ಜೇವರ್ಗಿ : ಇಲ್ಲಿನ ಜೇರಟಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ವತಿಯಿಂದ 73 ನೇ ಗಣರಾಜ್ಯೋತ್ಸವ ಅಂಗವಾಗಿ ಸರ್ಕಾರಿ ಶಾಲೆಗಳಿಗೆ ರಾಕ್ಸ್ ವಿತರಣೆ ಮಾಡಲಾಯಿತು.ಜೇರಟಗಿ ಗ್ರಾಮದ ಸುತ್ತಮುತ್ತ ಇರುವ ಸರ್ಕಾರಿ ಶಾಲೆಗಳಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಜೇರಟಗಿ (PNB) ಇವರ ವತಿಯಿಂದ ರೈಕ್ಸ್ ವಿತರಿಸಿದರು.
ಮಕ್ಕಳಿಗೆ ಸರ್ಕಾರದಿಂದ ಹಲವಾರು ರೀತಿಯ ಸೌಲಭ್ಯಗಳು ಬಂದಿರುತ್ತವೆ ಆದರೆ ಮಕ್ಕಳಿಗೆ ಆ ಸೌಲಭ್ಯಗಳು ದೊರೆಯುತ್ತಿಲ್ಲ . ಅಲ್ಲದೇ ಇಲ್ಲಿನ ಸ್ಥಳೀಯ ಬ್ಯಾಂಕ್ ವಿದ್ಯಾರ್ಥಿಗಳ ಸಹಕಾರಕ್ಕೆ ಮುಂದಾಗಿದ್ದು ಸಂತಸದ ಸಂಗತಿಯಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ ವತಿಯಿಂದ ರೈಕ್ಸ್ ವಿತರಣೆ ಮಾಡಿ ಗ್ರಾಮೀಣ ಮಟ್ಟದ ಶಾಲೆಗಳಲ್ಲಿನ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸಲಾಗಿದೆ. ಇಂದು ಶಾಲೆಯ ಮುಖ್ಯಗುರುಗಳು ತಿಳಿಸಿದ್ದಾರೆ.