ಬೆಂಗಳೂರು: ದೇಶದಲ್ಲಿ ಮುಂಚೂಣಿಯಲ್ಲಿರುವ ಡೆಟ್ ಪ್ಲಾಟ್ ಫಾರ್ಮ್ ಗಳಲ್ಲಿ ಒಂದಾಗಿರುವ ಕ್ರೆಡ್ ಅವೆನ್ಯೂ ಇಂದು ಬೆಂಗಳೂರಿನಲ್ಲಿ ತನ್ನ ತಂತ್ರಜ್ಞಾನ ಅಭಿವೃದ್ಧಿ ಕೇಂದ್ರವನ್ನು ಆರಂಭಿಸಿದೆ. ಈ ಕೇಂದ್ರವು ಪ್ರಾಥಮಿಕವಾಗಿ ಕಂಪನಿಯ ತಂತ್ರಜ್ಞಾನ ಅಗತ್ಯತೆಗಳನ್ನು ಪೂರೈಸಲಿದೆ. ಇಲ್ಲಿ 2023 ನೇ ಹಣಕಾಸು ಸಾಲಿನ ವೇಳೆಗೆ 200 ಕ್ಕೂ ಹೆಚ್ಚು ಸಿಬ್ಬಂದಿಯ ಸದೃಢವಾದ ತಂಡವು ಕಾರ್ಯನಿರ್ವಹಿಸಲಿದೆ. ಇದು ಭಾರತದಲ್ಲಿ ಕ್ರೆಡ್ ಅವೆನ್ಯೂನ ಒಟ್ಟಾರೆ ಸಿಬ್ಬಂದಿ ಸಂಖ್ಯೆಯ 30% ರಷ್ಟಾಗಲಿದೆ. ಎಂಜಿನಿಯರಿಂಗ್, ಉತ್ಪನ್ನ, ವಿನ್ಯಾಸ, ಕ್ಯೂಎ, ಎಸ್ ಡಿಇಟಿ, ಡೇಟಾ ಸೈನ್ಸ್ ಮತ್ತು ಡೇಟಾ ಎಂಜಿನಿಯರಿಂಗ್ ಸೇರಿದಂತೆ ಇನ್ನಿತರೆ ಕ್ಷೇತ್ರಗಳಲ್ಲಿ ದುಡಿಯುವ ಸಿಬ್ಬಂದಿಯನ್ನು ಇಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ.
ಚೆನ್ನೈ, ಮುಂಬೈ ಮತ್ತು ದೆಹಲಿಯಲ್ಲಿ ಕಚೇರಿಗಳನ್ನು ಹೊಂದಿರುವ ಕಂಪನಿಯು ಕ್ರಮವಾಗಿ 275, 60 ಮತ್ತು 10 ಸಿಬ್ಬಂದಿಯನ್ನು ಹೊಂದಿದೆ. ಕ್ರೆಡ್ ಅವೆನ್ಯೂ 2023 ರ ಹಣಕಾಸು ಸಾಲಿನ ವೇಳೆಗೆ ಬೆಂಗಳೂರಿನ ತಂತ್ರಜ್ಞಾನ ಕೇಂದ್ರದಲ್ಲಿ 200 ತಂತ್ರಜ್ಞಾನ ಪರಿಣತರನ್ನು ನೇಮಕ ಮಾಡಿಕೊಳ್ಳುವ ಉದ್ದೇಶವನ್ನು ಹೊಂದಿದೆ.
ಬೆಂಗಳೂರು ಕೇಂದ್ರವು ಮಾರ್ಕೆಟ್ ಪ್ಲೇಸ್, ಮೊಬೈಲ್ ಎಂಜಿನಿಯರಿಂಗ್, ಸಾಲಗಳು ಮತ್ತು ಯೂಸರ್ ಪ್ಲಾಟ್ ಫಾರ್ಮ್ ತಂಡಗಳನ್ನು ತಕ್ಷಣದ ಮಾದರಿಯಲ್ಲಿ ಸೇವೆಗಳನ್ನು ಒದಗಿಸಲಿದೆ. ಕಳೆದ ವರ್ಷಗಳಲ್ಲಿ ಉನ್ನತ ಬೆಳವಣಿಗೆಯ ಪಥದಲ್ಲಿ ಸಂಸ್ಥೆಯು ಭವಿಷ್ಯದಲ್ಲಿ ತನ್ನ ಬೆಳವಣಿಗೆಯ ವೇಗವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಅನೇಕ ಪಾಡ್ ಗಳನ್ನು ಸ್ಥಾಪಿಸಲು ಉದ್ದೇಶಿಸಿದೆ.
