ಸಾಹಿತ್ಯ ಪರಿಷತ್ತು ಬಟ್ಟೆಗಳ ವ್ಯಾಪಾರ ಕೇಂದ್ರ ಮಾಡುವುದಿಲ್ಲಾ, ಪುಸ್ತಕ ಜಾತ್ರೆಯನ್ನಾಗಿ ಮಾಡುವೆ: ನಿರಗುಡಿ

0
30

ಜೇವರ್ಗಿ:- ಇಲ್ಲಿನ ಬಿಜಾಪುರ್ ರಸ್ತೆಯ ಪಕ್ಕದಲ್ಲಿರುವ ಗುರುಕುಲ ಶಾಲೆಯ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿ ಹಾಗೂ ಸಭೆಯಲ್ಲಿ ಬಿ ಎಚ್ ನಿರಗುಡಿ ಮಾತನಾಡಿದರು.

ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾದರೆ ಪ್ರಾಮಾಣಿಕವಾಗಿ ,ಜವಾಬ್ದಾರಿ ಕೆಲಸವನ್ನು ನಿರ್ವಹಿಸುತ್ತೇನೆ. ಸಾಮೂಹಿಕ ನಾಯಕತ್ವದೊಂದಿಗೆ ಜಿಲ್ಲಾ ಘಟಕವನ್ನು ಯಾವುದೇ ಅಡ್ಡಿ ಆತಂಕವಿಲ್ಲದೆ ,ವಿವಾದಗಳಿಲ್ಲಿದೆ ನಡೆಸಿಕೊಂಡು ಬರುತ್ತೇನೆ. ಜೊತೆಗೆ, ಪ್ರತಿ ತಾಲೂಕಿನಲ್ಲಿಯೂ ಕನ್ನಡ ಭವನ ,ಹಾಗೂ ಬಯಲು ರಂಗಮಂದಿರ ನಿರ್ಮಾಣ , ಹಿರಿಯ-ಕಿರಿಯ ಸಾಹಿತಿಗಳ ನೂತನ ಕೈಪಿಡಿಯು ಸೇರಿದಂತೆ ಯುವ ಬರಹಗಾರರನ್ನು ಬೆಳೆಸಲು ವೇದಿಕೆ ನಿರ್ಮಾಣ ಮಾಡುತ್ತೇನೆ ಅಲ್ಲದೆ ಶಿಕ್ಷಕರ ,ಮಕ್ಕಳ, ಮಹಿಳಾ, ರಂಗ ,ವೈದ್ಯ ,ಕೃಷಿ ಸಮ್ಮೇಳನಗಳನ್ನು ಏರ್ಪಡಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.ತಾವು ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು ಜೇವರ್ಗಿ ಹಾಗೂ ಯಡ್ರಾಮಿ ಕನ್ನಡ ಸಾಹಿತ್ಯ ಪರಿಷತ್ತಿನ ಮತದಾರರು ತಮ್ಮ ಅಮೂಲ್ಯವಾದ ಮತವನ್ನು ಕ್ರಮ ಸಂಖ್ಯೆ 2ರ ಗುರುತಿಗೆ ನೀಡಲು ಬಿ. ಎಚ್ ನಿರಗುಡಿ ವಿನಂತಿಸಿದ್ದಾರೆ.

Contact Your\'s Advertisement; 9902492681

ಈ ಸಭೆಯಲ್ಲಿ ಮಾಂತಯ್ಯ ಹಿರೇಮಠ್ ,ಶ್ರೀಹರಿ ಕರ್ಕಿಹಳ್ಳಿ, ವೀರೇಶ್ ಕಂದಗಲ್, ಸದಾನಂದ ಪಾಟೀಲ ,ಶಿವಕವಿ ಜೋಗುರ ,ರಾಜು ಮುದ್ದಡಗಿ, ಶಿವಪುತ್ರ ನೆಲ್ಲಗಿ, ರಾಜಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here