ಕಲಬುರಗಿ: ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲಿ ಬಂಡವಾಳ ಹೂಡಿಕೆದಾರರ ಸಭೆ ನಡೆಸಿ ಕೃಷಿ.ಕೈಗಾರಿಕೆ ಕ್ಷೇತ್ರಕ್ಕೆ ಒತ್ತು ನೀಡಿ ಈ ಭಾಗದ ಜನರು ವಲಸೆ ಹೋಗದಂತೆ ದುಡಿಯುವ ಕೈಗಳಿಗೆ ಕೆಲಸ ಕೊಟ್ಟು ಪ್ರಾದೇಶಿಕ ಅಸಾಮನತೆ ತೊಲಗಿಸಬೇಕು ಎಂದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಇಂದು ಬೃಹತ್ ಮತ್ತು ಮಾದ್ಯಮ ಕೈಗಾರಿಕಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ಭಾರತ ಮುಕ್ತಿ ಮೋರ್ಚಾ ಸಂಘಟನೆ ವತಿಯಿಂದ ಮನವಿ ಸಲ್ಲಿಸಿದರು.
ಇಂದು ಸಚಿವರಿಗೆ ಭೇಟಿ ನೀಡಿದ ಸಂಘಟನೆ ಮುಖಂಡ ಮಾರುತಿ ಗಂಜಗಿರಿ ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಿ ರೈತಾಪಿ ಜನರಿಗೆ ಅನುಕೂಲ ಮಾಡಿ ಕೃಷಿ ಕ್ಷೇತ್ರ ಉತ್ತೇಜಿಸಬೇಕು, ಸ್ಥಳೀಯ ಸಕ್ಕರೆ ಕಾರ್ಖಾನೆ ಕೂಡಲೆ ಪ್ರಾರಂಬಿಸಿ ಮತ್ತು ಖಾಸಗಿ ಸಿಮೆಂಟ್ ಕಾರ್ಖಾನೆಗಳಲ್ಲಿ ಸ್ಥಳಿಯರಿಗೆ ಹೆಚ್ಚಿನ ಆದ್ಯತೆ ನೀಡದೆಯಿರುವುದರಿಂದ, ಪಕ್ಕದ ರಾಜ್ಯಗಳಿಗೆ ವಲಸೆ ಹೋಗಿ ಕುಟುಂಬಗಳು ಒಡೆದು ಹೋಗುತ್ತಿವೆ ಆದ್ದರಿಂದ ಸ್ಥಳಿಯರಿಗೆ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.
ಅತಿವೃಷ್ಠಿಯಿಂದ ಬೆಳೆ ಹಾಳಾದ ಎಲ್ಲಾ ರೈತರಿಗೆ 30 ಸಾವಿರ ರೂಪಾಯಿ ಪರಿಹಾರ ನೀಡಬೇಕು, ಚಿಂಚೋಳಿ ಹಾಗೂ ಕಾಳಗಿ ತಾಲೂಕಿನ ಭೂಕಂಪನವಾಗುತ್ತಿರುವ 25 ಗ್ರಾಮಗಳಲ್ಲಿ ವ್ಯಯಕ್ತಿಕ ಶೆಡ್ ನಿರ್ಮಿಸಬೇಕು ಹಾಗೂ ವ್ಯಯಕ್ತಿಕ ಶೆಡ್ ನಿರ್ಮಿಸಲು ಸ್ಥಳ ವಿಲ್ಲದಿದ್ದರೆ ಸರ್ಕಾರ ಜಮೀನು ಖರಿದಿ ಮಾಡಿ ಅಲ್ಲಿ ಶೆಡ್ ನಿರ್ಮಿಸಿ ಕೊಡಬೇಕು, ಗ್ರಾಮ ವಾಸ್ತವ್ಯಕ್ಕಾಗಿ ಬಂದ ಕಲಬುರಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವದೇ ಪ್ರಯೋಜನವಾಗಿಲ್ಲಾ ಇಂತಹ ಬೇಜಾವಬ್ದಾರಿ ಜಿಲ್ಲಾಧಿಕಾರಿಗಳಿಗೆ ಕೂಡಲೆ ವರ್ಗಾವಣೆ ಮಾಡಬೇಕು ಆಗ್ರಹಿಸಿದರು.
ಕಂದಾಯ ಸಚಿವರಾದ ಆರ್ ಅಶೋಕ್ ರವರು ಪರಿಶಿಷ್ಟ ಜಾತಿ ವಾಸವಿರುವ ಮನೆ ವಿಕ್ಷಣೆ ಮಾಡಿ ಎಂದು ಜನರು ಕೈಮುಗಿದು ಕೇಳಿಕೊಂಡರು ನಿರ್ಲಕ್ಷ್ಯ ಮಾಡಿ ಗಡಿಕೇಶ್ವಾರ ಗ್ರಾಮದಲ್ಲಿ 05 ಜನರಿಗೆ ಮಾತ್ರ ಪರಿಹಾರ ಚೆಕ್ಕ್ ವಿತರಣೆ ಮಾಡಿದ್ದಾರೆ.ಇನ್ನೂಳಿದವರಿಗು ಕೂಡ ಕೂಡಲೆ ಪರಿಹಾರ ಚೆಕ್ಕ್ ವಿತರಣೆ ಮಾಡಬೇಕು, ತಾಲೂಕಾ ಚಿಂಚೋಳಿಯ ಪುರಸಭೆ ವ್ಯಾಪ್ತಿಯಲ್ಲಿ ಚಂದಾಪೂರದ ವಾರ್ಡ್ ನಂ .17 ರ ಆಶ್ರಯ ಕಾಲೂನಿಗೆ ತಾಂಡೂರ-ಚಿಂಚೋಳಿ ಮುಖ್ಯ ರಸ್ತೆಗೆ ಕೂಡು ರಸ್ತೆ ನಿರ್ಮಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗೋಪಾಲ್ ಗಾರಂಪಳ್ಳಿ, ಮೌನೇಶ್ ಗಾರಂಪಳ್ಳಿ , ಮಾರುತಿ ಜಾದವ್, ಸಿದ್ದು ರಂಗನೂರ್, ಪ್ರದೀಪ್ ಮಾಳಗಿ, ಸುಭಾಷ್ ತಾಡಪಳ್ಳಿ ಸೇರಿದಂತೆ ಹಲವರು ಇದ್ದರು.