ಕಲ್ಯಾಣ ನಾಡು ವಿಕಾಸ ವೇದಿಕೆ ವಿವಿಧ ಬೇಡಿಕೆ ಈಡೆರಿಸುವಂತೆ ತೇಲ್ಕೂರಗೆ ಮನವಿ

0
13

ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವತಿಯಿಂದ ಕಲಬುರಗಿ ಜಿಲ್ಲೆಗೆ ಸಂಬಂಧಿಸಿದ ಹಲವಾರು ಅಭಿವೃದ್ಧಿಪರ ಹಾಗೂ ಜನಪರ ಬೇಡಿಕೆಗಳು ಈಡೇರಿಸುವಂತೆ ಕಲ್ಯಾಣ ನಾಡು ವಿಕಾಸ ವೇದಿಕೆ ಕಾರ್ಯಕರ್ತರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಕಲಬುರಗಿ ನಗರದ ಸೂಪರ್ ಮಾರ್ಕೆಟ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ನೂತನ ನಗರ ಸಾರಿಗೆ ಬಸ್ ನಿಲ್ದಾಣದ ಕಾಮಗಾರಿಯನ್ನು ಬೇಗನೆ ಪೂರ್ಣಗೊಳಸಬೇಕು. ಇದು ಗ್ರಾಮೀಣ ಹಾಗೂ ನಗರದ ಜನತೆಗೆ ಅತಿ ಅವಶ್ಯವಾಗಿದೆ. ಕಾಮಗಾರಿಯು ನಿಧಾನಗತಿಯಿಂದ ನಡೆಯುತ್ತಿದ್ದು, ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಬಸ್ ನಿಲ್ದಾಣದ ಕಾಮಗಾರಿಯನ್ನು ಬೇಗನೆ ಪೂರ್ಣಗೊಳಿಸಿ ಜನರಿಗೆ ಅನೂಕುಲ ಮಾಡಿಕೊಡಬೇಕು. ನಗರ ಸಾರಿಗೆ ಬಸ್ ನಿಲ್ದಾಣಕ್ಕೆ ರಾಷ್ಟ್ರಕೂಟ ದೊರೆ ಶ್ರೀ ಅಮೋಘವರ್ಷ ನೃಪತುಂಗನ ಹೆಸರಿಡಬೇಕು.

Contact Your\'s Advertisement; 9902492681

ನೂತರ ಬಸ್ ನಿಲ್ದಾಣದ ನಿರ್ಮಾಣ: ಕಲಬುರಗಿ ನಗರದ ನೇಹರೂ ಗಂಜ ಹಾಗೂ ಬಂಬೂ ಬಜಾರ ಪ್ರದೇಶದಲ್ಲಿ ಬಸ್ ನಿಲ್ದಾಣವಿಲ್ಲದೆ ಜನರು ಪರದಾಡುವಂತಾಗಿದೆ. ಜೊತೆಗೆ ಮಳೆಗಾಲ ಹಾಗೂ ಬೇಸಿಗೆ ಕಾಲದಲ್ಲಿ ಜನರಿಗೆ ಅತೀವ ತೊಂದರೆಯಾಗುತ್ತಿದೆ. ಆದ್ದರಿಂದ ನೇಹರೂ ಗಂಜ ಹಾಗೂ ಬಂಬೂ ಬಜಾರ ಪ್ರದೇಶದಲ್ಲಿ ಬಸ್ ನಿಲ್ದಾಣ ನಿರ್ಮಿಸುವ ಮೂಲಕ ಜನರಿಗೆ ಅನೂಕುಲ ಮಾಡಿಕೊಡಬೇಕು.?ಮತ್ತು ಶಹಾಬಾದ ಜಿಲ್ಲೆಯ ಅತೀ ದೊಡ್ಡ ಪಟ್ಟಣ, ಕೈಗಾರಿಕಾ ಕೇಂದ್ರ ಹಾಗೂ ನೂತನ ತಾಲೂಕು ಕೇಂದ್ರ ಶಹಾಬಾದನಲ್ಲಿ ಬಸ್ ಘಟಕ ಆರಂಭಿಸಬೇಕು. ನೂತನ ತಾಲೂಕು ಕೇಂದ್ರಗಳಾದ ಕಮಲಾಪೂರ ಹಾಗೂ ಯಡ್ರಾಮಿ ಪಟ್ಟಣಗಳಲ್ಲಿ ಹೊಸ ಬಸ್ ಘಟಕಗಳನ್ನು ಆರಂಭಿಸಬೇಕು.

