ಕಲಬುರಗಿ: ಕರ್ನಾಟಕ ಸಂಘಟನಾ ವೇದಿಕೆ ರಾಜ್ಯ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಗುರುರಾಜ ಬಂಡಿ ಅವರ ಆದೇಶದ ಮೇರೆಗೆ ವೇದಿಕೆಯ ರಾಜ್ಯ ಸಂಚಾಲಕರನ್ನಾಗಿ ಸಿದ್ದು ಖೇಣಿ ಅವರನ್ನು ನೇಮಕ ಮಾಡಲಾಗಿದೆ.
ಕನ್ನಡ ನಾಡು ನುಡಿ ಜಲ ಮತ್ತು ನ್ಯಾಯಕ್ಕಾಗಿ ಸತ್ಯಕ್ಕಾಗಿ ಸಂವಿಧಾನ ಮತ್ತು ಶೋಷಿತರ ಸಂರಕ್ಷಣೆಗಾಗಿ ಹಗಲಿರುಳೆನ್ನದೆ ಪ್ರಾಮಾಣಿಕವಾಗಿ ಹೋರಾಟ ಮಾಡುತ್ತಿರುವುದನ್ನು ನಿಮ್ಮನ್ನು ಗುರುತಿಸಿ ನೇಮಕ ಮಾಡಿ ಆದೇಶ ಹೋರಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಅಧ್ಯಕ್ಷ ಅಣ್ಣಾರಾವ ಮತ್ತಿಮೂಡ, ಉಮೇಶ ಬಿರಾದಾರ, ಜಿಲ್ಲಾಧ್ಯಕ್ಷ ಈಶ್ವರ ಸಾಗರ, ವಿಷ್ಣು ಟೆಂಗಳಿ, ಅಕ್ಷಯ ಉಪಾಧ್ಯಾಯ ಇದ್ದರು.