ಕ್ರೆಡ್ ಅವೆನ್ಯೂ ಮುಂಬರುವ ಕೆಲವು ತಿಂಗಳುಗಳಲ್ಲಿ ಡೇಟಾ ಸೈನ್ಸ್, ಮಶಿನ್ ಲರ್ನಿಂಗ್ ಮತ್ತು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ನಂತಹ ಕಟಿಂಗ್ ಎಡ್ಜ್ ತಂತ್ರಜ್ಞಾನಗಳನ್ನು ತನ್ನ ಪ್ಲಾಟ್ ಫಾರ್ಮ್ ನಲ್ಲಿ ಪರಿಚಯಿಸಲಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪರಿಣತ ಮತ್ತು ಪ್ರತಿಭಾನ್ವಿತರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಇದರಲ್ಲಿ ಪ್ರಮುಖವಾಗಿ ಡೇಟಾ ಎಂಜಿನಿಯರಿಂಗ್, ಎಐ-ಎಂಎಲ್, ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್, ಡೇಟಾ ಸೆಕ್ಯೂರಿಟಿ, ಪ್ರಾಡಕ್ಟ್ ಮ್ಯಾನೇಜ್ ಮೆಂಟ್, ಡೀಪ್ ಇಂಟಗ್ರೇಶನ್, ಪ್ಲಾಟ್ ಫಾರ್ಮ್ ಆರ್ಕಿಟೆಕ್ಚರ್ ಮತ್ತು ಸಾಫ್ಟ್ ವೇರ್ ಎಂಜಿನಿಯರಿಂಗ್ ಸೇರಿದೆ. ಕಂಪನಿಯು ದೇಶದಲ್ಲಿ ಈಗಾಗಲೇ ಅತ್ಯಂತ ಅತ್ಯಾಧುನಿಕ ಡೇಟಾ ಸೈನ್ಸ್ ತಂಡಗಳನ್ನು ಹೊಂದಿರುವ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕ್ರೆಡ್ ಅವೆನ್ಯೂದ ಸಂಸ್ಥಾಪಕ & ಸಿಇಒ ಗೌರವ್ ಕುಮಾರ್ ಅವರು ಮಾತನಾಡಿ, “ಜಾಗತಿಕವಾಗಿ ಕ್ರೆಡ್ ಅವೆನ್ಯೂ ಒಂದು ಅತ್ಯುತ್ತಮವಾದ ಡೆಬಿಟ್ ಪ್ಲಾಟ್ ಫಾರ್ಮ್ ಎನಿಸಿದೆ. ಪ್ರಸ್ತುತ ಪ್ಲಾಟ್ ಫಾರ್ಮ್ 1000+ ಇಶ್ಯೂವರ್ ಗಳಿಗೆ, 200 ಕ್ಕೂ ಹೆಚ್ಚು ಹೂಡಿಕೆದಾರರಿಗೆ ಸೇವೆಗಳನ್ನು ಒದಗಿಸುತ್ತಿದೆ. ಇಲ್ಲಿವರೆಗೆ 8 ಬಿಲಿಯನ್ ಯುಎಸ್ ಡಿ ಸಾಲದ ಹರಿವನ್ನು ಹೊಂದಲು ಸಾಧ್ಯವಾಗಿದೆ. ಸ್ಕೇಲೇಬಲ್ ಮತ್ತು ವರ್ಗದ ವಿನ್ಯಾಸಕಾರರ ತಂತ್ರಜ್ಞಾನಗಳ ವೇದಿಕೆಯನ್ನು ಸರಿಸಾಟಿಯಿಲ್ಲದ ರೀತಿಯಲ್ಲಿ ರಚಿಸುವುದು ನಮ್ಮ ಉದ್ದೇಶವಾಗಿದೆ.
