ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಸುಂಟನೂರ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾಲಯ, ರಾಯಚೂರು, ಎಟಿಜಿಸಿ ಬಯೋಟೆಕ್ ಸಂಸ್ಥೆ, ಹೈದ್ರಾಬಾದ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ತೊಗರಿ ಕಾಯಿ ಕೊರಕ ನಿರ್ವಹಣೆಗೆ ’ಕ್ರೆಮಿಟ್-ಹಿಲಿಯೋ’ ತಂತ್ರಜ್ಞಾನ ಪರಿಚಯದ ತೊಗರಿ ಕ್ಷೇತ್ರೋತ್ಸವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉತ್ಘಾಟಿಸಿ ಮಾತನಾಡಿದ ಆಳಂದ ಮತಕ್ಷೇತ್ರದ ಶಾಸಕರಾದ ಮಾನ್ಯ ಸುಭಾಷ್ ಆರ್. ಗುತ್ತೇದಾರ ಸಾವಯವ ವಿಧಾನದಲ್ಲಿ ಕೀಡೆಗಳ ನಿಯಂತ್ರಣ ಮಾಡಲು ಮೂಲಾಮು ಪೇಷ್ಟ್ ಗಿಡಗಳಿಗೆ ಹಚ್ಚಿ ಪ್ರಯೋಗ ಮಾಡುತ್ತಿರುವುದು ಉತ್ತಮ ತಂತ್ರಜ್ಞಾನ ಇದರಿಂದ ಕೃಷಿಯಲ್ಲಿ ದುಬಾರಿ ವೆಚ್ಚ ಕಡಿಮೆ ಮಾಡಿ ರೈತರಿಗೆ ಪರಿಸರ ಸ್ನೇಹಿ ಕೃಷಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದರು.
ಕೃಷಿ ಮಹಾವಿದ್ಯಾಲಯ, ಕಲಬುರಗಿಯ ಡೀನ್(ಕೃಷಿ) ರಾದ ಡಾ. ಸುರೇಶ ಪಾಟೀಲ್ ರವರು ಮಾತನಾಡಿ ತೊಗರಿ ಬೆಳೆಯ ಸಂಪೂರ್ಣ ತಂತ್ರಜ್ಞಾನವನ್ನು ರೈತರ ಹೊಲದಲ್ಲಿಯೇ ಕೃಷಿ ವಿಜ್ಞಾನಿಗಳು ಪರಿಚಯಿಸುವುದರಿಂದ ಬೆಳೆಯ ಹೊಸ ತಂತ್ರಜ್ಞಾನ ವಿಜ್ಞಾನ ರೈತರಿಗೆ ಸ್ಥಳೀಯ ಮಟ್ಟದಲ್ಲಿ ಹೊಸ ಅರಿವು ಮೂಡಲಿದೆ ಎಂದರು. ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕರಾದ ಡಾ. ಎಂ.ಎಂ. ಧನೋಜಿರವರು ಮಾತನಾಡಿ ಇಂದಿನ ದಿನಗಳಲ್ಲಿ ಹೊಸ ಕೀಟ ರೋಗ ಉದ್ಭವವಾಗಿದ್ದು, ಮುಖ್ಯ ಬೆಳೆಗಳ ಸಮಗ್ರ ನಿರ್ವಹu, ಹೊಸ ತೊಗರಿ ತಳಿಗಳ ಸಂಶೋಧನೆ ನಿರಂತರವಾಗಿ ನಡೆಯಲಿದೆ ಎಂದರು.
ಕೃಷಿ ಇಲಾಖೆಯ ಜಂಟಿ ಉಪ ನಿರ್ದೇಶಕರಾದ ಶ್ರೀಮತಿ ಅನುಸೂಯ ಹೂಗಾರ ಒಂದು ಜಿಲ್ಲೆ ಒಂದು ಬೆಳೆಯ ಉತ್ಪನ್ನದಲ್ಲಿ ತೊಗರಿ ಆಯ್ಕೆಯಾಗಿದ್ದು ರೈತರು ಬೇಳೆಯ ಗಿರಣಿ ಯಂತ್ರಕ್ಕೆ ಕೃಷಿ ಇಲಾಖೆ ರೀಯಾಯಿತಿ ದರದಲ್ಲಿ ಸಹಾಯ ನೀಡಲಿದೆ ಎಂದು ತಿಳಿಸಿದರು.
