ಸದಸ್ಯತ್ವ ಅಭಿಯಾನದ ಮೂಲಕ ಸಂಘಟನೆ ಬಲಪಡಿಸಿ: ವರಲಕ್ಷ್ಮೀ ರಾಯಚೂರು

0
14

ರಾಯಚೂರು: ಇಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘಟನೆ(ಸಿಐಟಿಯು)ಯ ಲಿಂಗಸ್ಗೂರು ತಾಲೂಕಿನ ಗೆಜ್ಜಲಗಟ್ಟಾ ಸರ್ಕಲ್ ಮಟ್ಟದ ಸಂಘಟನಾ ಕಾರ್ಯಾಗಾರ ವನ್ನು ವೀರಾಪೂರಿನ ಶ್ರಮಿಕ ಭವನದಲ್ಲಿ ನಡೆಸಲಾಯಿತು.

ಸಂಘಟನಾ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷೆ ವರಲಕ್ಷ್ಮೀ ರಾಯಚೂರು ಮಾತನಾಡಿ, ಬಿಸಿಯೂಟ ನೌಕರರು, ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಂಘಟನೆಯನ್ನು ಬಲಪಡಿಸಬೇಕು. ಅದಕ್ಕಾಗಿ ಸಂಘಟನೆಯ ಸದಸ್ಯತ್ವವನ್ನು ನೋಂದಣಿ ಆರಂಭಿಸಿ ಎಂದು ಕರೆ ನೀಡಿದರು.

Contact Your\'s Advertisement; 9902492681

ನಮ್ಮನ್ನ ಆಳುವ ಸರ್ಕಾರಗಳು ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತಂದು ಕಾರ್ಮಿಕರ ಹಕ್ಕುಗಳನ್ನು ಕಸಿಯುತ್ತಿವೆ ಎಂದು ಆರೋಪಿಸಿದರು.

ಸಿಐಟಿಯು ಜಿಲ್ಲಾ ಸಹ ಕಾರ್ಯದರ್ಶಿ ಮಹ್ಮದ್ ಹನೀಫ್, ಎಸ್ಎಫ್ಐ ಜಿಲ್ಲಾಧ್ಯಕ್ಷ ಹಾಗೂ ಗ್ರಾಮ ಪಂಚಾಯತಿ ಸದಸ್ಯ ರಮೇಶ ವೀರಾಪೂರು ಮಾತನಾಡಿ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿದರು.

ಈ ಸಂದರ್ಭದಲ್ಲಿ ಬಿಸಿಯೂಟ ನೌಕರರ ಸಂಘನೆಯ ರೇಣುಕಾ ನಿಲೋಗಲ್, ಹನುಮಂತಿ ಆನ್ವರಿ, ಮಾಣಿಕ್ಯಮ್ಮ ನಗನೂರು, ರತ್ನಮ್ಮ ಗೆಜ್ಜಲಗಟ್ಟಾ, ಬಸಮ್ಮ ಪಾಮನಕೆಲ್ಲೂರು, ಗೌರಮ್ಮ ವೀರಾಪೂರು, ಕೆಪಿಆರ್ ಎಸ್ ಮುಖಂಡ ನಿಂಗಪ್ಪ, ಡಿವೈಎಫ್ಐ ಮುಖಂಡ ಶಿವರಾಜ್ ಕಪಗಲ್, ಎಸ್ಎಫ್ಐ ಮುಖಂಡರಾದ ಅಮರೇಗೌಡ, ಬಸಲಿಂಗಪ್ಪ ಸೇರಿದಂತೆ ನೂರಾರು ನೌಕರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here