ಕಲಬುರಗಿ ಜಿಲ್ಲೆಯ ಪ್ರಶಿದ್ಧ ಯಾತ್ರಾ ಸ್ಥಳವಾದ ದೇವಲಗಾಣಗಾಪೂರ ಪಟ್ಟಣಕ್ಕೆ ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಹಾಗೂ ದೇಶದ ಹಲವು ರಾಜ್ಯಗಳಿಂದ ಯಾತ್ರಾರ್ಥಿಗಳು ಆಗಮಿಸಿರುತ್ತಾರೆ. ಇಲ್ಲಿ ಬಸ್ ಘಟಕ ಆರಂಭಿಸಿದರೆ ಸಂಸ್ಥೆಯವರಿಗೆ ಲಾಭದ ಜೊತೆಗೆ ಯಾತ್ರಾ ಸ್ಥಳದ ಅಭಿವೃದ್ಧಿಗೆ ಸಹಾಯ ಮಾಡಿದಂತಾಗುತ್ತದೆ. ದೇವಲಗಾಣಗಾಪೂರ ದಿಂದ ರಾಜ್ಯದ ಇತರೆ ಯಾತ್ರಾ ಸ್ಥಳಗಳಿಗೆ ನೇರವಾದ ಬಸ್ ಸೌಲಭ್ಯವನ್ನು ಕಲ್ಪಿಸಬಹುದಾಗಿದೆ. ಕಲಬುರಗಿ ನಗರಕ್ಕೆ ಐರಾವತ ಕ್ಲಬ್ ಕ್ಲಾಸ್ ಬಸ್ಸಿನ ಸೇವೆ: ರಾಜ್ಯದ ಪ್ರಮುಖ ನಗರಗಳಿಗೆ ಐರಾವತ ಕ್ಲಬ್ ಕ್ಲಾಸ್ ಹಾಗೂ ಅಂಬಾರಿ ಡ್ರೀಮ್ ಕ್ಲಾಸ್ ಬಸ್ಸಿನ ಸೌಲಭ್ಯವಿದ್ದು ಕಲಬುರಗಿ ಮಹಾನಗರಕ್ಕೆ ಮಾತ್ರ ಈ ಸೌಲಭ್ಯವಿಲ್ಲ ಕಲಬುರಗಿ ಮಹಾನಗರವು ವಿಭಾಗಿಯ ಕೇಂದ್ರವಾಗಿದ್ದು, ಯಾತ್ರಾ ಸ್ಥಳ ಹಾಗೂ ಪ್ರಮುಖ ಕೈಗಾರಿಕಾ ನಗರವಾಗಿದೆ. ಅದಕ್ಕಾಗಿ ಕಲಬುರಗಿಯಿಂದ ಬೆಂಗಳೂರು (ವಾಯ್ ಬಳ್ಳಾರಿ), ಮಂಗಳೂರು (ವಾಯ್ ಹುಬ್ಬಳ್ಳಿ ಮತ್ತು ಶಿವಮೊಗ್ಗ), ಪಣಜಿ (ವಾಯ್ ಬೆಳಗಾವಿ), ಮುಂಬೈ (ವಾಯ್ ಪುಣೆ) ನಗರಗಳಿಗೆ ಈ ಮೇಲಿನ ಬಸ್ ಸೇವೆಯನ್ನು ಜಿಲ್ಲೆಯ ಜನತೆಗೆ ಒದಗಿಸಬೇಕು.

