಯಾಲಯಕ್ಕೆ ಬರುತ್ತಿದ್ದರು ಆದರೆ ಈಗ ನ್ಯಾಯಾಲಯದ ಪ್ರತಿನಿಧಿಗಳು ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ನಿಮ್ಮ ವ್ಯಾಜ್ಯಗಳನ್ನು ಪರಿಹರಿಸಲು ಹಾಗೂ ಅದಕ್ಕೆ ಬೇಕಾದ ಸೂಕ್ತ ಅರಿವು ಮತ್ತು ನೆರವನ್ನು ನೀಡಲು ನಿಮ್ಮ ಗ್ರಾಮಗಳಿಗೆ ಬಂದಿದೆ ಇದನ್ನು ತಿಳಿದುಕೊಂಡು ಸದುಪಯೋಗ ಪಡಿಸಿಕೊಳ್ಳಲು ಪ್ರತಿಯೊಬ್ಬರು ಮುಂದಾಗಬೇಕು ಕಾನೂನು ಅರಿತುಕೊಳ್ಳುವುದು ಮತ್ತು ಅದನ್ನು ಪಾಲನೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ನಮ್ಮ ದೇಶದ ಕಾನೂನಿನಲ್ಲಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಇದೆ. ಅದನ್ನು ಅರಿತುಕೊಳ್ಳಿ ಜೊತೆಗೆ ನಿಮ್ಮಗೆ ಉಚಿತವಾಗಿ ಕಾನೂನಿನ ನೆರವು ಬೇಕಿದ್ದರೆ ಹಾಗೂ ನಿಮ್ಮಗೆ ಏನೇ ಸಮಸ್ಯೆ ಇದ್ದರು ಕಾನೂನು ಸೇವಾ ಪ್ರಾಧಿಕಾರದ ಗಮನಕ್ಕೆ ತಂದರೆ ಆರ್ಹರಿಗೆ ಉಚಿತವಾದ ಕಾನೂನಿನ ಸಹಾಯವನ್ನು ನೀಡಲಾಗುವುದು ಎಂದರು.

Contact Your\'s Advertisement; 9902492681

ನಂತರ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆಯ ಜಿಲ್ಲಾ ಅಧಿಕಾರಿಯಾ ಮಂಜುನಾಥ ರೆಡ್ಡಿ, ಮಕ್ಕಳ ರಕ್ಷಣಾ ಘಟಕದ ಶ್ರೀದೇವಿ ಮಕ್ಕಳ ಹಕ್ಕುಗಳು ಹಾಗೂ ಅವರಿಗಾಗಿ ಇರುವ ವಿಶೇಷ ಕಾನೂನುಗಳನ್ನು ಕುರಿತು ಉಪನ್ಯಾಸ ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಕೀಲರಾದ ಶಿವಕುಮಾರ ಮ್ಯಾಗಳಮನಿ ಜನ ಸಾಮಾನ್ಯರು ಅಗತ್ಯವಾಗಿ ತಿಳಿದುಕೊಳ್ಳಬೇಕಾದ ಮೋಟಾರು ವಾಹನ ಕಾಯಿದೆ, ಗ್ರಾಹಕರ ಹಿತ ರಕ್ಷಣಾ ಕಾಯಿದೆ, ಸ್ವತ್ತು ಹಸ್ತಾಂತರಣ ಅಧಿನಿಯಮ, ಹಿರಿಯ ನಾಗರಿಕರ ಪಾಲನೆ ಪೋಷಣೆ ಸೇರಿ ಇತರೆ ಸಂಬಂಧಿಸಿದ ಕಾನೂನುಗಳನ್ನು ಕುರಿತು ಸುದೀರ್ಘವಾಗಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತಿ ಸಹಾಯ ನಿರ್ದೇಶಕರಾದ ವೆಂಕಟೇಶ ದೇಸಾಯಿ, ರಾಷ್ಟ್ರೀಯ ಬಾಲ ಕಾರ್ಮಿಕರ ಯೋಜನೆಯ ಯೋಜನ ನಿರ್ದೇಶಕರಾ ಶಿವಪ್ಪ, ಗ್ರಾಮ ಪಂಚಾಯತಿ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳು, ಶಾಲೆಯ ಮುಖ್ಯಗುರುಗಳು ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು, ಮುಖ್ಯಸ್ಥರು ಸೇರಿ ಸಾರ್ವಜನಿಕರು, ಆಶಾ, ಅಂಗನವಾಡಿ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಇತರರು ಭಾಗವಹಿದ್ದರು. ತಾಲೂಕು ಪಂಚಾಯತಿ ಸಹಾಯಕ ಅಧಿಕಾರಿ ರಾಜಗೋಪಾಲ ಪುರೋಹಿತ ಕಾರ್ಯಕ್ರಮವನ್ನು ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here