ಡಾ. ಬಾಬಾ ಸಾಹೇಬರ 128ನೇ ಜಯಂತಿ ಆಚರಣೆ

0
88

ಸುರಪುರ: ಭಾರತದ ಪ್ರತಿಯೊಬ್ಬರು ಡಾ. ಬಾಬಾ ಸಾಹೇಬ ಅಂಬೇಡ್ಕರರನ್ನು ಸ್ಮರಿಸಬೇಕಿದೆ,ಜಗತ್ತಿನ ಎಲ್ಲಾ ರಾಷ್ಟ್ರಗಳ ಸಂವಿಧಾನದ ಸಾರವನ್ನು ನಮ್ಮ ದೇಶದ ಸಂವಿಧಾನದಲ್ಲಿ ಅಳವಡಿಸಿದ ಮಹಾನ್ ಗ್ರಂಥ ರಚಿಸಿ ಕೊಟ್ಟ ಅಂಬೇಡ್ಕರರು ಯಾವುದೆ ಧರ್ಮ ಮತ್ತು ಜಾತಿಗೆ ಸೀಮಿತವಾದವರಲ್ಲ ಎಂದು ಗ್ರೇಡ-2 ತಹಸೀಲ್ದಾರ ಸೂಫಿಯಾ ಸುಲ್ತಾನ ಮಾತನಾಡಿದರು. ನಗರದ ತಹಸೀಲ್ದಾರ ಕಚೇರಿಯಲ್ಲಿ ತಾಲ್ಲೂಕಾಡಳಿತದಿಂದ ಹಮ್ಮಿಕೊಂಡಿದ್ದ ಡಾ. ಬಾಬಾ ಸಾಹೇಬ ಅಂಬೇಡ್ಕರರ ೧೨೮ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ್ದ ಹಣಮಂತ್ರಾಯ ಚಂದ್ಲಾಪುರ ಮಾತನಾಡಿ, ಅಂಬೇಡ್ಕರರು ಬದುಕಿನಲ್ಲಿ ಹಲವಾರು ರೀತಿಯ ಸಂಕಷ್ಟಗಳನ್ನು ಅನುಭವಿಸಿ ಈ ದೇಶಕ್ಕೆ ಸಂವಿಧಾನವನ್ನು ಕೊಟ್ಟ ಮಹಾನ್ ವ್ಯಕ್ತಿಯಾಗಿದ್ದಾರೆ, ಅವರು ಬರೆದು ಕೊಟ್ಟಿರುವ ಸಂವಿಧಾನವನ್ನು ಇಂದು ವಿಶ್ವವೆ ಹೋಗಳುತ್ತಿದೆ ಅಲ್ಲದೆ ಅಂಬೇಡ್ಕರರ ಜಯಂತಿಯನ್ನು ವಿಶ್ವಸಂಸ್ಥೆ ವಿಶ್ವ ಜ್ಞಾನದ ದಿನವನ್ನಾಗಿ ಆಚರಿಸುತ್ತಾರೆ. ಇದು ನಮ್ಮ ದೇಶಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಅಂಬೇಡ್ಕರರ ಜನ್ಮ ದಿನ ಎಂದರೆ ಅದು ಭಾರತಕ್ಕೆ ಬೆಳಕು ಬಂದ ದಿನವಾಗಿದೆ ಎಂದರು.

Contact Your\'s Advertisement; 9902492681

ಮತ್ತೋರ್ವ ಉಪನ್ಯಾಸಕರಾಗಿದ್ದ ಶಿವಕುಮಾರ ಅಮ್ಮಾಪುರ ಮಾತನಾಡಿ, ಅಂಬೇಡ್ಕರರು ಜಾತಿ ಮುಕ್ತ ಸಮಾಜ ನಿರ್ಮಾಣದ ಕನಸು ಕಂಡವರು,ಎಲ್ಲಾ ರಂಗಗಳ ಬಗ್ಗೆ ಚಿಂತನೆ ನಡೆಸಿದ ವ್ಯಕ್ತಿ, ಅಲ್ಲದೆ ಬುದ್ದ ಬಸವಣ್ಣನವರ ಆಶಯವನ್ನು ನೆರವೇರಿಸಲು ಶ್ರಮಿಸಿದ ಮಹಾನ್ ಪುರುಷ ಅಂಬೇಡ್ಕರರು ಎಂದರು. ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿದ್ದ ಪದವಿ ಕಾಲೇಜಿನ ಉಪನ್ಯಾಸಕ ಬಲಭೀಮ ದೇಸಾಯಿ ಹಾಗು ವಿದ್ಯಾರ್ಥಿನಿ ಸಾಕ್ಷಿ ಅಂಬೇಡ್ಕರರ ಕುರಿತು ಮಾತನಾಡಿದರು.

ಕಾರ್ಯಕ್ರಮ ಆರಂಭಕ್ಕು ಮುನ್ನ ಅಂಬೇಡ್ಕರರ ಅಭಿಮಾನಿಗಳು ರಾಜಾ ವೆಂಕಟಪ್ಪ ನಾಯಕ ವೃತ್ತದಿಂದ ಅಂಬೇಡ್ಕರ ವೃತ್ತದ ವರೆಗೆ ಬೈಕ್ ರ‍್ಯಾಲಿ ನಡೆಸಿದರು.ನಂತರ ನಡೆದ ಕಾರ್ಯಕ್ರಮದ ಆರಂಭದಲ್ಲಿ ಅಂಬೇಡ್ಕರರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸತ್ಯನಾರಾಯಣ ದರಬಾರಿ,ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕಲ ಅಧಿಕಾರಿ ಜಗದೇವಪ್ಪ ವೇದಿಕೆ ಮೇಲಿದ್ದರು. ಬಿಇಒ ನಾಗರತ್ನ ಓಲೆಕಾರ, ಅರಣ್ಯಾಧಿಕಾರಿ ಶರಣಪ್ಪ ಕುಂಬಾರ,ವಿವಧ ಸಂಘಟನೆಗಳ ಮುಖಂಡರಾದ ಆದಪ್ಪ ಹೊಸ್ಮನಿ, ಮಾನಪ್ಪ ಕಟ್ಟಿಮನಿ, ನಾಗಣ್ಣ ಕಲ್ಲದೇವನಹಳ್ಳಿ, ರಾಹುಲ್ ಹುಲಿಮನಿ, ಮೂರ್ತಿ ಬೊಮ್ಮನಹಳ್ಳಿ, ಭೀಮರಾಯ ಸಿಂಧಗೇರಿ, ತಿಪ್ಪಣ್ಣ ಶೆಳ್ಳಿಗಿ,ಶಿವಲಿಂಗ ಹೊಸಮನಿ, ಧರ್ಮರಾಜ ಬಡಿಗೇರ, ರಮೇಶ ಅರಕೇರಿ, ನಂದಣ್ಣ ಬಾಂಬೇಕರ್, ಭಿಮರಾಯ ಕಡಿಮನಿ, ಮಲ್ಲಿಕಾರ್ಜುನ ವಾಗಣಗೇರಾ, ಸಾಹೇಬಗೌಡ, ಎಂ.ಎಸ್. ಹಿರೇಮಠ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here