ಕಲಬುರಗಿ: ನಗರದ ಜಿಲ್ಲಾ ನ್ಯಾಯಾಲಯ ವೃತ್ತ ಕೆ.ಎ.ಟಿ. ರಸ್ತೆಯಲ್ಲಿರುವ ಕಲ್ಯಾಣ ಕರ್ನಾಟಕ ಯುವ ವಕೀಲರ ಸಂಘದ ಕಚೇರಿಯಲ್ಲಿ ಕರ್ನಾಟಕ ರಾಜ್ಯೋತ್ಸವದ ಆಚರಿಸಲಾಯಿತು.
ಸಂಘದ ಅಧ್ಯಕ್ಷ ಹಾಗೂ ಹೈಕೊರ್ಟ ನ್ಯಾಯವಾದಿ ಜಯಾನಂದಯ್ಯ ಸ್ವಾಮಿ ಹಾಗೂ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಬಸವರಾಜ ಕೋಡಗಿಮಠ, ಆರ್.ಎಸ್.ಪಾಟೀಲ, ಹಣಮಂತ ಕಂದಳ್ಳಿ, ದೇವರಾಜ ಹಮೀಲಪೂರಕರ, ಅಮೃತ, ನ್ಯಾಯವಾದಿ ಬಸವರಾಜ ಆಲಕುಂಟೆ, ಶರಣಮ್ಮಾ ಸ್ವಾಮಿ, ಪ್ರಭಾವತಿ, ರೇಖಾ, ಸುನೀಲ ಗಾಜರೆ ಇದ್ದರು.