ಈ ನಮ್ಮ ಉದ್ದೇಶವನ್ನು ಪೂರೈಸುವ ನಿಟ್ಟಿನಲ್ಲಿ ನಾವು ಮುಂದೆ ಸಾಗುತ್ತಿದ್ದು, ಇದಕ್ಕೆ ಪೂರಕವಾಗಿ ಬೆಂಗಳೂರಿನ ಕೇಂದ್ರವು ಕ್ರೆಡ್ ಅವೆನ್ಯೂದಲ್ಲಿ ತಂತ್ರಜ್ಞಾನದ ಪ್ರಯತ್ನಗಳಿಗೆ ಅತ್ಯುತ್ತಮವಾದ ರೀತಿಯಲ್ಲಿ ಕಾರ್ಯಪ್ರವೃತ್ತವಾಗಲಿದೆ. ತಂತ್ರಜ್ಞಾನ ಪ್ರತಿಭಾನ್ವಿತರು ನಮ್ಮೊಂದಿಗೆ ಕೈಜೋಡಿಸಲಿದ್ದು, ಇವರು ಕ್ರಿಯೇಟರ್ಸ್ ವರ್ಗದಲ್ಲಿನ ಪ್ರಕ್ರಿಯೆಯಲ್ಲಿ ತೊಡಗಲಿದ್ದಾರೆ’’ ಎಂದು ತಿಳಿಸಿದರು.
ಕ್ರೆಡ್ ಅವೆನ್ಯೂದ ತಂತ್ರಜ್ಞಾನ, ಮಾರಾಟಗಳು, ಮಾರ್ಕೆಟಿಂಗ್, ಸ್ಟ್ರಾಟೆಜಿ ಮತ್ತು ಎಚ್ಆರ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ 350 ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. 2022 ರ ಹಣಕಾಸು ಸಾಲಿನ ಅಂತ್ಯದ ವೇಳೆಗೆ ಸಿಬ್ಬಂದಿ ಸಂಖ್ಯೆ 700 ಕ್ಕೆ ಹೆಚ್ಚಳವಾಗುವ ನಿರೀಕ್ಷೆ ಇದೆ. ಇದಲ್ಲದೇ, ಕಂಪನಿಯು ಜಾಗತಿಕ ವಿಸ್ತರಣೆ ಮಾಡಿಕೊಳ್ಳುವ ಯೋಜನೆಗಳನ್ನು ಹೊಂದಿದೆ ಮತ್ತು ರಚನಾತ್ಮಕ ಸ್ವಾಧೀನಗಳ ಮೂಲಕ ಮತ್ತಷ್ಟು ಬೆಳವಣಿಗೆ ಹೊಂದುವ ಯೋಜನೆಗಳನ್ನು ರೂಪಿಸಿದೆ.
ಕಂಪನಿಯು ಇತ್ತೀಚೆಗೆ ಭಾರತದಲ್ಲಿ 90 ಮಿಲಿಯನ್ ಯುಎಸ್ ಡಿಯನ್ನು ಸಂಗ್ರಹಿಸಿದೆ. ಇದು ಸ್ಟಾರ್ಟಪ್ ನ ಸೀರೀಸ್ ಎ ಫಂಡಿಂಗ್ ಸುತ್ತಿನಲ್ಲಿ ಅತಿದೊಡ್ಡ ಮೊತ್ತದ ಸಂಗ್ರಹವಾಗಿದೆ. ಈ ಸುತ್ತನ್ನು ಸಿಕ್ವೊಯಿಯಾ ಕ್ಯಾಪಿಟಲ್ ಇಂಡಿಯಾ ನೇತೃತ್ವ ವಹಿಸಿದ್ದು, ಲೈಟ್ ಸ್ಪೀಡ್, ಟಿವಿಎಸ್ ಕ್ಯಾಪಿಟಲ್ ಫಂಡ್ಸ್, ಲೈಟ್ ರಾಕ್ ಮತ್ತು ಇತರ ಕಂಪನಿಗಳು ಸಹ-ನೇತೃತ್ವವನ್ನು ವಹಿಸಿದ್ದವು. ಸೀರೀಸ್ ಎ ಫಂಡ್ ರೈಸ್ ನಲ್ಲಿ ಕಂಪನಿ ಮೊತ್ತ 410 ಮಿಲಿಯನ್ ಯುಎಸ್ ಡಿ ಆಗಿತ್ತು.