ಕಲಬುರಗಿ ನಗರದಿಂದ ಕರ್ನಾಟಕ ರಾಜ್ಯದ ವಿವಿಧ ಯಾತ್ರಾಸ್ಥಳಗಳಿಗೆ ಬಸ್ಸಿನ ಸೌಲಭ್ಯ ಕಲ್ಪಿಸುವುದು: ಉಳವಿ, ಜೋಗ, ಶಿರಸಿ, ಗೋಕರ್ಣ, ಮುರಡೇಶ್ವರ, ಕೊಲ್ಲುರು, ಹೊರನಾಡು, ಶ್ರೀಂಗೇರಿ, ಮುಡಬಿದರೆ, ಕುಕ್ಕೆ, ಕಲಬುರಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಮುಖ ನಗರಗಳ ಹೆಸರು ಸೂಚನಾ ಫಲಕದಲ್ಲಿ ಇಲ್ಲ. ಅದನ್ನು ಸರಿಪಡಿಸಬೇಕು ಉದಾ: ಕರ್ನಾಟಕದ ನಗರಗಳಾದ ಬಾಗಲಕೋಟೆ, ಜಮಖಂಡಿ, ಇಳಿಕಲ್, ಸೌದತ್ತಿ, ಬೈಲ್‌ಹೊಂಗಲ್, ಅಥಣಿ, ಚಿಕ್ಕೋಡಿ, ಗೋಕಾಕ್, ಸಂಕೇಶ್ವರ, ನಿಪ್ಪಾಣಿ, ಗದಗ, ಹಾವೇರಿ, ಕೊಪ್ಪಳ, ಲಿಂಗಸೂರು, ಮುದ್ದೆಬಿಹಾಳ, ಕುಷ್ಟಗಿ, ಗಜೇಂದ್ರಗಡ, ರೋಣ, ಗಂಗಾವತಿ, ಮಾನ್ವಿ, ಹಿರಿಯೂರು, ಚಳ್ಳಕೇರೆ, ಸಿರಗುಪ್ಪಾ, ತುಮಕೂರು, ಮೈಸೂರು, ಚಿತ್ರದುರ್ಗ, ಚಿಕ್ಕಮಂಗಳೂರು, ಉಡಪಿ, ಕಾರವಾರ, ಶಿರಸಿ, ಭಟ್ಕಳ್ ಮತ್ತು ಮಹಾರಾಷ್ಟ್ರದ ನಗರಗಳಾದ ಅಕ್ಕಲಕೋಟ, ಉಮ್ಮರಗಾ, ಭೀಡ, ಉಸ್ಮಾನಾಬಾದ, ಪಂಡರಾಪೂರ, ಅಹೇಮದ ನಗರ, ಮೀರಜ್, ಸಾಂಗಲಿ, ಸಾತಾರಾ, ಈ ಹೆಸರುಗಳು ನಿಲ್ದಾಣದ ಸೂಚನಾ ಫಲಕದಲ್ಲಿ ಇರುವುದಿಲ್ಲ. ಇವುಗಳನ್ನು ಕೂಡಲೇ ಸೂಚನಾ ಫಲಕದಲ್ಲಿ ಸೇರ್ಪಡೆ ಮಾಡಬೇಕು.

ವಿವಿಧ ಬೇಡಿಕೆಗಳನ್ನು ಈಡೆರಿಸುವ ಮೂಲಕ ಕಲಬುರಗಿ ಜಿಲ್ಲೆಯ ಜನರಿಗೆ ಒಳ್ಳೆಯ ಸಾರಿಗೆ ಸೇವೆಯನ್ನು ಒದಗಿಸಬೇಕೆಂದು ಕಲ್ಯಾಣ ನಾಡು ವಿಕಾಸ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಮುತ್ತಣ್ಣ ಎಸ್. ನಡಗೇರಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಬಾಬು ಮದನಕರ್, ಜಿಲ್ಲಾ ಉಪಾಧ್ಯಕ್ಷರಾದ ಅನೀಲ ಕಪನೂರ, ಸಂಘಟಕರಾದ ಗೌತಮ ಕರಿಕಲ್, ಉದಯಕುಮಾರ ಖಣಗೆ, ಸಾಗರ ಪಾಟೀಲ, ಸೂರ್ಯಪ್ರಕಾಶ ಚಾಳಿ, ಜೈಭೀಮ ಮಾಳಗೆ, ಪ್ರವಿಣ ಖೇಮನ್, ಸಿದ್ಧಲಿಂಗ ಉಪ್ಪಾರ, ನಾಗೂ ಡೊಂಗರಗಾಂವ, ಮಹೇಶ ಮಾನೆ, ವಿಠ್ಠಲ ಬಿಂಗೆ, ದೇವುದೋರೆ, ರಾಕೇಶ ದೊಡ್ಡಮನಿ, ಪಿಂಟು ಬೋಧನ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here