ಸುಂಟನೂರ ಗ್ರಾಮ ಪಂಚಾಯನ್ ಅಧ್ಯಕ್ಷರಾದ ಸುಜಾತ ಎಸ್. ಸಲಗರ್, ಪಂಚಾಯತ ಅಭಿವೃದ್ದಿ ಅಧಿಕಾರಿ ಜಗದೇವಿ ಪವಾರ, ಎಟಿಜಿಸಿ, ಹೈದ್ರಾಬಾದ ಸಂಸ್ಥೆಯ ಅಧಿಕರಿಗಳಾದ ಡಾ. ಮಾರ್ತಾಂಡಯ್ಯ ಗೋರಂಟ್ಲ, ಡಾ. ಮಣಿಕಂ, ಡಾ. ರಶೀದ, ಡಾ. ವಿ.ಬಿ. ರೆಡ್ಡಿ, ಡಾ. ಮಹಾಂತೇಶ ಕಪಾಸಿ, ಕೃಷಿ ವಿಜ್ಞನಿಗಳಾದ ಡಾ. ರಾಚಪ್ಪಾ ಹಾವೇರಿ, ಡಾ. ಜಹೀರ್ ಅಹೆಮದ್, ಆಳಂದ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಶರಣಗೌಡ ಪಾಟೀಲ್, ನಿಂಬರಗಾ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಯದ ಸುಷ್ಮಾ, ಕೃಷಿ ಸಂಜೀವಿನಿ ಪ್ರಯೋಗಾಲಯದ ಸಂಚಾರಿ ವಾಹನದ ತಾಂತ್ರಿಕ ಅಧಿಕಾರಿಯಾದ ಶ್ರೀ ವರುಣ ಹಾಗೂ ಸುಂಟನೂರ ಮತ್ತು ಸುತ್ತಮುತ್ತಲಿನ ಗ್ರಾಮದ ರೈತರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ತಂತ್ರಜ್ಞಾನ ಅಳವಡಿಸಿದ ರೈತರಿಗೆ ಸನ್ಮಾನಿಸಲಾಯಿತು. ರೈತ ಮುಖಂಡರಾದ ಶ್ರೀ ದಯಾನಂದ ಪಾಟೀಲ್, ಬಾಬುರಾವ ಪಟ್ಟಣ, ವೀರಭದ್ರಪ್ಪಾ ಬೀರಾದಾರ, ಬಾಬುರಾವ ದನ್ನೂರ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕೃಷಿ ವಿಜ್ಞಾನ ಕೇಂದ್ರ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ರಾಜು ಜಿ. ತೆಗ್ಗಳ್ಳಿ ರವರು ಸ್ವಾಗತಿಸಿದರು. ರಾಯಚೂರು ಕೃಷಿ ಮಹಾವಿದ್ಯಾಲಯದ ಕೀಟ ಪ್ರಾದ್ಯಾಪಕರಾದ ಡಾ. ಎ.ಜಿ. ಶ್ರೀನಿವಾಸ ಕ್ರೆಮಿಟ್-ಹಿಲಿಯೋ ತಂತ್ರಜ್ಞಾನದ ಮಾಹಿತಿಯನ್ನು ವಿವರಿಸಿದರು.
ಸಂಶೋಧನಾ ಸಹಾಯಕರಾದ ವೆಂಕಟೇಶ ಹಾಗೂ ಪೂರ್ಣಿಮಾ (ಎಸ್.ಆರ್.ಎಪ್) ರೈತರ ನೋಂದಾಣಿ ಮಾಡಿದರು.