ಭಾರತದಿಂದ ಆರಂಭವಾಗಿ ಜಾಗತಿಕ ಮಟ್ಟದಲ್ಲಿ ಡೆಬಿಟ್ ಮಾರ್ಕೆಟ್ ಗಳನ್ನು ರೂಪಾಂತರ ಮಾಡುವ ಗುರಿ ಕ್ರೆಡ್ ಅವೆನ್ಯೂದ್ದಾಗಿದೆ. ಈ ಮೂಲಕ ಗಮನಾರ್ಹವಾದ ರೀತಿಯಲ್ಲಿ ಆರ್ಥಿಕ ಬೆಳವಣಿಗೆಯನ್ನು ಅನ್ಲಾಕ್ ಮಾಡುವ ಪ್ರಯತ್ನ ನಡೆಸಿದೆ. ಮೊದಲನೆಯದಾಗಿ ಸಾಲ ನೀಡುವ ಮತ್ತು ಎರವಲು ಪಡೆಯುವ ಅವಕಾಶಗಳನ್ನು ಅನ್ವೇಷಣೆ ಮಾಡಲು ಹಣಕಾಸು ಸೇವಾ ಸಂಸ್ಥೆಗಳಿಗೆ ಮತ್ತು ಮತ್ತೊಂದೆಡೆ ಉದ್ಯಮಗಳಿಗೆ ಪಾರದರ್ಶಕವಾದ ಮಾರುಕಟ್ಟೆಯನ್ನು ಒದಗಿಸುವುದು ಪ್ರಮುಖ ಆದ್ಯತೆಯಾಗಿದೆ.
ಎರಡನೆಯದಾಗಿ, ದೃಢವಾದ ಉತ್ಪನ್ನದ ಸೂಟ್ ಮತ್ತು ಕ್ರೆಡಿಟ್ ರೇಟಿಂಗ್ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸುವುದು ಪಾಲುದಾರರಿಗೆ ಸೂಕ್ತವಾದ ಉತ್ಪನ್ನ- ಅಪಾಯದ ಫಿಟ್ ಅನ್ನು ಕಂಡುಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಅದೇ ರೀತಿ ಕೊನೆಯದಾಗಿ, ದೃಢವಾದ ಮತ್ತು ಕಡಿಮೆ ಘರ್ಷಣೆ ಅಥವಾ ಅಡ್ಡಿಯಾದ ಯುಎಕ್ಸ್ ಅನ್ನು ರಚಿಸುವಂತೆ ಮಾಡುತ್ತದೆ. ಇದು ವಹಿವಾಟಿನ ಕಾರ್ಯಗತಗೊಳಿಸುವಿಕೆಯನ್ನು ಸ್ವಯಂಚಾಲಿತಗೊಳಿಸುತ್ತದೆ. ಆದಾಗ್ಯೂ ನಿರಂತರವಾದ ಪೋರ್ಟ್ ಫೋಲಿಯೋದ ಮೇಲ್ವಿಚಾರಣೆಯನ್ನು ಮಾಡುತ್ತದೆ.
ಈಗಾಗಲೇ ಕಂಪನಿಯು ಸಹ-ಸಾಲ ನೀಡುವಿಕೆ, ಸಾಲಗಳು ಮತ್ತು ಬಾಂಡ್ ಗಳು ಸೇರಿದಂತೆ ವಿವಿಧ ಸಾಲ ವಿಭಾಗಗಳಲ್ಲಿ ಮಾರುಕಟ್ಟೆಯಲ್ಲಿ ಮುಂಚೂಣಿ ಸ್ಥಾನವನ್ನು ಕಾಯ್ದುಕೊಂಡಿದೆ. ಪ್ರವೇಶ ಮತ್ತು ಸೇವೆಯನ್ನು ಸರಳಗೊಳಿಸುವ ನಿಟ್ಟಿನಲ್ಲಿ ಹಾಗೂ ಗ್ರಾಹಕರು ಒಂದೇ ಪೋರ್ಟಲ್ ಮೂಲಕ ಅನೇಕ ಕೊಡುಗೆಗಳನ್ನು ತಮಗಿಷ್ಟವಾದ ರೀತಿಯಲ್ಲಿ ನ್ಯಾವಿಗೇಟ್ ಮಾಡಲು ಸಹಾಯ ಮಾಡುತ್ತದೆ.